Home uncategorized ಧಾರವಾಡದ ಹೇಮಾ ಮಾಲಿನಿ ವಿಧಿವಶ.

ಧಾರವಾಡದ ಹೇಮಾ ಮಾಲಿನಿ ವಿಧಿವಶ.

ಧಾರವಾಡ : ಧಾರವಾಡದ ಹೇಮಾ ಮಾಲಿನಿ ಎಂದೆ ಹೆಸರಾಗಿದ್ದ ಇಂದೂಬಾಯಿ ವಾಜಪೇಯಿ ದೀರ್ಘ ಕಾಲಿನ ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ. ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಇಂದೂಬಾಯಿ ಅಲಿಯಾಸ್ ಹೇಮಾ ಮಾಲಿನಿ ಕರ್ನಾಟಕ ವಿಶ್ವವಿಧ್ಯಾಲಯದಿಂದ ಇಂಗ್ಲಿಷ್ ವಿಷಯದಲ್ಲಿ 4 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಪ್ರೋಫೆಸರ್ ಆಗಿ ಬದುಕು ಕಟ್ಟಿಕೊಳ್ಳಬೇಕಿದ್ದ ಇಂದೂಬಾಯಿ ಪ್ರೇಮಪಾಶದಲ್ಲಿ ಬಿದ್ದು ಕಡೆಗೆ ಪ್ರೀತಿ ವಿಫಲವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಧಾರವಾಡದ ನಿವಾಸಿಯಾಗಿದ್ದ ಇಂದೂಬಾಯಿ ಅಲಿಯಾಸ್ ಹೇಮಾ ಮಾಲಿನಿ ಜೊತೆ ಕಲಿತವರೆಲ್ಲ ಇದೀಗ ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾದ ಮೇಲೆ ಧಾರವಾಡದ ಪ್ರತಿ ಬೀದಿ ಸುತ್ತುತ್ತಿದ್ದ ಇಂದೂಬಾಯಿಗೆ ಧಾರವಾಡದ ಜನ ಹೇಮಾ ಮಾಲಿನಿ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಹೇಮಾ ಮಾಲಿನಿ ಹಾಗೇ ವಸ್ತ್ರ ಧರಿಸುತ್ತಿದ್ದ ಮತ್ತು ಹಿಂದಿ ಚಿತ್ರ ನಟಿ ಹೇಮಾ ಮಾಲಿನಿಯ ಬಹು ದೊಡ್ಡ ಅಭಿಮಾನಿಯಾಗಿದ್ದ ಇಂದೂಬಾಯಿ , ಹೇಮಾ ಮಾಲಿನಿ ನಟಿಸಿದ್ದ ಸಿನೆಮಾಗಳನ್ನು ತಪ್ಪದೇ ನೋಡುತ್ತಿದ್ದರು ಎನ್ನಲಾಗಿದೆ. ಇಂಗ್ಲಿಷ್ ನಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಇಂದೂಬಾಯಿ ವಾಜಪೇಯಿ, ಪ್ರತಿನಿತ್ಯ ಪತ್ರಿಕೆಗಳನ್ನು ನೋಡುತ್ತಾ ಆಗುಹೋಗುಗಳನ್ನು ಗಮನಿಸುತ್ತಿದರು. ಹೇಮಾ ಮಾಲಿನಿ ಧಾರವಾಡದ ಇತಿಹಾಸದ ಪುಟಗಳಲ್ಲಿ ತನ್ನ ಪಾತ್ರದ ಪುಟವೊಂದನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಧೀರ್ಘ ಕಾಲಿನ ಅನಾರೋಗ್ಯದಿಂದ ಕಣ್ಮರೆಯಾದ ಹೇಮಾ ಮಾಲಿನಿ ಅಲಿಯಾಸ್ ಇಂದೂಬಾಯಿ ಹಾಡುತ್ತಿದ್ದ “ಖೋಯಾ ಖೋಯಾ ಚಾಂದ್ ” ಹಾಡು ಪ್ರತಿಯೊಬ್ಬರ ಬಾಯಲ್ಲಿ ರಿಂಗಣಿಸುತ್ತಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದರೂ ಸಹ ಯಾರಿಗೂ ತೊಂದರೆ ಕೊಡದ ಇಂದೂಬಾಯಿ ನಾಲ್ಕು ವರ್ಷಗಳಿಂದ ಕೊಪ್ಪಳದ ವೃದ್ದಾಶ್ರಮದಲ್ಲಿದ್ದರು. ಧಾರವಾಡಿಗರಿಗೆ ಅಚ್ಚುಮೆಚ್ಚಿನವರಾಗಿದ್ದ ಧಾರವಾಡದ ಹೇಮಾ ಮಾಲಿನಿ ಇನ್ನು ನೆನಪು ಮಾತ್ರ.

LEAVE A REPLY

Please enter your comment!
Please enter your name here

- Advertisment -

Most Popular

ಕರೋನಾ ಲಸಿಕೆ ಬಂದಿರುವುದು ಸಂತೋಷ : ಯು.ಟಿ.ಖಾದರ್

ಬೆಂಗಳೂರು: ಕೊರೋನಾ ಲಸಿಕೆ ವಿತರಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ ಮೊದಲು ಗ್ರೂಪ್ ಡಿ ನೌಕರರ ಮೇಲೆ ಯಾಕೆ ಪ್ರಯೋಗ ಮಾಡಬೇಕು....

‘ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆ’

ಕಲಬುರಗಿ: ಕಲಬುರಗಿಯಲ್ಲಿ ನಗರದ ಜಿಮ್ಸ್ ಕಾಲೇಜಿನಲ್ಲಿ ಸಂಸದ ಉಮೇಶ್ ಜಾಧವ್ ಕೊವಿಡ್ ವ್ಯಾಕ್ಸಿನ್ ಗೆ ಚಾಲನೆ ನೀಡಿದರು. ಜಿಲ್ಲೆಯ 8 ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಗೆ ಚಾಲನೆ ನೀಡಲಾಯಿತು. ಒಂದು ಕೇಂದ್ರದಲ್ಲಿ 100...

‘ಡಿ ಗ್ರೂಪ್‌ ನೌಕರ ಚಂದ್ರಶೇಖರ್‌ಗೆ ಮೊದಲ ಲಸಿಕೆ ವಿತರಣೆ’

ಬೆಂಗಳೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಅಟೆಂಡರ್ ನಾಗರತ್ನಾಗೆ ಲಸಿಕೆ ನೀಡಿ  ಹೂ ಗುಚ್ಛ ನೀಡಿ ಅಭಿನಂದಿಸಿದರು. ಜೊತೆ ಆರೋಗ್ಯ...

‘ಲಸಿಕೆ ವಿತರಣೆಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ’

ಬೆಂಗಳೂರು: ಜಗತ್ತಿನ ಅತಿ ದೊಡ್ಡ ಕೊವಿಡ್ ಲಸಿಕೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು. ಅತಿ ಕಡಿಮೆ ದಿನದಲ್ಲಿ ಮಹಾಮಾರಿ ಕೊರೋನಾ ಗೆ ವಿಜ್ಞಾನಿಗಳು ಎರಡು ಲಸಿಕೆಯನ್ನು ಸಿದ್ಧ ಪಡಿಸಿದ್ದಾರೆ....

Recent Comments