ಮಾರುಕಟ್ಟೆಯಲ್ಲಿ ದರ್ಶನ್​ ಶರ್ಟ್ಸ್​ ಹವಾ.. !

0
207

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಟಾಂಡಲ್ವುಡ್​ನ ಸ್ಟಾರ್ ನಟ. ಕ್ಲಾಸ್ ಅಂಡ್ ಮಾಸ್​ ಹೀರೋ ದಚ್ಚು ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಈ ವರ್ಷ ಯಜಮಾನ, ಕುರುಕ್ಷೇತ್ರದಂಥಾ ಹಿಟ್ ಸಿನಿಮಾಗಳನ್ನು ಕೊಟ್ಟಿರೋ ಡಿ.ಬಾಸ್ ಸದ್ಯ ‘ರಾಬರ್ಟ್​’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ‘ಒಡೆಯ’ ಸಿನಿಮಾ ರಿಲೀಸಿಗೆ ರೆಡಿಯಾಗಿದೆ.
ಇನ್ನು ದರ್ಶನ್ ಮೇಲಿನ ಅಭಿಮಾನವನ್ನು ಅಭಿಮಾನಿಗಳು ಟ್ಯಾಟೂ ಹಾಕಿಕೊಳ್ಳುವುದು ಸೇರಿದಂತೆ ನಾನಾ ರೀತಿಯಲ್ಲಿ ತೋರಿಸುತ್ತಾರೆ. ಈಗ ದರ್ಶನ್ ಸಿನಿಮಾ ಮೇಲಿನ ಕ್ರೇಜಿನಿಂದ ಅವರ ಚಿತ್ರಗಳಿಗೋ ಶರ್ಟ್ಸ್​​ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಚಕ್ರವರ್ತಿ, ಬೃಂದಾವನ ಮೊದಲಾದ ಸಿನಿಮಾಗಳಲ್ಲಿ ದರ್ಶನ್ ಲುಕ್​ ಒಳಗೊಂಡಿರುವ ಶರ್ಟ್ಸ್​​ ಮಾರುಕಟ್ಟೆಗೆ ಬಂದಿವೆ. ಈ ಶರ್ಟ್​​ಗಳಿಗೆ ಫಿದಾ ಆಗಿದ್ದಾರೆ ದರ್ಶನ್ ಫ್ಯಾನ್ಸ್.

LEAVE A REPLY

Please enter your comment!
Please enter your name here