Home ಸಿನಿ ಪವರ್ ಮಂಡ್ಯದಲ್ಲಿ ಗೆದ್ದಿರೋ ಸುಮಲತಾರನ್ನು ದರ್ಶನ್​, ಯಶ್ ಏನಂತ ಕರೆದ್ರು ಗೊತ್ತಾ?

ಮಂಡ್ಯದಲ್ಲಿ ಗೆದ್ದಿರೋ ಸುಮಲತಾರನ್ನು ದರ್ಶನ್​, ಯಶ್ ಏನಂತ ಕರೆದ್ರು ಗೊತ್ತಾ?

ಲೋಕಸಭಾ ಚುನಾವಣೆ ಫಲಿತಾಂಶ ಬಂದು ಮೂರ್ನಾಲ್ಕು ದಿನಗಳಾದ್ರೂ ಮಂಡ್ಯ ರಣಕಣದ ಸುದ್ದಿಗಳು ಕಮ್ಮಿ ಆಗಿಲ್ಲ. ಲೋಕ ಸಮರಕ್ಕೂ ಮುನ್ನ ಇಡೀ ರಾಷ್ಟ್ರದ ಗಮನ ಸೆಳೆದ ಕ್ಷೇತ್ರ ಮಂಡ್ಯ. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರಸ್ವಾಮಿ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ರಣಕಣ ಮಂಡ್ಯ.
ಭಾರಿ ಕುತೂಹಲ ಮೂಡಿಸಿದ್ದ ಈ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ನಿಖಿಲ್​ ಕುಮಾರಸ್ವಾಮಿ ಅವರ ವಿರುದ್ಧ 1ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಸುಮಲತಾ ಅವರ ಪರವಾಗಿ ‘ಜೋಡೆತ್ತು’ಗಳಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಮಾಡಿದ್ದು ಗೊತ್ತೇ ಇದೆ. ‘ನಾವು ಸ್ಟಾರ್​ಗಳಾಗಿ ಪ್ರಚಾರ ಮಾಡ್ತಿಲ್ಲ. ಮನೆ ಮಕ್ಕಳಾಗಿ ಪ್ರಚಾರ ಮಾಡ್ತಿದ್ದೇವೆ’ ಅಂದಿದ್ದ ದರ್ಶನ್ -ಯಶ್ ಅಂಬಿ ಫ್ಯಾಮಿಲಿಗೆ ಬಹಳ ಹತ್ತಿರವಿದ್ದಾರೆ. ಸುಮಲತಾ ಅವರ ಪ್ರಚಾರದಲ್ಲಿ ಇವರಿಬ್ಬರ ಪಾತ್ರವೂ ಬಹುಮುಖ್ಯವಾಗಿದೆ.
ಸುಮಲತಾ ಅವರ ಗೆಲುವು ಸಹಜವಾಗಿ ದರ್ಶನ್ ಮತ್ತು ಯಶ್ ಹಾಗೂ ಅವರ ಫ್ಯಾನ್ಸ್​​​ಗೆ ತುಂಬಾ ಖುಷಿ ಕೊಟ್ಟಿದೆ. ಹೀಗಿರುವಾಗ ಸುಮಲತಾ ಅವರ ಗೆಲುವಿನ ಸುದ್ದಿ ಕೇಳುತ್ತಿದ್ದಂತೆ ದರ್ಶನ್ ಮತ್ತು ಯಶ್ ಅವರ ಫಸ್ಟ್ ರಿಯಾಕ್ಷನ್​ ಹೇಗಿತ್ತು ಅಂತ ತಿಳಿಯೋ ಕುತೂಹಲ ಎಲ್ರಿಗೂ ಇರುತ್ತೆ. ದರ್ಶನ್ ಮತ್ತು ಯಶ್ ಸುಮಲತಾ ಅವರಿಗೆ ಕರೆ ಮಾಡಿ ಏನಂತ ಕರೆದ್ರು ಗೊತ್ತಾ?
ಸುಮಲತಾ ಅಂಬರೀಶ್ ಅವರು ಗೆದ್ದಿದ್ದಾರೆ ಅನ್ನೋ ಸುದ್ದಿ ಹೊರ ಬೀಳುತ್ತಿದ್ದಂತೆ ಅವರಿಗೆ ಕಾಲ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ‘ಮದರ್ ಇಂಡಿಯಾ ಎಂಪಿ’ ಅಂತ ಕರೆದು ವಿಶ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್​ ಸ್ಟಾರ್ ಯಶ್, ‘ನಮಸ್ತೇ ಎಂಪಿ ಮೇಡಂ’ ಅಂತ ಕರೆದು ವಿಶ್ ಮಾಡಿದ್ದಾರೆ ಅಂತ ತಿಳಿದುಬಂದಿದೆ.
ಇನ್ನು ದರ್ಶನ್ ಸದ್ಯ ರಾಬರ್ಟ್ ಶೂಟಿಂಗ್​ನಲ್ಲೂ, ಯಶ್​​ ಕೆಜಿಎಫ್​-2 ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments