ರಿಲೀಸ್​ಗೂ ಮುನ್ನವೇ ದಾಖಲೆ ಬರೆದ ‘ಯಜಮಾನ’..!

0
394

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಮಾರ್ಚ್​ 1ರಂದು ರಿಲೀಸ್ ಆಗಲಿದೆ. ರಿಲೀಸ್​ಗೂ ಮುನ್ನವೇ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಬಾಕ್ಸ್​ ಆಫೀಸನಲ್ಲಿ ಭರ್ಜರಿ ಸೌಂಡು ಮಾಡೋದು ಪಕ್ಕಾ ಅಂತ ದಾಖಲೆ ಸಾರಿದೆ.

ಸ್ಯಾಂಡಲ್​ವುಡ್ ಐರಾವತ ದರ್ಶನ್ ‘ಯಜಮಾನ’ನ ದಾಖಲೆಗೆ ಖುಷಿಯಾಗಿದ್ದು, ಅಭಿಮಾನಿಗಳ ಜೊತೆ ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ.

ಭಾನುವಾರ ರಿಲೀಸ್​ ಆದ ‘ಯಜಮಾನ’ ಟ್ರೇಲರ್ 48 ಗಂಟೆ ಆಗುವಷ್ಟರಲ್ಲಿ 11 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಿಸಲ್ಪಟ್ಟಿದೆ.  ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ನಂಬರ್ 1 ಪ್ಲೇಸ್​ನಲ್ಲಿದ್ದ ಟ್ರೇಲರ್ ಇವತ್ತು ಕೂಡ ನಂಬರ್ 1 ಸ್ಥಾನದಲ್ಲೇ ಸೌಂಡು ಮಾಡ್ತಿದೆ. ಇದರಿಂದ ದರ್ಶನ್ ಅಭಿಮಾನಿಗಳೂ ಫುಲ್ ಖುಷಿಯಾಗಿದ್ದಾರೆ. ನೆಚ್ಚಿನ ನಟನ ಜೊತೆ ಕೇಕ್ ಕತ್ತರಿಸಿ ಸಂತೋಷ ಹಂಚಿಕೊಂಡಿದ್ದಾರೆ.

ಡಿ.ಕಂಪನಿ ಟ್ವೀಟರ್​ನಲ್ಲಿ ಈ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದೆ. ‘ಹೊಸ ದಾಖಲೆ ಬರೆದ ಬಾಕ್ಸ್ ಆಫೀಸ್ ಸುಲ್ತಾನ್ @dasadarshan ರವರ ಮೋಸ್ಟ್ ಎಕ್ಸ್ಪೆಕ್ಟೆಡ್ ‘ಯಜಮಾನ’ ಖಡಕ್ ಟ್ರೇಲರ್​ ಸೂಪರ್​. ಕೇಕ್ ಕತ್ತರಿಸುವ ಮೂಲಕ ಚಿತ್ರತಂಡ ಹಾಗೂ ಅಭಿಮಾನಿಗಳೊಂದಿಗೆ ಸಿಹಿ ಹಂಚಿಕೊಂಡ ಡಿ ಬಾಸ್ ನಡೆದರೇ ತೇರು, ವೈಭವ ಜೋರು!!! ತಡೆಯೋರು ಯಾರು, ಆರ್ಭಟ ನೋಡು’ ಅಂತ ಟ್ವೀಟ್ ಮಾಡಿದೆ.

 

 

LEAVE A REPLY

Please enter your comment!
Please enter your name here