ರಾಬರ್ಟ್-ಟೋನಿ ಪೋಸ್ಟರ್ ರಿಯಲ್ ಅಲ್ವಾ?

0
229

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗಳೇ ಹಾಗೆ ಸೆಟ್ಟೇರೋದಿರಲಿ, ಟೈಟಲ್​ ಫಿಕ್ಸ್ ಆಗೋ ಮೊದಲೇ ಸದ್ದು ಮಾಡುತ್ತವೆ. ದರ್ಶನ್ ಅವರ ಒಂದು ಸಿನಿಮಾ ರಿಲೀಸ್ ಆಗ್ತಿದೆ ಅಂದಾಗ ಆ ಸಿನಿಮಾ ಬಗ್ಗೆ ಚರ್ಚೆಗಳು ನಡೆಯುವುದರ ಜೊತೆಗೆ ಮುಂದಿನ ಸಿನಿಮಾ ಯಾವ್ದು ಅನ್ನೋ ಟಾಕ್ ಶುರುವಾಗುತ್ತೆ.

ಮಾರ್ಚ್​ 1ಕ್ಕೆ ರಿಲೀಸ್ ಆದ ‘ಯಜಮಾನ’ 100 ದಿನಗಳನ್ನು ಪೂರೈಸಿ ಯಶಸ್ವಿ ಓಟ ಮುಂದುವರೆಸಿದೆ. ಈ ನಡುವೆ ಆಗಸ್ಟ್​ನಲ್ಲಿ ‘ಕುರುಕ್ಷೇತ್ರ’ ರಿಲೀಸ್ ಪಕ್ಕಾ ಆಗಿದೆ. ಈ ನಡುವೆ ‘ರಾಬರ್ಟ್’ ಸೌಂಡು ಜೋರಾಗುತ್ತಿದೆ. ಹೀಗೆ ಎಲ್ಲೆಲ್ಲೂ ಡಿ.ಬಾಸ್​ ದರ್ಬಾರ್ ಅನ್ನುವಷ್ಟರ ಮಟ್ಟಿಗೆ ದರ್ಶನ್ ಸಿನಿಮಾಗಳು ಸದ್ದು ಮಾಡ್ತಾ ಇವೆ.

ಡೈರೆಕ್ಟರ್ ತರುಣ್ ಸುಧೀರ್ ದರ್ಶನ್​ ಗೆ ಸಿನಿಮಾ ಮಾಡ್ತಾ ಇದ್ದಾರೆ ಅನ್ನೋ ಸುದ್ದಿ ರಿವೀಲ್ ಆಗ್ತಾ ಇದ್ದಂತೆ ಸಿಕ್ಕಾಪಟ್ಟೆ ಸೆನ್ಷೇಷನ್ ಕ್ರಿಯೇಟ್ ಆಗಿತ್ತು. ಇನ್ನು ಟೈಟಲ್ ಫಿಕ್ಸ್ ಆಗಿ, ಫಸ್ಟ್ ಲುಕ್ ಬಂದ ಮೇಲಂತೂ ಅದ್ರ ಸೌಂಡು ಆಕಾಶಕ್ಕೆ ಮುಟ್ಟಿತು.

ಮೊನ್ನೆ ಮೊನ್ನೆ…ಅಂದ್ರೆ ರಂಜಾನ್ ಹಬ್ಬಕ್ಕೆ ರಾಬರ್ಟ್ ಟೀಮ್ ಪೋಸ್ಟರ್ ರಿಲೀಸ್ ಆಗಿತ್ತು. ಅದನ್ನು ಒಂದಿಷ್ಟು ಮಂದಿ ಹಾಲಿವುಡ್ ಸಿನಿಮಾದ ಕಾಪಿ. ಅದು-ಇದು ಅಂತ ಕತೆ ಹೊಡೆದ್ರೂ ಕೂಡ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟೇ ಅಲ್ಲ ಪೋಸ್ಟರ್​ಗೆ ಚಿತ್ರರಸಿಕರು ಫಿದಾ ಆಗಿದ್ದಾರೆ. ಆ ಪೋಸ್ಟರ್​ ಸ್ಟೈಲ್​ನಲ್ಲೇ ಬೈಕೇರಿ ಕೂತು ಫೋಟೋಕೆ ಪೋಸು ಕೋಡೋದು ಟ್ರೆಂಡ್ ಆಗಿ ಬಿಟ್ಟಿದೆ.

ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರ ಜೊತೆ ಮರಿಟೈಗರ್ ವಿನೋದ್​ ಪ್ರಭಾಕರ್ ಇರೋ ಹೊಸ ಲುಕ್​ ಒಂದು ಇದ್ದಕ್ಕಿದ್ದಂತೆ ಹೊರ ಬಂದಿದೆ..! ಇದು ರಾಬರ್ಟ್​​ ಸಿನಿಮಾದ ಲುಕ್ಕಾ ಅಥವಾ ಬೇರೆ ಸಿನಿಮಾದ್ದಾ ಅನ್ನೋ ಪ್ರಶ್ನೆಗಳು ಎದ್ದಿವೆ. ಬಟ್, ವಿನೋದ್​ ಪ್ರಭಾಕರ್ ಕೂಡ ರಾಬರ್ಟ್​ನಲ್ಲಿ ಟೋನಿ ಪಾತ್ರದದಲ್ಲಿ ನಟಿಸ್ತಾ ಇರೋದು ಗೊತ್ತೇ ಇದೆ. ಹೀಗಾಗಿ ಅದು ರಾಬರ್ಟ್ ಸಿನಿಮಾದ ನಯಾ ಲುಕ್ ಅಂತಾ ಹೇಳಲಾಗ್ತಿದೆ.

ಪೋಸ್ಟರ್‌ನಲ್ಲಿ  ದರ್ಶನ್ ಮತ್ತು ವಿನೋದ್ ಪ್ರಭಾಕರ್ ನಿಂತಿದ್ದು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಇದು ರಾಬರ್ಟ್ ಸಿನಿಮಾದ ನಿಜವಾದ ಪೋಸ್ಟರಾ ಅಥವಾ ಅಭಿಮಾನಿಗಳು ಕ್ರಿಯೇಟ್ ಮಾಡಿರೋ ಪೋಸ್ಟರಾ ಅನ್ನೋದು ಸ್ಪಷ್ಟ ವಾಗಿಲ್ಲ. ಈ ಬಗ್ಗೆ ಡೈರೆಕ್ಟರ್ ತರುಣ್ ಸುಧೀರ್ ಕೂಡ ಇನ್ನೂ ಏನೂ ಹೇಳಿಲ್ಲ. ಚಿತ್ರತಂಡ ಸೈಲೆಂಟ್ ಆಗಿದೆ. ಆದ್ರೆ, ಪೋಸ್ಟರ್ ರಿಚ್​ನೆಸ್, ಅದ್ಭುತ ಡಿಸೈನ್ ನೋಡಿದ್ರೆ ಇದು ರಾಬರ್ಟ್​ ಟೀಮೇ ಮಾಡಿರೋ ಪೋಸ್ಟರ್ ಅಂತಾ ಅನಿಸ್ತಾ ಇದೆ.

ಅದೇನೆ ಇರಲಿ. ರಾಬರ್ಟ್ ಪೋಸ್ಟರ್ ಅಂತೂ ಸಖತ್ ಸದ್ದು ಮಾಡ್ತಾ ಇದೆ. ಇದನ್ನು ಚಿತ್ರತಂಡವೇ ಡಿಸೈನ್ ಮಾಡಿದ್ಯಾ?ಅಥವಾ ತಂಡಕ್ಕೆ ಗೊತ್ತಾಗ್ದೇ ಲೀಕ್ ಆಯ್ತಾ ಅಥವಾ ಫ್ಯಾನ್ಸ್ ಕ್ರಿಯೇಟ್ ಮಾಡಿದ ಪೋಸ್ಟರಾ ಅನ್ನೋದನ್ನು ರಾಬರ್ಟ್ ಟೀಮೇ ಹೇಳ್ಬೇಕು.

 

 

 

 

LEAVE A REPLY

Please enter your comment!
Please enter your name here