ದರ್ಶನ್- ಸುದೀಪ್ ಸ್ನೇಹ ನೆನಪಿಸಿದ ಪುಟಾಣಿ ಫ್ಯಾನ್ಸ್

0
209

ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ ಬರ್ತ್ ಡೇ. 42ನೇ ವಸಂತಕ್ಕೆ ಕಾಲಿಟ್ಟಿರೋ ಸ್ಯಾಂಡಲ್​ವುಡ್ ‘ಯಜಮಾನ’ ದರ್ಶನ್ ಅವರಿಗೆ ವಿಶ್ ಮಾಡಲು ಸಾವಿರಾರು ಅಭಿಮಾನಿಗಳು ಬೆಂಗಳೂರಿನ ಆರ್​ ಆರ್ ನಗರದಲ್ಲಿನ ದರ್ಶನ್ ಅವರ ನಿವಾಸ ‘ತೂಗದೀಪ ನಿವಾಸ’ಕ್ಕೆ ಆಗಮಿಸಿದ್ದರು.
ಪ್ರತಿ ವರ್ಷ ಕೇಕ್, ಹಾರ-ತುರಾಯಿ ತಗೊಂಡು ಬರ್ತಿದ್ದ ಫ್ಯಾನ್ಸ್, ಈ ಬಾರಿ ಬರ್ತ್ ಡೇ ಗಿಫ್ಟ್ ಅಂತ ತಂದಿದ್ದು ಅಕ್ಕಿ, ಬೇಳೆ ಮತ್ತಿತರ ದಿನಸಿ ಸಾಮಗ್ರಿಗಳನ್ನು. ರೆಬಲ್ ಸ್ಟಾರ್ ಅಂಬರೀಶ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ದರ್ಶನ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳೋದಾಗಿ ಹೇಳಿದ್ರು. ಅಂತೆಯೇ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ದಾಸೋಹಕ್ಕೆ ತನ್ನ ಕೈಲಾದ ಮಟ್ಟಿನ ದಾನ ನೀಡಲು ದರ್ಶನ್ ಮನಸ್ಸು ಮಾಡಿದ್ರು.
ಹೀಗಾಗಿ ದರ್ಶನ್ ಫ್ಯಾನ್ಸ್ ದವಸ-ಧಾನ್ಯಗಳನ್ನು ಉಡುಗೊರೆಯಾಗಿ ತಂದಿದ್ದರು. ದರ್ಶನ್ ಇವುಗಳನ್ನು ಶ್ರೀ ಸಿದ್ಧಗಂಗಾ ಮಠಕ್ಕೆ ಹಾಗೂ ಅನಾಥಾಶ್ರಮಗಳಿಗೆ ತಲುಪಿಸಲಿದ್ದಾರೆ.
ಇನ್ನು ದರ್ಶನ್​ ಅವರಿಗೆ ವಿಶ್ ಮಾಡಲು ಬಂದ ಇಬ್ಬರು ಪುಟಾಣಿ ಫ್ಯಾನ್ಸ್ ದರ್ಶನ್ ಮತ್ತು ಸುದೀಪ್ ಅವರ ಸ್ನೇಹವನ್ನು ನೆನಪಿಸಿದ್ರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಹಳ ಆತ್ಮೀಯ ಗೆಳೆಯರಾಗಿದ್ರು. ಆದರೆ, ಸಣ್ಣ ಭಿನ್ನಾಭಿಪ್ರಾಯ ಇವರನ್ನು ದೂರ ಮಾಡಿದೆ. ಆದರೆ, ಇವರಿಬ್ಬರು ಮತ್ತೆ ಮೊದಲಿನಂತೆ ಜೊತೆಯಾಗಬೇಕು. ಇಬ್ಬರು ಕುಚಿಕುಗಳು ಒಟ್ಟಾಗಿ ಸಿನಿಮಾ ಮಾಡ್ಬೇಕು ಅನ್ನೋದು ಫ್ಯಾನ್ಸ್ ಆಶಯ ಕೂಡ.
ಅದೇರೀತಿ ಪುಟಾಣಿ ಅಭಿಮಾನಿಗಳಾದ ಅಭಿ ಮತ್ತು ಸಹನ ದರ್ಶನ್ ಮತ್ತು ಸುದೀಪ್ ಸ್ನೇಹವನ್ನು ನೆನಪಿಸಿದ್ದಾರೆ. ಅಭಿ ಮುಖದಲ್ಲಿ ಡಿ.ಬಾಸ್ ಅಂತ, ಸಹನ ಪೈಲ್ವಾನ್ ಅಂತ ಬರೆಸಿಕೊಂಡು ಬಂದಿದ್ದರು. ಅವರಿಬ್ಬರೂ ಫ್ರೆಂಡ್ಸ್. ಅವರು ಒಟ್ಟಾಗಿ ನಿಂತು ಪೋಸ್​ ಕೊಟ್ಟು ದರ್ಶನ್- ಸುದೀಪ್ ಸ್ನೇಹವನ್ನು ನೆನಪಿಸಿದ್ರು.

LEAVE A REPLY

Please enter your comment!
Please enter your name here