ಒಂದೇ ಒಂದು ಲೋಟ ಹಾಲು ಕರೆದು ತೋರಿಸಲಿ : ನಟ ದರ್ಶನ್ ತಿರುಗೇಟು

0
253

ಮಂಡ್ಯ : ಹೆಚ್​.ಡಿ ಕುಮಾರಸ್ವಾಮಿ ಸೇರಿದಂತೆ ಮೈತ್ರಿ ನಾಯಕರಿಗೆ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ನಡೆದ ಸುಮಲತಾ ಸಮಾವೇಶದಲ್ಲಿ ಮಾತನಾಡಿದ ಅವರು, ನಮಗೆ ರೈತರ ಕಷ್ಟ ಗೊತ್ತಿಲ್ಲ ಅಂತಾರಲ್ಲಾ? ಅವರು ಒಂದೇ ಒಂದು ಲೋಟ ಹಾಲಿ ಕರೆದು ತೋರಿಸಲಿ. ಹಸು ಕರು ಹಾಕಿದಾಗ 10 ದಿನ ಅದಕ್ಕೆ ಮೇವು ಏನ್ ಹಾಕ್ಬೇಕು ಅಂತ ಅವರನ್ನು ಕೇಳಿ..! ನಂಗೆ ನಾನು ರೈತ ಅಂತ ಹೇಳಿಕೊಳ್ಳೋಕೆ ಇಷ್ಟು ಸಾಕು ಎಂದರು.
ಕಲಾವಿದರು ಅಂತ ಹೇಳ್ತಾರಲ್ಲಾ? ಇವರೇನು? 50-60 ಕೋಟಿ ಹಾಕಿ ಸಿನಿಮಾ ಮಾಡಿದ್ದಾರಲ್ಲಾ? ಅದೇ ದುಡ್ಡು ತಂದು ಇಲ್ಲಿ ಅನಾಥಾಶ್ರಮ, ವೃದ್ಧಾಶ್ರಮ ಮಾಡಬಹುದಿತ್ತು. ಆಗ ಜನ ಆರಾಮಾಗಿ ಗೆಲ್ಲಿಸುತ್ತಿದ್ದರು ಅಂತ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
ನನೆಗ ವರ್ಷಕ್ಕೆ 2, 2.5 ಕೋಟಿ ರೂ ಆದಾಯವಿದೆ. ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ ಎಂದ ದರ್ಶನ್, ಸುಮಲತಾ ಒಳ್ಳೆಯ ಕೆಲಸ ಮಾಡ್ತಾರೆ ಅವರ ಕೈ ಬಿಡಬೇಡಿ ಅಂತ ಮತಯಾಚನೆ ಮಾಡಿದ್ರು.

‘ಕುಮಾರಣ್ಣನಿಂದ ಇಡೀ ಕರ್ನಾಟಕ ‘ಡಿ’ ಬಾಸ್ ಅಂತಿದೆ’..!

LEAVE A REPLY

Please enter your comment!
Please enter your name here