ನಿಮ್ಮ ಮನೆ-ಮನೆಗೆ ಬರ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್!

0
427

ಸ್ಯಾಂಡಲ್​​ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶೀಘ್ರದಲ್ಲೇ ನಿಮ್ಮ ಮನೆ – ಮನೆಗೆ ಬರಲಿದ್ದಾರೆ. ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್, ಎವರ್​ಗ್ರೀನ್ ಹೀರೋ ರಮೇಶ್​ ಅರವಿಂದ್ ಅವರ ಸಾಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಲಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರೋ ದರ್ಶನ್ ಕಿರುತೆಗೆ ಬರ್ತಿದ್ದಾರೆ. ರಿಯಾಲಿಟಿ ಶೋವೊಂದರ ನಿರೂಪಣೆಯನ್ನು ಮಾಡುವ ಹೊಸ ಪ್ರಯತ್ನಕ್ಕೆ ದರ್ಶನ್ ಕೈ ಹಾಕುತ್ತಿದ್ದಾರೆ. ಖಾಸಗಿ ವಾಹಿಯ ಅತೀ ದೊಡ್ಡ ರಿಯಾಲಿಟಿ ಶೋವೊಂದರ ನಿರೂಪಣೆ ಹೊಣೆಯನ್ನು ದರ್ಶನ್ ನಿಭಾಯಿಸಲಿದ್ದಾರೆ ಎಂಬ ಸುದ್ದಿ ಪವರ್​ ಟಿವಿಗೆ ಉನ್ನತ ಮೂಲಗಳಿಂದ ಸಿಕ್ಕಿದೆ. ಈಗಾಗಲೇ ವಾಹಿನಿ ದರ್ಶನ್ ಜೊತೆ ಮಾತು ಕತೆ ನಡೆಸಿದ್ದು, ದರ್ಶನ್ ಕೆಲವು ಷರತ್ತುಗಳಿಗೆ ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here