Home ಸಿನಿ ಪವರ್ ಒಟ್ಟಿಗೆ ಅಖಾಡಕ್ಕೆ ಇಳಿಯುತ್ತಿದ್ದಾರೆ ದರ್ಶನ್, ಪುನೀತ್​, ಶ್ರೀಮುರಳಿ..!

ಒಟ್ಟಿಗೆ ಅಖಾಡಕ್ಕೆ ಇಳಿಯುತ್ತಿದ್ದಾರೆ ದರ್ಶನ್, ಪುನೀತ್​, ಶ್ರೀಮುರಳಿ..!

ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್​ಗಳ ಅಬ್ಬರ ಸಿಕ್ಕಾಪಟ್ಟೆ ಜೋರಾಗಿದೆ. ಕಳೆದ ವರ್ಷ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಪಂಚಭಾಷೆಗಳಲ್ಲಿ ಸಪ್ತಸಾಗರದಾಚೆಗೂ ಅಬ್ಬರಿಸಿತ್ತು. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕುರುಕ್ಷೇತ್ರ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್​ ವಿಶ್ವವ್ಯಾಪಿ ಭರ್ಜರಿ ಸೌಂಡು ಮಾಡ್ತಾ ಇದೆ. ಸ್ಟಾರ್ ನಟರ ಇನ್ನೂ ಒಂದಿಷ್ಟು ಸಿನಿಮಾಗಳು ಒಂದರ ಹಿಂದೆ ಒಂದರಂತೆ ರಿಲೀಸ್ ಆಗಲಿವೆ. ಅದರಲ್ಲೂ ದರ್ಶನ್​, ಪುನೀತ್​, ಶ್ರೀಮುರಳಿ  ಅಭಿಮಾನಿಗಳಿಗಂತೂ ಹಬ್ಬದೂಟದ ಸೌಭಾಗ್ಯ.

ಚಾಲೆಂಜಿಂಗ್ ಸ್ಟಾರ್ ದರ್ಶನ್​ ಈ ವರ್ಷ ಆರಂಭದಿಂದಲೂ ಒಂದೊಂದೇ ಸರ್‌ಪ್ರೈಸ್ ಕೊಡ್ತಿದ್ದಾರೆ. ಮಾರ್ಚ್​ನಲ್ಲಿ ‘ಯಜಮಾನ’ನಾಗಿ ಮನ ಗೆದ್ದ ದಚ್ಚು ಈಗ ‘ಕುರುಕ್ಷೇತ್ರ’ದ ಸುಯೋಧನನಾಗಿ ದರ್ಬಾರು ನಡೆಸ್ತಿದ್ದಾರೆ. ಈ ವರ್ಷದಲ್ಲಿ ಇಷ್ಟಕ್ಕೆ ಡಿ.ಬಾಸ್ ಸಿನಿಹಬ್ಬ ಮುಗಿದಿಲ್ಲ. ಒಡೆಯ, ರಾಬರ್ಟ್​ ಟೀಮ್​ಗಳಿಂದ ಒಂದರ ಹಿಂದೆ ಒಂದು ಸ್ವೀಟ್ ನ್ಯೂಸ್ ಬರ್ತಿದೆ.

ಅಂತೆಯೇ  ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಕೂಡ ತನ್ನ ಅಭಿಮಾನಿಗಳಿಗೆ ಹಬ್ಬದೂಟ ಉಣಬಡಿಸುತ್ತಿದ್ದಾರೆ. ಫೆಬ್ರವರಿಯಲ್ಲಿ ‘ನಟ ಸಾರ್ವಭೌಮ’ನಾಗಿ ಪಕ್ಕಾ ಫ್ಯಾಮಿಲಿ ಎಂಟರ್​ಟ್ರೈನ್ ಸಿನಿಮಾ ನೀಡಿದ್ದ ಅಪ್ಪು ‘ಯುವರತ್ನ’ನಾಗಿ ಬಾಕ್ಸ್​​ಆಫೀಸ್​​ ಚಿಂದಿ ಉಡಾಯಿಸಲು ರೆಡಿಯಾಗ್ತಿದ್ದಾರೆ.

ಇನ್ನು, ರೋರಿಂಗ್​ ಸ್ಟಾರ್ ಶ್ರೀಮುರಳಿ ‘ ಭರಾಟೆ’ ಕೇಳ್ಬೇಕೇ… ‘ಮಫ್ತಿ’ ಸ್ಟಾರ್ ಮುರಳಿ ‘ಭರಾಟೆ’ ಜೋರಾಗಿಯೇ ಇದೆ. ಸೆಟ್ಟೇರಿದಲ್ಲಿಂದಲೂ ಸದ್ದು ಮಾಡ್ತಿರೋ ಭರಾಟೆಯಿಂದ ಸದ್ಯದಲ್ಲೇ ಮತ್ತೊಂದು ಸ್ವೀಟ್​ ನ್ಯೂಸ್ ಬರಲಿದೆ. ಅಪ್ಪು, ದಚ್ಚು ಜೊತೆ ಜೊತೆಗೇನೇ ಮುರಳಿ ತನ್ನ ಫ್ಯಾನ್ಸ್​ಗೆ ಗಿಫ್ಟ್​ ಕೊಡಲಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್, ರೋರಿಂಗ್ ಸ್ಟಾರ್ ಶ್ರೀಮುರಳಿ ಒಟ್ಟಿಗೆ ತಮ್ಮ ಫ್ಯಾನ್ಸ್​ಗೆ ಉಡುಗೊರೆ ನೀಡ್ತಿರೋದು ನಿಜಕ್ಕೂ ವಿಶೇಷ. ಅದೂ ಕೆಲವೇ ಕೆಲವು ದಿನಗಳಲ್ಲಿ..! ದಸರಾ ಸಂಭ್ರಮದಲ್ಲಿರುವ ಸಿನಿಪ್ರಿಯರಿಗೆ ಈ ಮೂವರು ಸ್ಟಾರ್ ನಟರ ಸಿನಿ ತಂಡದಿಂದ ಭರ್ಜರಿ ಗಿಫ್ಟ್ ಸಿಗ್ತಿರೋದು ಪಕ್ಕಾ…!

ಹೌದು. ದರ್ಶನ್  ಅಭಿನಯದ ‘ಒಡೆಯ’, ಪುನೀತ್ ನಟನೆಯ ‘ಯುವರತ್ನ’, ಮುರಳಿಯ ‘ಭರಾಟೆ’ ಟೀಮ್​ನಿಂದ ಬಂದಿರೋ ಸರ್​​ಪ್ರೈಸ್​ ನ್ಯೂಸ್ ಇದು. ವಿಜಯ ದಶಮಿ ಸಡಗರಲ್ಲಿ ಮೂವರಿಂದ ಒಂದೊಂದು ಉಡುಗೊರೆ ಸಿಗುತ್ತಿದ್ದು, ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ.

ಈಗಾಗಲೇ ಪೋಸ್ಟರ್​ನಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಒಡೆಯ’ ಟೀಸರ್​ ವಿಜಯದಶಮಿಯಂದು ರಿಲೀಸ್ ಆಗಲಿದೆ. ಇನ್ನು, ‘ಕುರುಕ್ಷೇತ್ರ’ದ ಸುಯೋಧನನ ಗುಂಗಿನಲ್ಲೇ ಖುಷಿಯಲ್ಲಿರುವ ದಚ್ಚು ಫ್ಯಾನ್ಸ್ ‘ಒಡೆಯ’ನ ದರ್ಶನಕ್ಕೆ ವ್ಹೇಟ್ ಮಾಡ್ತಿದ್ದಾರೆ. ಒಡೆಯ ಟೀಸರ್​ ಗಿಫ್ಟ್​ ಮಾತ್ರವಲ್ಲದೆ ದಚ್ಚು ಅಭಿನಯದ ‘ರಾಬರ್ಟ್’​​ನಿಂದಲೂ ಸಿಹಿ ಸುದ್ದಿ ಸಿಗಲಿದೆ.

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿಮಾನಿಗಳು ‘ಯುವರತ್ನ’ನನ್ನು ಕಣ್ತುಂಬಿಕೊಳ್ಳಲು ಕಾಯ್ತಿದ್ದು, ಪೋಸ್ಟರ್​ನಿಂದ ಗಮನ ಸೆಳೆದಿರುವ, ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ‘ಯುವರತ್ನ’ ಟೀಸರ್ ಮಹಾನವಮಿಗೆ ರಿಲೀಸ್ ಆಗಲಿದ್ದು, ಅಪ್ಪು ಅಭಿಮಾನಿಗಳು ವಿಜಯ ದಶಮಿಗಾಗಿ ಕಾದಿದ್ದಾರೆ.

ಹಾಗೆಯೇ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಈಗಾಗಲೇ ಟೀಸರ್, ಸಾಂಗ್​ನಿಂದ ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದು, ಈ ಸಿನಿಮಾದ ಮತ್ತೊಂದು ಹಾಡು ಕೂಡ ವಿಜಯದಶಮಿಗೆ ರಿಲೀಸ್ ಆಗಲಿದೆ.

ಒಟ್ಟಿನಲ್ಲಿ ದರ್ಶನ್, ಪುನೀತ್​, ಶ್ರೀಮುರಳಿ ಒಟ್ಟಿಗೇ ಅಖಾಡಕ್ಕೆ ಇಳಿಯುತ್ತಿದ್ದು, ದಸರಾ ಸಡಗರದಲ್ಲಿ ಅಭಿಮಾನಿಗಳಿಗೆ ಸಿನಿ ರಸದೌತಣ ನೀಡಲಿದ್ದಾರೆ. ಇದನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ಕೂಡ ಫುಲ್‌ ಖುಷಿಯಲ್ಲಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಸಚಿನ್ ಗೆ ಸೆಡ್ಡುಹೊಡೆದ ಕನ್ನಡಿಗ ರಾಹುಲ್ ದ್ರಾವಿಡ್ !

ಕನ್ನಡಿಗ ರಾಹುಲ್ ದ್ರಾವಿಡ್ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಸೆಡ್ಡು ಹೊಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ದ್ರಾವಿಡ್ಡೇ ದಿ ಬೆಸ್ಟ್ ಅಂತ ಜನ ಮತಹಾಕಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗಿಂತ...

ಕೊರೋನಾ ಇದ್ರೂ ಕಾರ್ಖಾನೆ ಸೀಲ್​ಡೌನ್​ ಯಾಕಿಲ್ಲ? ಐಟಿಸಿ ವಿರುದ್ಧ ಗ್ರಾಮಸ್ಥರ ಆಕ್ರೋಶ

ದೇವನಹಳ್ಳಿ : ಬೆಂಗಳೂರು ಹೊರವಲಯದ ಯಲಹಂಕ ತಾಲೂಕು ತರಬಹಳ್ಳಿ ಗ್ರಾಮದ ಸಮೀಪವಿರುವ ಪ್ರತಿಷ್ಠಿತ ಐಟಿಸಿ ಕಂಪನಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಐಟಿಸಿ ಕಾರ್ಖಾನೆಯಲ್ಲಿ ಸಿಗರೇಟ್ ತಯಾರಿಕೆ ಮಾಡಲಾಗುತ್ತಿದ್ದು ಈ ಕಾರ್ಖಾನೆಯಲ್ಲಿ...

ಕೊವಿಡ್ ಸೋಂಕಿತರ ಭೇಟಿ ಮಾಡಿ ಧೈರ್ಯ ತುಂಬಿದ ಸಚಿವ ಆನಂದ್ ಸಿಂಗ್ !!

ಬಳ್ಳಾರಿ : ಬಳ್ಳಾರಿಯ ದಂತ ವೈದ್ಯ ಕಾಲೇಜಿನ ಕೊವಿಡ್ ಅಸ್ಪತ್ರೆಗೆ ಉಸ್ತುವಾರಿ ಮತ್ತು ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನಿಡಿದರು. ಪಿಪಿಇ ಕಿಟ್ ಧರಿಸಿ ಐಸೋಲೇಷನ್ ವಾರ್ಡ್ ಗೆ ಭೇಟಿ ಕೊಟ್ಟ...

ಕೊರೋನಾ ಟೆಸ್ಟ್ ಗಾಗಿ ಶವ ಕೊಳೆಯಲು ಬಿಟ್ಟ ಬ್ರಹ್ಮಾವರ ಸರಕಾರಿ ಆಸ್ಪತ್ರೆ

ಉಡುಪಿ : ಕೊರೋನಾ ವಕ್ಕರಿಸಿದ ಬಳಿಕ ಮಾನವೀಯತೆ ಮರೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅದು ನಿಜ ಎನ್ನುವದನ್ನು ಬ್ರಹಾವ್ಮರ ಸಮುದಾಯ ಆರೋಗ್ಯ ಕೇಂದ್ರ ಸಾಬೀತು ಮಾಡಿದೆ ಎಂದರೆ ತಪ್ಪಾಗಲಾರದು. ಕೊರೋನಾ ವಿಚಾರವಾಗಿ...