ಸದ್ದಿಲ್ಲದೆ ಸತ್ಕಾರ್ಯ ಮಾಡ್ತಿದ್ದಾರೆ ‘ಯಜಮಾನ’ ದರ್ಶನ್..!

0
299

ಚಾಲೆಂಜಿಂಗ್ ಸ್ಟಾರ್ ದರ್ಶನ್ ರೀಲ್​ನಲ್ಲಿ ಮಾತ್ರವಲ್ಲ ರಿಯಲ್​ ಲೈಫ್​ನಲ್ಲೂ ಹೀರೋ. ಡಿ.ಬಾಸ್ ಮಾಡೋ ಅದೆಷ್ಟೋ ಕಾರ್ಯಗಳು ಸುದ್ದಿಯಾಗಲ್ಲ, ಸದ್ದೂ ಮಾಡಲ್ಲ..! ಯಾಕಂದ್ರೆ ದರ್ಶನ್ ಪಬ್ಲಿಸಿಟಿಗಾಗಿ ಯಾವ್ದೇ ಕೆಲಸ ಮಾಡಲ್ಲ. ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡಿರೋ ಸ್ಯಾಂಡಲ್​ವುಡ್ ‘ಸಾರಥಿ’ ಸಿನಿಮಾಗಳಿಂದಾಚೆಗೂ ಅಭಿಮಾನಿಗಳಿಗೆ ಇಷ್ಟವಾಗೋದು ತಾವು ಮಾಡೋ  ಒಳ್ಳೆಯ ಕೆಲಸಗಳಿಂದ.
ಇಷ್ಟೆಲ್ಲಾ ಹೇಳೋಕೆ ಕಾರಣ..ಇದೀಗ ದರ್ಶನ್ ಮಾಡ್ತಿರೋ ಮತ್ತೊಂದು ಸತ್ಕಾರ್ಯ. ಅರಮನೆ ನಗರಿ ಮೈಸೂರಿನಲ್ಲಿ ದರ್ಶನ್ ವನ್ಯಜೀವಿ ಫೋಟೋಗಳ ಪ್ರದರ್ಶನ ಹಮ್ಮಿಕೊಂಡಿದ್ದಾರೆ. ಅದು ಸ್ವತಃ ಅವರೇ ತೆಗೆದ ಫೋಟೋಗಳ ಪ್ರದರ್ಶನ..!
ಫೋಟೋ ಪ್ರದರ್ಶನ ಮಾಡೋದು ಸತ್ಕಾರ್ಯನಾ ಅಂತ ಕೇಳ್ತಿದ್ದೀರಾ..? ಇಲ್ಲ, ಬರೀ ಫೋಟೋ ಪ್ರದರ್ಶನವಾಗಿದ್ರೆ ಯಾರಾದ್ರು ಸತ್ಕಾರ್ಯ ಅಂತಿದ್ವಾ..?

ದರ್ಶನ್ ಅವರ ಈ ಫೋಟೋ ಪ್ರದರ್ಶನ ಅರಣ್ಯ ಇಲಾಖೆಗೆ ನೆರವಾಗಲಿದೆ. ವಿಶ್ವ ವನ್ಯಜೀವಿ ದಿನಾಚರಣೆ ಪ್ರಯುಕ್ತ ಮಾರ್ಚ್ 1, 2 ಮತ್ತು 3ರಂದು ಮೈಸೂರಿನ ಸಂದೇಶ್​ ದಿ ಪ್ರಿನ್ಸ್​ನಲ್ಲಿ ದರ್ಶನ್ ತಾವು ತೆಗೆದ ಫೋಟೋಗಳ ಪ್ರದರ್ಶನ ಮಾಡಲಿದ್ದಾರೆ. ಈ ಎಕ್ಸಿಬಿಷನ್​ನಲ್ಲಿ ಫೋಟೋಕೊಂಡವರಿಗೆ ದರ್ಶನ್ ಅವರ ಆಟೋಗ್ರಾಫ್​ ಕೂಡ ಸಿಗುತ್ತೆ.
ಫೋಟೋಗಳ ಮಾರಾಟದಿಂದ ಬರುವ ಹಣವನ್ನು ದರ್ಶನ್ ಅರಣ್ಯ ಇಲಾಖೆಗೆ ಕೊಡಲಿದ್ದಾರೆ. ಅರಣ್ಯ ಇಲಾಖೆ ಈ ಹಣವನ್ನು ಇಲಾಖೆಯ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಿದೆ. ಹೀಗೆ ‘ಯಜಮಾನ’ ದರ್ಶನ್ ಸದ್ದಿಲ್ಲದೆ ಸತ್ಕಾರ್ಯ ಮಾಡ್ತಿದ್ದಾರೆ.

LEAVE A REPLY

Please enter your comment!
Please enter your name here