Home ಸಿನಿ ಪವರ್ ದರ್ಶನ್ ಅವರಿಂದ ಆ ಸೆಲೆಬ್ರಿಟಿಗೆ ಓಪನ್ ಚಾಲೆಂಜ್..!

ದರ್ಶನ್ ಅವರಿಂದ ಆ ಸೆಲೆಬ್ರಿಟಿಗೆ ಓಪನ್ ಚಾಲೆಂಜ್..!

ಇಂದು ಬೆಳ್ಳಂಬೆಳಗ್ಗೆ ಚಾಲೆಂಜಿಂಗ್ ಸ್ಟಾರ್ ಮಾಡಿದ್ದ ಒಂದು ಟ್ವೀಟ್ ಸ್ಯಾಂಡಲ್​ವುಡ್​ನಲ್ಲಿ ಭಾರಿ ಸಂಚಲನವನ್ನುಂಟು ಮಾಡಿತ್ತು. ”ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್. ಮಧ್ಯಾಹ್ನ ಫೇಸ್​ಬುಕ್​ ಲೈವ್​ ಬರ್ತೀನಿ. ಬಂದಾಗ ಎಲ್ಲಾನು ತಿಳಿಸುತ್ತೇನೆ. ನಿಮ್ಮ ದಾಸ ದರ್ಶನ್” ಅಂತ ದರ್ಶನ್ ಮಾಡಿದ್ದ ಟ್ವೀಟ್​, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ದರ್ಶನ್ ತಾವು ಹೇಳಿದಂತೆ ಫೇಸ್​ಬುಕ್​ ಲೈವ್​ನಲ್ಲಿ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ದರ್ಶನ್ ಯಾವ ಸೆಲೆಬ್ರಿಟಿಗೆ ಚಾಲೆಂಜ್ ಮಾಡಿದ್ದು ಅಂತೀರಾ..? ದರ್ಶನ್ ಹೇಳಿರೋ ಸೆಲೆಬ್ರಿಟಿ ಬೇರೆ ಯಾರೂ ಅಲ್ಲ…ತಮಗೆ ಪ್ರೀತಿ, ಗೌರವದಿಂದ ಸೆಲೆಬ್ರಿಟಿ ಪಟ್ಟ ನೀಡಿರು ಅಭಿಮಾನಿಗಳು..!
ಹೌದು, ದರ್ಶನ್ ಸೆಲೆಬ್ರಿಟಿ ಅಂದಿದ್ದು ತಮ್ಮ ಅಭಿಮಾನಿಗಳಿಗೆ. ಹಾಗೆಯೇ ಚಾಲೆಂಜ್ ನೀಡಿರುವುದು ತುಂಬು ಹೃದಯದ ಪ್ರೀತಿಯಿಂದ. ”ನೀವೆಲ್ಲಾ ನನ್ನ ಸೆಲೆಬ್ರಿಟಿ ಅಂತೀರಾ. ಆದ್ರೆ, ನಂಗೆ ನನ್ನ ಫ್ಯಾನ್ಸೇ ದೊಡ್ಡ ಸೆಲೆಬ್ರಿಟಿಗಳು. ಈಗ ‘ಕುರುಕ್ಷೇತ್ರ’ ಬರ್ತಾ ಇದೆ. ಅದರಲ್ಲಿ ತುಂಬಾ ಜನ ಕೆಲಸ ಮಾಡಿದ್ದಾರೆ. ಅಪ್ಪಾಜಿ ಅವರಾಗಿರಬಹುದು (ಅಂಬರೀಶ್), ರವಿ ಸರ್ (ರವಿಚಂದ್ರನ್) ಆಗಿರಬಹುದು, ಅರ್ಜುನ್ ಸರ್ (ಅರ್ಜುನ್ ಸರ್ಜಾ) ಅವರಾಗಿರಬಹುದು, ಶ್ರೀನಿವಾಸ್​ ಮೂರ್ತಿ ಅವರಾಗಿರಬಹುದು, ಆಮೇಲೆ ನಿಖಿಲ್ ಆಗಿರಬಹುದು… ಎಲ್ರೂ ಇದ್ದಾರೆ. ಸೋ, ನೀವು ನಂಗೆ ಹೇಗೆ ಮರ್ಯಾದೆ ಕೊಡ್ತೀರಾ? ಆ ಥರ ಪ್ರತಿಯೊಬ್ಬರಿಗೂ ಕೊಡ್ಬೇಕು. ಫೋಟೋ ಹಾಕಿಲ್ಲ ಅಂತ, ಕಟೌಟ್​ ನಿಲ್ಲಿಸಿಲ್ಲ ಅಂತ ಥಿಯೇಟರ್​ನಲ್ಲಿ ಕಚ್ಚಾಡ್ದೇ, ಗಲಾಟೆ ಮಾಡ್ದೇ ಎಲ್ಲಾ ಸಿನಿಮಾ ನೋಡಿ. ಯಾಕಂದ್ರೆ ಕುರುಕ್ಷೇತ್ರ ಅಂತ ಸಿನಿಮಾ ಮಾಡೋದೇ ದೊಡ್ ಕಷ್ಟ. ಇವತ್ತು ಮುನಿರತ್ನ ಅವರು ಆ ಸಿನಿಮಾ ಮಾಡಿದ್ದಾರೆ. ಹಾಗಾಗಿ ಮನೆ ಮಂದಿ ಎಲ್ಲಾ ಒಟ್ಟಿಗೆ ಕೂತ್ಕೊಂಡು ಒಬ್ಬ ದುರ್ಯೋಧನನ್ನ, ಅರ್ಜುನನ್ನು, ಕರ್ಣನನ್ನು ನೋಡಿ… ಇದೇ ನಾನು ನಿಮ್ಗೆ ಕೊಡ್ತಿರೋ ಚಾಲೆಂಜ್. ದಯಮಾಡಿ ಯಾರೂ ಗಲಾಟೆಗಳನ್ನು ಮಾಡಿಕೊಳ್ದೆ ತುಂಬಾ ಪ್ರೀತಿಯಿಂದ ಈ ಸಿನಿಮಾ ನೋಡಿ” ಅಂತ ಕೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments