Homeರಾಜ್ಯಹಗಲಲ್ಲೂ ವ್ಯಾಘ್ರನ ರಾಜನ ದರ್ಶನ

ಹಗಲಲ್ಲೂ ವ್ಯಾಘ್ರನ ರಾಜನ ದರ್ಶನ

ಚಾಮರಾಜನಗರ : ದೇಶದಲ್ಲೇ ಅತಿ ಹೆಚ್ಚು ಹುಲಿ ಪ್ರದೇಶಗಳಾಗುತ್ತಿರುವ ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗೆ ವ್ಯಾಘ್ರನ ದರ್ಶನ ಸಾಮಾನ್ಯವಾಗಿದ್ದು, ಒಂದೇ ದಿನ ಎರಡು ಕಡೆ ಕಾಡಿನ ರಾಜನ ದರ್ಶನವಾಗಿದೆ.

ಚಾಮರಾಜನಗರ ಜಿಲ್ಲೆ ಬಂಡೀಪುರ  ಸಫಾರಿಯಲ್ಲಿ ಮಂಗಳವಾರ ಹುಲಿರಾಯ ರಿಲ್ಯಾಕ್ಸ್ ಮೂಡ್ ನಲ್ಲಿ ಹೆಜ್ಜೆ ಹಾಕುತ್ತಿರುವುದನ್ನು ಸಫಾರಿಗರು ಸೆರೆಹಿಡಿದಿದ್ದಾರೆ‌. ತಂಪನೆಯ ವಾತಾವರಣದಲ್ಲಿ ಕಾಡಿನ ರಾಜನನ್ನು ಕಂಡು ಪ್ರವಾಸಿಗರು ಫಿಧಾ ಆಗಿದ್ದು,  ಹಚ್ಚ ಹಸಿರಿನ ಕಾಡಿನಲ್ಲಿ ಹುಲಿರಾಯನ ಗಾಂಭೀರ್ಯದ ನಡೆ ಕಂಡು ಮುದಗೊಂಡಿದ್ದಾರೆ.

ಇನ್ನು, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವ್ಯಾಪ್ತಿಯಲ್ಲೂ ಹುಲಿಯೊಂದು ರಾತ್ರಿ ವೇಳೆ ಆರಾಮವಾಗಿ ಆಕಲಿಸಿ ಮೈ ಮುರಿಯುತ್ತಿರುವುದನ್ನು ಚಾಲಕರು ಕಣ್ತುಂಬಿಕೊಂಡು ವಿಡಿಯೋ ಮಾಡಿದ್ದಾರೆ. ಸದ್ಯ ಈ ಎರಡು ಹುಲಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ಲಾಗಿದ್ದು, ಗಡಿಜಿಲ್ಲೆಯನ್ನು ಹುಲಿಗಳ ನಾಡೆಂದು ನೆಟ್ಟಿಗರು ಕೊಂಡಾಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments