ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕುರುಕ್ಷೇತ್ರ’..! ಬಹು ದೊಡ್ಡ ತಾರಾಗಣ ಹಾಗೂ ಬಿಗ್ ಬಜೆಟ್ನ ಈ ಸಿನಿಮಾ ಸೆಟ್ಟೇರಿದಲ್ಲಿಂದಲೂ ಸಿಕ್ಕಾಪಟ್ಟೆ ಸೌಂಡು ಮಾಡ್ತಿದೆ. ಟ್ರೇಲರ್, ಹಾಡುಗಳು ರಿಲೀಸ್ ಆದ್ಮೇಲಂತೂ ಸೋಶಿಯಲ್ ಮೀಡಿಯಾದಲ್ಲಿ ‘ಸುಯೋಧನ’ನದ್ದೇ ಕಾರು ಬಾರು.
ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಕುರುಕ್ಷೇತ್ರ ರಿಲೀಸ್ ಆಗ್ತಾ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಂತೂ ಹಬ್ಬದ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಟಿಕೆಟ್ ಮುಂಗಡ ಬುಕ್ಕಿಂಗ್ ಶುರುವಾಗಿದೆ. ಜೊತೆಗೆ ಚಿತ್ರ ತೆರೆಕಾಣುತ್ತಿರೋ ಚಿತ್ರಮಂದಿರಗಳ ಎದುರು ಈಗಾಗಲೇ ದೊಡ್ಡ ದೊಡ್ಡ ಕಟೌಟ್ ಗಳು ಬಿದ್ದಿವೆ. ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿನ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ನರ್ತಕಿ ಮದುವಣ ಗಿತ್ತಿಯಂತೆ ಸಿಂಗಾರಗೊಂಡಿದೆ.
ನರ್ತಕಿ ಥಿಯೇಟರ್ಗೂ ಅಭಿಮಾನಿಗಳ ನೆಚ್ಚಿನ ‘ದಾಸ’ ಸ್ಯಾಂಡಲ್ವುಡ್ನ ‘ಸಾರಥಿ’ ದರ್ಶನ್ಗೂ ಅವಿನಾಭಾವ ಸಂಬಂಧ..! ದರ್ಶನ್ ಸಿನಿ ಜರ್ನಿಯ ಆರಂಭದ ದಿನಗಳಿಂದಲೂ ನರ್ತಕಿ ದರ್ಶನ್ ಗೆ ಲಕ್ಕಿ..! ಅದೇ ನರ್ತಕಿಯಲ್ಲಿ ಕುರುಕ್ಷೇತ್ರದ ರಿಲೀಸ್ ಆಗುತ್ತಿದ್ದು, ನಿರೀಕ್ಷೆಗೂ ಮೀರಿದ ಯಶಸ್ಸು ಸಿಗುತ್ತೆ ಅನ್ನೋದು ಅಭಿಮಾನಿಗಳ ವಿಶ್ವಾಸ..!
ಯೆಸ್ ಈಗಾಗಲೇ ಬಿಡುಗಡೆಯಾಗಿರುವ ದರ್ಶನ್ ಅವರ 50 ಸಿನಿಮಾಗಳ ಪೈಕಿ 21 ಸಿನಿಮಾಗಳು ನರ್ತಕಿ ಚಿತ್ರಮಂದಿರದಲ್ಲೇ ರಿಲೀಸ್ ಆಗಿರುವುದು. ದಾಸ, ಬುಲ್ ಬುಲ್, ಸಾರಥಿ, ಶಾಸ್ತ್ರಿ,ಗಜ. ಕಲಾಸಿಪಾಳ್ಯ , ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಭೂಪತಿ, ಅರ್ಜುನ ಬೃಂದಾವನ, ಭಗವಾನ್, ತಂಗಿಗಾಗಿ ಅನಾಥರು, ಅರ್ಜುನ್, ಕಿಟ್ಟಿ ವಿರಾಟ್, ಸ್ನೇಹನ-ಪ್ರೀತಿನಾ ಹಾಗೂ ಈ ವರ್ಷದ ಆರಂಭದಲ್ಲಿ ತೆರೆಕಂಡ ಯಜಮಾನ ಕೂಡ ಬೆಳ್ಳಿ ಪರದೆಗೆ ಎಂಟ್ರಿಕೊಟ್ಟಿದ್ದು ಇದೇ ನರ್ತಕಿಯಲ್ಲಿ..!
ಈ ಚಿತ್ರಮಂದಿರದಲ್ಲಿ ರಿಲೀಸ್ ಆಗಿರುವ ದರ್ಶನ್ ಅವರ 7 ಚಿತ್ರಗಳು ಶತದಿನೋತ್ಸವ ಆಚರಿಸಿವೆ. 9 ಚಿತ್ರಗಳು 50 ದಿನಗಳನ್ನು ಪೂರೈಸಿವೆ. ಹೀಗೆ ನರ್ತಕಿ ದಚ್ಚುಗೆ ಲಕ್ಕಿ ಥಿಯೇಟರ್ ಆಗಿದ್ದು, 50ನೇ ಸಿನಿಮಾವಾಗಿರೋ ಕುರುಕ್ಷೇತ್ರ ಕೂಡ ಭರ್ಜರಿ ಯಶಸ್ಸನ್ನು ಗಳಿಸುವುದು ಕನ್ಫರ್ಮ್ ಅನ್ನೋ ಮಾತಿಗೆ ಅದೃಷ್ಟದ ಬಲ ಸಿಕ್ಕಿದೆ.
ದರ್ಶನ್ಗೆ ತಮ್ಮ ಥಿಯೇಟರ್ ಲಕ್ಕಿ..! ಅವರ 21 ಸಿನಿಮಾಗಳು ಇಲ್ಲಿ ರಿಲೀಸ್ ಆಗಿದ್ದು, ಅವೆಲ್ಲವೂ ಸೂಪರ್ ಡೂಪರ್ ಹಿಟ್ ಆಗಿವೆ. ಅಷ್ಟೇ ಅಲ್ಲದೆ ದರ್ಶನ್ ಅವರ 50ನೇ ಸಿನಿಮಾ ಕುರುಕ್ಷೇತ್ರ ನಮ್ಮ ಥಿಯೇಟರ್ನಲ್ಲಿಯೇ ರಿಲೀಸ್ ಆಗುತ್ತಿರುವುದರಿಂದ ಬಹಳ ಸಂತೋಷವಾಗುತ್ತಿದೆ. ಹಿಂದಿನ ಚಿತ್ರ ಯಜಮಾನ ಕೂಡ ನಮ್ಮಲ್ಲೇ ರಿಲೀಸ್ ಆಗಿದ್ದು, ಅದು ಯಶಸ್ವಿ ಪ್ರದರ್ಶನ ಕಂಡಿತ್ತು ಅಂತ ಖುಷಿ ಖುಷಿಯಾಗಿ ಪ್ರೀತಿಯಿಂದ ಹೇಳಿಕೊಂಡಿದ್ದಾರೆ ನರ್ತಕಿ ಚಿತ್ರ ಮಂದಿರದ ವ್ಯವಸ್ಥಾಪಕರಾದ ಯಾದವ್. ಎನಿವೇ ಕುರುಕ್ಷೇತ್ರ ರಿಲೀಸ್ ಆಗ್ತಿದೆ. ಪಂಚ ಭಾಷೆಗಳಲ್ಲಿ ಮಿಂಚಲು ಸುಯೋಧನ ದರ್ಶನ್ ರೆಡಿಯಾಗಿದ್ದಾರೆ. ಇಡೀ ಟೀಮ್ಗೆ ನಮ್ ಕಡೆಯಿಂದಲೂ ಬೆಸ್ಟ್ ವಿಶಸ್.
3validity
chat gay las vegas https://bjsgaychatroom.info/
gay college humor dating girlfriend https://gaypridee.com/
gay roulette chat https://gay-buddies.com/
play great africa slots https://freeonlneslotmachine.com/
monopoly slots https://candylandslotmachine.com/
cleopatra slots https://slotmachinesworld.com/
charles town races
free slots home 12345 https://beat-slot-machines.com/
slots pictures https://download-slot-machines.com/
format for writing dissertation proposals https://buydissertationhelp.com/
online nursing dissertation help https://dissertationwriting-service.com/
writing acknowledgements for dissertation https://help-with-dissertations.com/
dissertation paper https://mydissertationwritinghelp.com/
dissertation coaching https://dissertations-writing.org/