Thursday, October 6, 2022
Powertv Logo
Homeಸಿನಿಮಾಜಗ್ಗೇಶ್ ಮನವಿಗೆ ಸ್ಪಂದಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಜಗ್ಗೇಶ್ ಮನವಿಗೆ ಸ್ಪಂದಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್ ದರ್ಶನ್ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟ ಕಿಲ್ಲರ್ ವೆಂಕಟೇಶ್ ಅವರ ನೆರವಿಗೆ ದರ್ಶನ್ ಧಾವಿಸಿದ್ದಾರೆ. ಕಿಲ್ಲರ್ ವೆಂಕಟೇಶ್​ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ನವರಸನಾಯಕ ಜಗ್ಗೇಶ್, ಕಲಾವಿದ ವೆಂಕಟೇಶ್ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದರು. ಅಲ್ಲದೆ ನಟ ದರ್ಶನ್​ಗೆ ಕರೆಮಾಡಿ ವಿಷಯ ತಿಳಿಸಿದ್ದರು. ದರ್ಶನ್ ಕೂಡಲೇ 1 ಲಕ್ಷ ರೂ ನೀಡಿ ಸಹಾಯ ಮಾಡಿದ್ದಾರೆ. ಈ ಬಗ್ಗೆಯೂ ಜಗ್ಗೇಶ್ ಟ್ವೀಟ್​​ನಲ್ಲಿ ತಿಳಿಸಿದ್ದಾರೆ. 

ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಜಗ್ಗೇಶ್ , ವೆಂಕಟೇಶ್​ ಅವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಜೊತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಿ ವೆಂಕಟೇಶ್​ ಅವರಿಗೆ ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ವಿಶೇಷ ಕಾಳಜಿ ವಹಿಸಿದ ಭಾ ಮಾ ಹರೀಶ್ ಮತ್ತು ಸಾರಾ ಗೋವಿಂದ್​ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯಿಂದ ಉತ್ತಮ ಚಿಕಿತ್ಸೆ ದೊರೆಯುತ್ತಿದೆ ಎಂದೂ ಹೇಳಿದ್ದಾರೆ.

ನೀವೂ ಕೂಡಾ ವೆಂಕಟೇಶ್​ಗೆ  ಧನಸಹಾಯ ಮಾಡಬಹುದು

ಇನ್ನು ವೆಂಕಟೇಶ್​ ಅವರ ಬ್ಯಾಂಕ್​ ಡೀಟೇಲ್ಸ್​ಗಳನ್ನು ಟ್ವೀಟ್ ಮಾಡಿರುವ ಜಗ್ಗೇಶ್ ಸಾರ್ವಜನಿಕರಲ್ಲಿಯೂ ಸಹಾಯ ಮಾಡುವಂತೆ ವಿನಂತಿಸಿಕೊಂಡಿದ್ದಾರೆ.

“35ವರ್ಷ ಕಲಾಸೇವೆ ಮಾಡಿದ ಈ ಕಲಾವಿದನಿಗೆ ಧನಸಹಾಯ ಮಾಡುವ ಮನಸ್ಸು ರಾಯರು ನಿಮಗೆ ನೀಡಿದರೆ ಮಾತ್ರ ಅವನ ಖಾತೆಗೆ ಹಣ ಹಾಕಬಹುದು. ಬಲವಂತವಿಲ್ಲ, ಯಕೃತ್ ಕಸಿಗೆ ತುಂಬ ದೊಡ್ಡಮೊತ್ತ ಆಗುತ್ತದೆ” ಎಂದು ಜಗ್ಗೇಶ್​ ಹೇಳಿದ್ದಾರೆ.

24 COMMENTS

  1. reduslim y alberto chicote [url=https://comprarcialis5mg.org/reduslim/]reduslim[/url] reduslim opiniones mГ©dicas
    reduslim opiniones reales [url=https://comprarcialis5mg.org/reduslim-kaufen/]reduslim kaufen[/url] que es reduslim opiniones
    cialis [url=https://comprarcialis5mg.org/it/cialis-5mg-prezzo/]cialis[/url] cialis
    [url=https://huntscammers.com/scammer-7911-aleksandra__769_92cuo]quГ© es el reduslim[/url] d1a6657

LEAVE A REPLY

Please enter your comment!
Please enter your name here

- Advertisment -

Most Popular

Recent Comments