ಮಣ್ಣಿಂದ ಬಂದ ನಾವು ಮಣ್ಣಲ್ಲೇ ಇರಬೇಕು.. ಮಣ್ಣಾ ಸೆರೋ ತನಕ ಮಣ್ಣೀನ ಮಗನಾಗು.. ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು ಎಂಬುವ ಡಾ.ರಾಜ್ ಹಾಡಿರುವ ಸಾಲನ್ನು ಮನಸಾ ಪಾಲಿಸುತ್ತಿದ್ದಾರೆ ಬಾಕ್ಸ್ಆಫೀಸ್ ಭೂಪತಿ ಚಾಲೆಂಜಿಂಗ್ ಸ್ಟಾರ್ ದರ್ಶನ್..
ಹೌದು, ಡಿ ಬಾಸ್ ರೈತನಾಗಿದ್ದಾರೆ. ತಮ್ಮ ಫಾರ್ಮ್ ಹೌಸ್ನಲ್ಲಿ ಕೃಷಿ , ಹೈನುಗಾರಿಕೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ . ಈಗ ಆ ಮಾತಿಗೆ ಇನ್ನೊಂದಿಷ್ಟು ಪುಷ್ಟಿ , ಕುತೂಹಲದ ದೃಷ್ಟಿ ಸಿಕ್ಕಿದೆ. ಅವರೀಗ ಹೊಸ ಟ್ರ್ಯಾಕ್ಟರ್ ಒಂದನ್ನ ಖರೀದಿಸಿದ್ದಾರೆ.
ಶೂಟಿಂಗ್ ಬಿಡುವು ಸಿಕ್ಕಾಗೆಲ್ಲ ಮೈಸೂರಿನ ಫಾರ್ಮ್ ಹೌಸ್ ಸೇರಿಬಿಡ್ತಿದ್ರು ದರ್ಶನ್. ಈಗ ಕೊರೋನಾ ಲಾಕ್ ಡೌನ್. ಶೂಟಿಂಗ್ ಮಾಡೋದು ತುಂಬಾ ಕಷ್ಟ. ಅದ್ರಲೂ ಥಿಯೇಟರ್ಗಳು ಸಂಪೂರ್ಣವಾಗಿ ಓಪನ್ ಆಗೋವರೆಗೂ ನಾನು ಶೂಟಿಂಗ್ ಸೆಟ್ಗೆ ಬರೋದಿಲ್ಲ ಎಂದು ಠಸ್ಸೇ ಒತ್ತಿಬಿಟ್ಟಿದ್ದಾರೆ ಐರಾವತ.
ಡಿ ಬಾಸ್ ಶೂಟಿಂಗ್ ಇಲ್ಲದ ಮೇಲೆ ಇನ್ನೆಲ್ಲಿ ಇರ್ತಾರೆ ಹೇಳಿ !? ತನ್ನ ಆತ್ಮೀಯರೊಟ್ಟಿಗೆ ಫಾರ್ಮ್ ಹೌಸ್ ಸೇರಿ ಖುಷಿಯಾಗಿ ಕೃಷಿ ಮಾಡ್ತಾರೆ. ಹಾರ್ಸ್ ರೈಡಿಂಗ್ ಮಾಡೋದು , ಜಾನುವಾರಗಳಿಗೆ ಮೇವು ಹಾಕೋದು , ಹಾಲು ಕರೆಯೋದು , ಸಪ್ಪು-ಸದೆ ಬೆಳೆಯುತ್ತಾ ಪ್ರಕೃತಿಯ ಮಧ್ಯೆ ಕಾಲಕಳೆಯೋದು , ಕಾಡಿಗೆ ಹೋಗಿ ಫೋಟೋಗ್ರಫಿ ಮಾಡೋದು ಡಿ ಬಾಸ್ ಅವರ ಹಾರ್ಟ್ಲೀ ಹವ್ಯಾಸಗಳು.
ಈಗ ಡಿ ಬಾಸ್ ಒಂದು ಹೆಜ್ಜೆ ಮುಂದೋಗಿ ಕೃಷಿ ಇನ್ನಿತರ ಚಟುವಟಿಕೆಗಳಿಗಾಗಿ ಹೊಸ ಟ್ರ್ಯಾಕ್ಟರ್ ರನ್ನ ಖರೀದಿಸಿದ್ದಾರೆ. ಶೋ ರೂಮ್ನಿಂದ ಟ್ರ್ಯಾಕ್ಟರ್ ಕೊಂಡು ತಾನೇ ಜಾಲಿ ಡ್ರೈವ್ ಮಾಡಿದ್ದಾರೆ. ದಾಸ ದರ್ಶನ್ ಟ್ರ್ಯಾಕ್ಟರ್ ಓಡಿಸುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.
ಅದೇನೆ ಇರಲಿ ‘ಬಂಗಾರದ ಮನುಷ್ಯ’ ಸಿನಿಮಾ ನೋಡಿ ಅದೆಷ್ಟೋ ಜನ ರೈತರಾದ್ರು.. ಈಗ ಡಿ ಬಾಸ್ ಫಾರ್ಮಿಂಗ್ ಫ್ಯಾಷನ್ ನೋಡಿ ಮತ್ತೊಂದಿಷ್ಟು ಮಂದಿ ಫಾರ್ಮರ್ಸ್ ಆದ್ರು ಅಚ್ಚರಿ ಇಲ್ಲ.
- ಶ್ರೀಧರ್ ಶಿವಮೊಗ್ಗ , ಫಿಲ್ಮ್ ಬ್ಯೂರೋ