ಕೀಚಕರಿಗೆ ಶಿಕ್ಷೆಯಾಗಲಿ: ದರ್ಶನ್

0
236

ಬೆಂಗಳೂರು: ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್​ ಸಾವಿನ ಬಗ್ಗೆ ನಟ ದರ್ಶನ್ ಟ್ವೀಟ್ ಮಾಡಿದ್ದಾರೆ. “ಮಧುವಿನ ಅನುಮಾನಾಸ್ಪದ ಸಾವಿನ ತನಿಖೆಯಾಗಬೇಕು. ಅತೀ ಶೀಘ್ರದಲ್ಲಿ, ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು. ಮಧುಗೆ ನ್ಯಾಯ ಸಿಗಬೇಕು. ಇಂಥ ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಶಿಕ್ಷೆಯಾಗಬೇಕು. ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕೆಂದು ಕೋರಿಕೊಳ್ಳುತ್ತಿದ್ದೇನೆ. ರೇಪ್ & ಮರ್ಡರ್ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ರೂಪುಗೊಳ್ಳಬೇಕು ಅಂತಾ ದರ್ಶನ್ ಟ್ವೀಟ್ ಮಾಡಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಜಸ್ಟಿಸ್​ ಫಾರ್ ಮಧು ಅಭಿಯಾನ ಸದ್ದು ಮಾಡುತ್ತಿದ್ದು, ವಿದ್ಯಾರ್ಥಿ ಸಮೂಹ ಸೇರಿದಂತೆ ಎಲ್ಲರೂ ಮಧು ಸಾವಿಗೆ ನ್ಯಾಯ ಸಿಗಲು ಹೋರಾಡುತ್ತಿದ್ದಾರೆ. ಜಸ್ಟಿಸ್​ ಫಾರ್​ ಮಧು ಎಂಬ ಹ್ಯಾಶ್ ಟ್ಯಾಗ್​ ಟ್ವಿಟರ್​ನಲ್ಲೂ ಸದ್ದು ಮಾಡಿದೆ.

LEAVE A REPLY

Please enter your comment!
Please enter your name here