ಸ್ಯಾಂಡಲ್​ವುಡ್ ಸಾರಥಿಗೆ 42ರ ಸಂಭ್ರಮ – ಹೇಗಿತ್ತು ಗೊತ್ತಾ ಡಿ.ಬಾಸ್ ಬರ್ತ್ ಡೇ ಸೆಲಬ್ರೇಷನ್?

0
158

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗಿಂದು 42ರ ಸಂಭ್ರಮ. ಸ್ಯಾಂಡಲ್​ವುಡ್​ನ ‘ಯಜಮಾನ’ ಡಿ.ಬಾಸ್​ ಬರ್ತ್​ಡೇ ಅಂದ್ರೆ ಅವರ ಫ್ಯಾನ್ಸ್​ಗೆ ಹಬ್ಬ. ಈ ವರ್ಷ ಇಷ್ಟು ವರ್ಷಕ್ಕಿಂತ ವಿಭಿನ್ನವಾಗಿ ಫ್ಯಾನ್ಸ್ ದರ್ಶನ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ದರ್ಶನ್ ಅವರ ಈ ಬಾರಿಯ ಹುಟ್ಟುಹಬ್ಬ ಆಚರಣೆ ಬಹಳ ಸರಳವಾಗಿತ್ತು.
ಪ್ರತಿವರ್ಷ ತಪ್ಪದೇ ದರ್ಶನ್ ಅವರನ್ನು ಭೇಟಿ ಮಾಡಿ, ಕೇಕ್ ಕತ್ತರಿಸಿ, ವಿಶೇಷ ಉಡುಗೊರೆ ನೀಡಿ, ಫೋಟೋ ಕ್ಲಿಕ್ಕಿಸಿಕೊಂಡು ಹೋಗುವ ಅಭಿಮಾನಿಗಳಿಗೆ ಲೆಕ್ಕವಿಲ್ಲ. ಆದರೆ ಈ ಬಾರಿ ಸಂಭ್ರಮ ಹೀಗಿರಲಿಲ್ಲ.
ರೆಬಲ್​ ಸ್ಟಾರ್ ಅಂಬರೀಶ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ದರ್ಶನ್ ಅವರು ಈ ಬಾರಿ ಅದ್ಧೂರಿಯಾಗಿ ಬರ್ತ್​ಡೇ ಸೆಲಬ್ರೇಷನ್ ಬೇಡ ಅಂತ ಡಿಸೈಡ್ ಮಾಡಿ, ತನ್ನ ಅಭಿಮಾನಿಗಳಲ್ಲಿ ಮನವಿ ಕೂಡ ಮಾಡಿದ್ರು. ಸ್ಯಾಂಡಲ್​ವುಡ್​ನ ಸಾರಥಿಯ ಮಾತನ್ನು ಸ್ವಾಗತಿಸಿದ ಅಭಿಮಾನಿಗಳು ಕೇಕ್ ಅಥವಾ ಯಾವ್ದೇ ಸಿಹಿ ತಂದಿಲ್ಲ. ಗಿಫ್ಟ್ ಎತ್ಕೊಂಡು ಬಂದಿಲ್ಲ, ಹಾರ-ತುರಾಯಿ ಹಾಕಿ ವಿಶ್ ಮಾಡಿಲ್ಲ.
ಹಾರ-ತುರಾಯಿ, ಕೇಕ್​, ಗಿಫ್ಟ್ ಬದಲಿಗೆ ಉಡುಗೊರೆ ರೂಪದಲ್ಲಿ ದವಸಧಾನ್ಯಗಳನ್ನು, ದರ್ಶನ್ ಇಷ್ಟ ಪಡೋ ಸಾಕು ಪ್ರಾಣಿ-ಪಕ್ಷಿಗಳನ್ನು ನೀಡಿ ವಿಶ್ ಮಾಡಿದ್ದಾರೆ. ಪ್ರಾಣಿ-ಪಕ್ಷಿಗಳು ದರ್ಶನ್ ಅವರ ಫಾರ್ಮ್ ಹೌಸ್​ನ ಸದಸ್ಯರಾಗಿವೆ. ಇನ್ನು, ಅಕ್ಕಿ-ಬೇಳೆ ದವಸ-ಧಾನ್ಯಗಳನ್ನು ದರ್ಶನ್ ತುಮಕೂರಿನ ಶ್ರೀ ಸಿದ್ಧಗಂಗಾ ಮಠ ಮತ್ತು ಅನಾಥಾಶ್ರಮಗಳಿಗೆ ತಲುಪಿಸಲಿದ್ದಾರೆ .
ಅಂಬರೀಶ್ ಅಗಲಿಕೆಯಿಂದ ಸರಳವಾಗಿ ಬರ್ತ್​ಡೇ ಆಚರಿಸಿಕೊಳ್ಳುವುದಾಗಿ ಹೇಳಿದ್ದರು ದರ್ಶನ್. ನಂತರ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರು ಲಿಂಗಕ್ಯರಾದ ಬಳಿಕ ಮಠಕ್ಕೆ ಭೇಟಿ ನೀಡಿದ್ದ ದರ್ಶನ್ ದಾಸೋಹಕ್ಕೆ ತಮ್ಮ ಕೈಲಾದ ದಾನ ನೀಡಲು ಮುಂದಾಗಿದ್ರು. ದರ್ಶನ್ ಅವರ ಈ ನಡೆ ಅಭಿಮಾನಿಗಳಿಗೂ ಇಷ್ಟವಾಗಿದ್ದು, ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಕ್ಕಿ, ಬೇಳೆ ತರಕಾರಿಗಳನ್ನು ಕೊಟ್ಟಿದ್ದಾರೆ.
ಸರಳವಾಗಿದ್ರು ಅರ್ಥಗರ್ಭಿತವಾಗಿ ಡಿ.ಬಾಸ್ ಅವರ ಹುಟ್ಟುಹಬ್ಬ ಆಚರಣೆಯಾಯ್ತು. ದರ್ಶನ್​ ಹುಟ್ಟುಹಬ್ಬದ ಗಿಫ್ಟ್ ಎಂಬಂತೆ ‘ಗಂಡುಗಲಿ ಮದಕರಿ ನಾಯಕ’ ಪೋಸ್ಟರ್ ರಿಲೀಸ್ ಆಗಿದೆ. ಇನ್ನೇನು ಮಾರ್ಚ್ 1 ರಂದು ಯಜಮಾನ ರಿಲೀಸ್ ಆಗ್ತಿದೆ. ಬಳಿಕ ಕುರುಕ್ಷೇತ್ರ ರಿಲೀಸ್ ಆಗುತ್ತೆ. ಒಟ್ಟಿನಲ್ಲಿ ದರ್ಶನ್ ಅಭಿಮಾನಿಗಳು ತುಂಬಾ ಖುಷಿಯಲ್ಲಿದ್ದಾರೆ. ಎನಿವೇ ಸ್ಯಾಂಡಲ್​ವುಡ್​ನ ಸ್ಟಾರ್ ನಟ ದರ್ಶನ್ ಅವರಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಶುಭಾಶಯಗಳು.
-ಚರಿತ ಪಟೇಲ್

LEAVE A REPLY

Please enter your comment!
Please enter your name here