Home ಸಿನಿ ಪವರ್ ಮಾನವೀಯತೆ ಮೆರೆದ ಸ್ಯಾಂಡಲ್​​ವುಡ್​ 'ಯಜಮಾನ'..!

ಮಾನವೀಯತೆ ಮೆರೆದ ಸ್ಯಾಂಡಲ್​​ವುಡ್​ ‘ಯಜಮಾನ’..!

ಚಾಲೆಂಜಿಂಗ್ ಸ್ಟಾರ್​ ಹೃದಯವಂತಿಕೆ ‘ದರ್ಶನ’

ಚಾಲೆಂಜಿಂಗ್ ಸ್ಟಾರ್ ದರ್ಶನ್​  ಸಿನಿಮಾಗಳಲ್ಲಿ ಉದ್ದುದ್ದ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸೋ ಜೊತೆಗೆ ತಮ್ಮ ಸಿನಿಮಾ ಮೂಲಕ ಒಂದೊಳ್ಳೆ ಮೆಸೇಜ್ ಕೂಡ ನೀಡ್ತಾರೆ. ದರ್ಶನ್​  ಕುರಿತ ತೆರೆ ಮೇಲಿನ ಸುದ್ದಿಗಳು ಬರ್ತಲೇ ಇರುತ್ತವೆ. ಆದ್ರೆ, ಡಿ.ಬಾಸ್ ಅವರ ತೆರೆ ಮರೆಯ ಸ್ಟೋರಿ ಎಷ್ಟೋ ಜನರಿಗೆ ಅಷ್ಟೊಂದು ಗೊತ್ತೇ ಇಲ್ಲ..! ದರ್ಶನ್ ಅವರ ಹೊಸ ರೂಪದ ಎಕ್ಸ್​ಕ್ಲ್ಯೂಸಿವ್ ಸ್ಟೋರಿ… ಇಲ್ಲಿದೆ… ಇದು ‘ಯಜಮಾನ’ನ ಮೆಗಾ ಪವರ್​ ಎಕ್ಸ್​ಕ್ಲ್ಯೂಸಿವ್… !

ಯಸ್​,  ಸ್ಯಾಂಡಲ್​ವುಡ್​​​​ನ ‘ಸಾರಥಿ’. ಅಭಿಮಾನಿಗಳ  ಪ್ರೀತಿಗೆ ‘ದಾಸ’ , ಕೋಟ್ಯಾಂತರ ಫ್ಯಾನ್ಸ್​ ಮನದಲ್ಲಿ ಗಟ್ಟಿಯಾಗಿ ಬೇರೂರಿರೋ ‘ಯಜಮಾನ’ ಚಾಲೆಂಜಿಂಗ್ ಸ್ಟಾರ್ ದರ್ಶನ್. ಡಿ.ಬಾಸ್​ ಸಿನಿಮಾ ಅಂದ್ರೆ ಅಭಿಮಾನಿಗಳಲ್ಲಿ ಅದೇನೋ ಒಂಥರಾ ಪುಳಕ..! ದಚ್ಚು ಸಿನಿಮಾ ಸೆಟ್ಟೇರುತ್ತಿದೆ ಅಂದಾಗಲೇ ಹಬ್ಬ..! ಸಿನಿಮಾ ರಿಲೀಸ್ ಆದ ಮೇಲೆ ಕೇಳ್ಬೇಕೆ.. ಸಂಭ್ರಮವೋ ಸಂಭ್ರಮ..!  ದಚ್ಚು ಮೂವಿ ಬಾಕ್ಸ್ ಆಫೀಸ್​ ಅನ್ನು ಉಡೀಸ್​  ಮಾಡೋದಂತು ಕನ್ಫರ್ಮ್.

ದಚ್ಚು ಸಿನಿಮಾ ಬಗ್ಗೆ ದಿನಾ ಮಾತಾಡ್ತಾನೇ ಇರ್ತೀವಿ. ಸಿನಿಮಾಗಳ ಮೂಲಕ ದರ್ಶನ್ ಯಾವಾಗಲೂ ಸುದ್ದಿಯಲ್ಲಿ ಇರ್ತಾರೆ. ಆದ್ರೆ ಸಿನಿಮಾದಿಂದ ಆಚೆಗೆ ದಚ್ಚು ಸುದ್ದಿ ಆಗೋದು ತೀರಾ ಅಂದ್ರೆ ತೀರಾ ಅಪರೂಪ. ದರ್ಶನ್ ಅವರ ಒಳ್ಳೆಯ ಕೆಲಸಗಳು ಅದೆಷ್ಟೋ ಗೊತ್ತೇ ಆಗಲ್ಲ.

ದಚ್ಚುವನ್ನು ವಿರೋಧಿಸೋರು ಕೂಡ ಈ ಸ್ಟೋರಿ ನೋಡಿದ್ರೆ ಅವರನ್ನು ಇನ್ನಿಲ್ಲದಂತೆ ಪ್ರೀತಿಸ್ತಾರೆ. ಯಾಕಂದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್​ ರೀಲ್​ನಲ್ಲಿ ಮಾತ್ರವಲ್ಲ, ರಿಯಲ್​ ಲೈಫ್​ನಲ್ಲೂ ಹೀರೋ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ದಚ್ಚು ತಾನು ಮಾಡೋ ಒಳ್ಳೆಯ ಕೆಲಸಕ್ಕೆ ಯಾವತ್ತೂ ಪಬ್ಲಿಸಿಟಿ ಬಯಸಲ್ಲ… ಹಾಗೆಯೇ ಯಾವತ್ತೂ ಪಬ್ಲಿಸಿಟಿಗಾಗಿ ಕೆಲಸ ಮಾಡಲ್ಲ..!

ಹೀಗೆ ದರ್ಶನ್ ಯಾರಿಗೂ ಗೊತ್ತಾಗದಂತೆ ಮಾಡಿದ ಒಂದು ಕೆಲಸ ಅವರ ಮೇಲೆ ಮತ್ತಷ್ಟು ಗೌರವನ್ನು ಹುಟ್ಟುಹಾಕಿದೆ. ಇದು ನಿಮ್ಮ ಪವರ್ ಟಿವಿಯ ಮೆಗಾ ಎಕ್ಸ್​ಕ್ಲ್ಯೂಸಿವ್… ಸ್ಯಾಂಡಲ್​ವುಡ್​ನ ಪ್ರೀತಿಯ ‘ಯಜಮಾನ’ನ ಹೃದಯವಂತಿಕೆಯ ರಿಯಲ್ ಸ್ಟೋರಿ..!  ಸ್ಯಾಂಡಲ್​ ವುಡ್  ‘ಸಾರಥಿ’ಯ ಸೂಪರ್ ಎಕ್ಸ್​​ಕ್ಲ್ಯೂಸಿವ್​ ಸ್ಟೋರಿ.

ಹೌದು, ಕಷ್ಟದಲ್ಲಿರೋ ಸಹ ಕಲಾವಿದರಿಗೆ ನೆರವು ನೀಡೀ ಮೂಲಕ ದರ್ಶನ್ ಮಾನವೀಯತೆ ಮೆರೆದಿದ್ದಾರೆ. ಆದರೆ, ತಾವು ಮಾಡಿದ ಕೆಲಸವನ್ನು, ತಾವು ಮಾಡಿದ ಸಹಾಯವನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ‘ಗಜ’ ನೆರವು ಪಡೆದ ಕಲಾವಿದರೇ ಪವರ್ ಟಿವಿ ಜೊತೆ ದಚ್ಚು ಮಾಡಿದ ಸಹಾಯವನ್ನು ಹೇಳಿಕೊಂಡಿದ್ದಾರೆ.

ದರ್ಶನ್ ಹಿರಿಯ ಸಹನಟ ಭರತ್ ಅವರ ಕಷ್ಟಕ್ಕೆ ನೆರವು ನೀಡಿದ್ದಾರೆ.  ಭರತ್ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರೋ ನಟ.  ಅವರು ಪಾರ್ಶ್ವವಾಯುಗೆ ತುತ್ತಾಗಿದ್ದರು. ಈ ಸಮಸ್ಯೆಯಿಂದ ವರ್ಷಗಟ್ಟಲೆ ನರಳಿದ್ದಾರೆ. ಹೀಗಾಗಿ ಕಳೆದ 10 ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಆದರೆ, ಅವರ ಕಷ್ಟದ ದಿನಗಳಲ್ಲಿ ಯಾರೂ ಯಾರೆಂದರೆ ಯಾರೂ ಜೊತೆಯಾಗಿ ನಿಲ್ಲಲಿಲ್ಲ. ದರ್ಶನ್  ಮಾತ್ರ ಅವರ ನೆರವಿಗೆ ನಿಂತಿದ್ದರು..!

ಕಷ್ಟಕಾಲಕ್ಕೆ ಯಾರೊಬ್ಬರೂ ಬರಲಿಲ್ಲ. ದರ್ಶನ್​ ಮಾತ್ರ ನಂಗೆ ಸಹಾಯ ಮಾಡಿದರು. ಅವರನ್ನು ಭೇಟಿಯಾಗಿ ಥ್ಯಾಂಕ್ಸ್ ಹೇಳಬೇಕೆಂದಿದ್ದೇನೆ ಅಂತ ಪವರ್ ಟಿವಿ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುವುದರ ಜೊತೆಗೆ ದರ್ಶನ್ ಅವರ ಮತ್ತೊಂದು ರೂಪವನ್ನು ಅನಾವರಣ ಮಾಡಿದ್ದಾರೆ ಭರತ್.

ಭರತ್ ಈಗ  10 ವರ್ಷಗಳ ಬಳಿಕ ಕಮ್​ ಬ್ಯಾಕ್ ಆಗುತ್ತಿದ್ದಾರೆ. ‘ಜಲ್ಲಿಕಟ್ಟು’ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಸೆಟ್​ನಲ್ಲಿ ಪವರ್ ಟಿವಿ ಪರವಾಗಿ ನಟ ಶೋಭರಾಜ್​​ ಅವರು ಭರತ್ ಅವರೊಡನೆ ಮಾತಾಡಿದ್ದಾರೆ. ಈ ವೇಳೆ ಭರತ್ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿ…ಕಷ್ಟದಲ್ಲಿ ಹೆಗಲುಕೊಟ್ಟ ದರ್ಶನ್ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.

ಹೀಗೆ  ದರ್ಶನ್ ಸದ್ದಿಲ್ಲದೆ ಅದೆಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ, ಮಾಡ್ತಿದ್ದಾರೆ. ದರ್ಶನ್ ಅವರ ಕೆಲಸ ನಿಜಕ್ಕೂ ಶ್ಲಾಘನೀಯ. ಕಷ್ಟದಲ್ಲಿರುವವರಿಗೆ ಮಿಡಿಯೋ ದರ್ಶನ್ ಅವರಿಗೆ ಮತ್ತಷ್ಟು ಒಳ್ಳೆಯದಾಗಲಿ… ಇನ್ನೂ ದೊಡ್ಡ ಮಟ್ಟಿನ ಯಶಸ್ಸು ಡಿ,ಬಾಸ್ ಅವರದ್ದಾಗಲಿ…ಅನ್ನೋದು ಪವರ್ ಟಿವಿಯ ಆಶಯ ಕೂಡ..

-ಚರಿತ ಪಟೇಲ್

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments