Sunday, May 29, 2022
Powertv Logo
Homeಸಿನಿಮಾಆಕಾಶದಲ್ಲೂ ರಜನಿಕಾಂತ್ 'ದರ್ಬಾರ್​​'!

ಆಕಾಶದಲ್ಲೂ ರಜನಿಕಾಂತ್ ‘ದರ್ಬಾರ್​​’!

ನಿಮ್ಗೆ ಗೊತ್ತೇ ಇದೆ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ‘ದರ್ಬಾರ್​’ ಸಿನಿಮಾ ಜನವರಿ 9ರಂದು ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ವಿದೇಶದಲ್ಲೂ ರಜನಿ ‘ದರ್ಬಾರ್​’ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ವ್ಹೇಟ್ ಮಾಡ್ತಿದ್ದಾರೆ. ಚಿತ್ರತಂಡ ಸದ್ಯ ಪ್ರಮೋಶನ್​ನಲ್ಲಿ ಬ್ಯುಸಿ ಇದೆ. ಆಕಾಶದಲ್ಲೂ ಸೌಂಡು ಮಾಡೋ ಮಟ್ಟಿಗೆ ಸಿನಿತಂಡ ಪ್ರಚಾರದಲ್ಲಿ ನಿರತವಾಗಿದೆ.
ಹೌದು ಹೈದರಾಬಾದ್​, ಚೆನ್ನೈ ಮೊದಲಾದ ನಗರಗಳಲ್ಲಿ ವಿಮಾನಗಳಲ್ಲಿ ದರ್ಬಾರ್ ಸಿನಿಮಾದ ಪೋಸ್ಟರ್​ಗಳನ್ನು ಅಂಟಿಸಿ ಪ್ರಮೋಶನ್ ಮಾಡಲಾಗುತ್ತಿದ್ದು, ಸಖತ್ ಹೈಪ್ ಕ್ರಿಯೇಟ್ ಆಗಿದೆ.  
ದರ್ಬಾರ್​ಗೆ ಎ.ಆರ್ ಮುಗರದಾಸ್​ ಆ್ಯಕ್ಷನ್​ಕಟ್ ಹೇಳಿದ್ದು, ರಜನಿಕಾಂತ್​​ ಆದಿತ್ಯ ಅರುಣಾಚಲಂ ಎಂಬ ಖಡಕ್ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ನಯನತಾರಾ ಅಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments