Home ಸಿನಿ ಪವರ್ ಡಾಲಿ `ದಾದಾಗಿರಿ’ಗೆ ಖದರ್​ ಟೈಟಲ್

ಡಾಲಿ `ದಾದಾಗಿರಿ’ಗೆ ಖದರ್​ ಟೈಟಲ್

ಡಾಲಿ ಧನಂಜಯ್ ದಾದಾಗಿರಿಗೆ ಖದರ್ ಟೈಟಲ್ ಇಡಲಾಗಿದೆ. ಅರ್ಥಾತ್ ಮಾಜಿ ಡಾನ್ ಎಂ.ಪಿ ಜರಾಮ್ ಬಯೋಪಿಕ್​ ಶೀರ್ಷಿಕೆ ಬಿಡುಗಡೆಯಾಗಿದೆ. ` ಹೆಡ್​ ಬುಷ್’ ಎಂದು ಹೆಸರಿಡಲಾಗಿದೆ.

ಹೌದು, ಈಗಾಗಲೇ ಜಯರಾಜ್ ಜೀವನಧಾರಿತ ಸಿನಿಮಾ ಸೆಟ್ಟೇರೋ ಬಗ್ಗೆ ಹಾಗೂ ಡಾಲಿ ಧನಂಜಯ್ ಜಯರಾಜ್ ಪಾತ್ರದಲ್ಲಿ ನಟಿಸುವ ಬಗ್ಗೆ ತಿಳಿದಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಿನಿಮಾ ಚಿತ್ರೀಕರಣ ಶುರುವಾಗಿರುತ್ತಿತ್ತು. ಆದರೆ, ಕೊರೋನಾ ಕಾರಣದಿಂದ ಸಿನಿಮಾ ಸೆಟ್ಟೇರುವುದು ತಡವಾಗಿದೆ.

ಸಿನಿಮಾ ಅನೌನ್ಸ್ ಮಾಡಿದ್ದ ತಂಡ ಇದುವರೆಗೆ ಟೈಟಲ್ ಘೋಷಿಸಿರಲಿಲ್ಲ. ಇವತ್ತು ಸೂಪರ್ ಟೈಟಲ್ ಅನ್ನು ರಿವೀಲ್ ಮಾಡಿದೆ.  ಅಗ್ನಿಶ್ರೀಧರ್​ ಅವರ ಆತ್ಮಕತೆ `ದಾದಾಗಿರಿಯ ದಿನಗಳು’ ಆಧಾರಿತ ಸಿನಿಮಾ ಹೆಡ್​​ ಬುಷ್. ಸಿನಿಮಾದ ಪ್ರಮುಖ ಪಾತ್ರ ಮಾಜಿ ಡಾನ್ ಜಯರಾಜ್ ಕುರಿತದ್ದಾಗಿದ್ದು, ಧನಂಜಯ್ ಜಯರಾಜ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅಗ್ನಿಶ್ರೀಧರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಅಶು ಬೆದ್ರ ಸಿನಿಮಾ ನಿರ್ಮಿಸುತ್ತಿದ್ದಾರೆ. ಶೂನ್ಯ ಹೆಡ್​ ಬುಷ್​ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನಿರ್ದೇಶಕನಾಗಿ ಅವರಿಗಿದು ಮೊದಲ ಸಿನಿಮಾ. ಹೆಡ್​​ ಬುಷ್ ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಮತ್ತು ಇಂಗ್ಲಿಷ್​ನಲ್ಲಿ ಬರಲಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments