Home uncategorized ಆನ್ ಲೈನ್ ಶಿಕ್ಷಣಕ್ಕಾಗಿ ಗುಡ್ಡವೇರಿ 'ಟೆಂಟ್' ನಿರ್ಮಿಸಿದ ಮಕ್ಕಳು

ಆನ್ ಲೈನ್ ಶಿಕ್ಷಣಕ್ಕಾಗಿ ಗುಡ್ಡವೇರಿ ‘ಟೆಂಟ್’ ನಿರ್ಮಿಸಿದ ಮಕ್ಕಳು

ದಕ್ಷಿಣ ಕನ್ನಡ : ಆನ್ ಲೈನ್ ಶಿಕ್ಷಣಕ್ಕೆ ಪೂರಕ ನೆಟ್ ವರ್ಕ್ ಸಿಗದ ಹಿನ್ನೆಲೆ ವಿದ್ಯಾರ್ಥಿಗಳು ಗುಡ್ಡದ ಮೇಲೊಂದು ಟೆಂಟ್ ನಿರ್ಮಿಸಿ ಅಲ್ಲಿಂದಲೇ ತರಗತಿ ಆಲಿಸುತ್ತಿರುವ ದೃಶ್ಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿ ಅರಣ್ಯದೊಳಗೆ ಕಂಡು ಬರುತ್ತಿದೆ. ಇಲ್ಲಿನ ಶಿಬಾಜೆ ಗ್ರಾಮದಲ್ಲಿ ನೂರಾರು ವಿದ್ಯಾರ್ಥಿಗಳಿದ್ದು ಅದರಲ್ಲಿ ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈಗಾಗಲೇ ಆನ್ ಲೈನ್ ತರಗತಿ ಆರಂಭವಾಗಿದೆ. ಆದರೆ ಗ್ರಾಮದಲ್ಲಿ ನೆಟ್ ವರ್ಕ್ ಇಲ್ಲದೇ ಮಕ್ಕಳು ಆನ್ ಲೈನ್ ತರಗತಿಗೆ ಹಾಜರಾಗಲು ಪರದಾಡುವಂತಾಗಿತ್ತು. ಇದರಿಂದ ನೆಟ್ ವರ್ಕ್ ಗಾಗಿ ಹುಡುಕಾಡಲು ಶುರು ಮಾಡಿದ ವಿದ್ಯಾರ್ಥಿಗಳು ತಲುಪಿದ್ದು ಪೆರ್ಲ ಬೈಕರ ಗುಡ್ಡೆಗೆ. ಅರಣ್ಯದೊಳಗೆ ಸಂಚರಿಸಬೇಕಾದ ಈ ಗುಡ್ಡ ಎತ್ತರದ ಪ್ರದೇಶವಾದ್ದರಿಂದ ಮೊಬೈಲ್ ಸಿಗ್ನಲ್ ಸಿಗುತ್ತಿದ್ದು, ಇದನ್ನ ಮನಗಂಡ ವಿದ್ಯಾರ್ಥಿಗಳು ಮನೆಯಿಂದ ಸೀರೆಯನ್ನ ತೆಗೆದುಕೊಂಡು ಹೋಗಿ ಮರಗಳ ಸಹಾಯದಿಂದ ಟೆಂಟ್ ನಿರ್ಮಿಸಿದ್ದಾರೆ‌. ಮಾತ್ರವಲ್ಲದೇ ಪ್ರತಿದಿನ ಸುಮಾರು 15 ವಿದ್ಯಾರ್ಥಿಗಳು ಗುಡ್ಡವನ್ನೇರಿ ಈ ಟೆಂಟ್ ನಲ್ಲಿ ಒಂದುಗೂಡುತ್ತಾರೆ. ಬೇರೆ ಬೇರೆ ತರಗತಿಗಳಲ್ಲಿ ಕಲಿಯುತ್ತಿರುವ ಇವರು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ತನಕ ಅಲ್ಲಿ ಇದ್ದು, ಆನ್ ಲೈನ್ ಮೂಲಕ ಪಾಠ ಆಲಿಸುತ್ತಾರೆ‌. ಆದರೆ ಕಾಡು ಮೃಗಗಳ ದಾಳಿ ಭೀತಿ, ಸೊಳ್ಳೆ ಕಾಟ ಈ ಮಕ್ಕಳಿಗೆ ಕಾಡುತ್ತಿದ್ದರೂ, ಆ ಎಲ್ಲಾ ಸವಾಲನ್ನ ಮೆಟ್ಟಿ ನಿಂತು ಮಕ್ಕಳು ತರಗತಿಗೆ ಹಾಜರಾಗುತ್ತಿದ್ದಾರೆ. ಕಳೆದ 12 ವರುಷಗಳಿಂದ ಮೊಬೈಲ್ ಟವರ್ ನಿರ್ಮಾಣಕ್ಕಾಗಿ ಸಂಸದ, ಶಾಸಕರಿಗೆ ಹೋದ ಪತ್ರಗಳಿಗೆ ಲೆಕ್ಕವಿಲ್ಲ.‌ ಆದರೆ ಇದುವರೆಗೂ ಪರಿಹಾರ ಮಾತ್ರ ಮರೀಚಿಕೆಯೇ ಆಗಿ ಉಳಿದಿದೆ. ಹಾಗಾಗಿ ಇದೀಗ ಮತ್ತೆ ಟವರ್ ನಿರ್ಮಾಣದ ಬೇಡಿಕೆ ಮುನ್ನೆಲೆಗೆ ಬಂದಿದೆ. ಒಂದು ಕಡೆ ಕೋವಿಡ್ ಸಂದಿಗ್ಧತೆ,‌ ಇನ್ನೊಂದೆಡೆ ಕಾಡು ಮೃಗಗಳ ದಾಳಿ ಭೀತಿ ನಡುವೆಯೂ ಪೋಷಕರು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆತಂಕದಿಂದಲೇ ಈ ಗುಡ್ಡಕ್ಕೆ ಕಳುಹಿಸುತ್ತಿದ್ದಾರೆ.‌

ಇರ್ಷಾದ್ ಕಿನ್ನಿಗೋಳಿ, ಪವರ್ ಟಿವಿ, ಮಂಗಳೂರು

LEAVE A REPLY

Please enter your comment!
Please enter your name here

- Advertisment -

Most Popular

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

ಚೆನ್ನೈ ವಿರುದ್ಧ ಹಸಿರು ಜೆರ್ಸಿಯಲ್ಲಿ ಆರ್​ ಸಿ ಬಿ ಕಣಕ್ಕೆ..! ಕಾರಣ ಏನ್ ಗೊತ್ತಾ?

  ದುಬೈ :  13 ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಳೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಲಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ...

Recent Comments