‘ಟೈಮೂ ನಂದು, ತಾರೀಕೂ ನಂದು’ ಅಂತ ಕನ್ನಡಕ್ಕೆ ಎಂಟ್ರಿ ಕೊಟ್ಟ ಸಲ್ಮಾನ್ ಖಾನ್..!

0
978

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್​​ ‘ಟೈಮೂ ನಂದು, ತಾರೀಕೂ ನಂದು’ ಅಂತ ಕನ್ನಡಕ್ಕೆ ಬಂದಿದ್ದಾರೆ..! ಅರೆ, ಕನ್ನಡ ಸಿನಿಮಾದಲ್ಲಿ ಸಲ್ಲು ಅಂತ ಆಶ್ಚರ್ಯವಾಯ್ತು..? ಹೌದು, ಸಲ್ಲು ಅಭಿನಯದ ದಬಾಂಗ್ -3 ಕನ್ನಡದಲ್ಲೂ ರಿಲೀಸ್ ಆಗ್ತಿದೆ. ಇದರೊಂದಿಗೆ ಸ್ಯಾಂಡಲ್​ವುಡ್​ನಲ್ಲೂ ಬಾಲಿವುಡ್ ಸ್ಟಾರ್ ಸದ್ದು ಮಾಡಲಿದ್ದಾರೆ..!
ದಬಾಂಗ್ 3 ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಪ್ರಭುದೇವ್ ಆ್ಯಕ್ಷನ್ ಕಟ್ ಹೇಳ್ತಿರೋ ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಸಲ್ಲು ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ತಿದ್ದಾರೆ. ಹಿಂದಿ, ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಮೋಷನ್ ಪೋಸ್ಟರ್ನಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಈ ಪೋಸ್ಟರ್​ನಲ್ಲಿ ‘ಟೈಮೂ ನಂದು, ತಾರೀಕೂ ನಂದು’ ಅನ್ನೋ ಡೈಲಾಗಿದೆ. ನೀವಿನ್ನೂ ನೋಡಿಲ್ಲ ಅಂತಾದ್ರೆ.. ಇಲ್ಲಿದೆ ಲಿಂಕ್…

LEAVE A REPLY

Please enter your comment!
Please enter your name here