ದಬಾಂಗ್​-3 : ಕಿಚ್ಚನ ಫಸ್ಟ್​ ಲುಕ್​ ರಿಲೀಸ್ ಮಾಡಿದ ಸಲ್ಲು!

0
380

ಬಾಲಿವುಡ್​ನ ಬಹು ನಿರೀಕ್ಷಿತ ಸಿನಿಮಾ ದಬಾಂಗ್​ 3 ಚಿತ್ರತಂಡದಿಂದ ಅಭಿಮಾನಿಗಳಿಗೆ ಒಂದರ ಮೇಲೊಂದು ಗುಡ್​ ನ್ಯೂಸ್​ ಸಿಕ್ತಾನೆ ಇದೆ. ಇದೀಗ ಮತ್ತೊಂದು ಗಿಫ್ಟ್​ ಸಿಕ್ಕಿದ್ದು ವಿಶೇಷವಾಗಿ ಸ್ಯಾಂಡಲ್​ವುಡ್​ ಬಾದ್​ ಶಾ ಸುದೀಪ್​ ಅಭಿಮಾನಿಗಳು ಗಿಫ್ಟ್​ ನೋಡಿ ಫುಲ್​ ಖುಷಿಯಾಗಿದ್ದಾರೆ.

ಭುದೇವ್​​ ನಿದೇರ್ಶನದ ದಬಾಂಗ್​-3 ಸಿನಿಮಾ ಸೆಟ್ಟೇರಿದಲ್ಲಿಂದಲೂ ಸದ್ದು ಮಾಡ್ತಾನೆ ಇದೆ. ಕಳೆದ ತಿಂಗಳು ಈ ಚಿತ್ರದ ಟ್ರೈಲರ್​​ ರಿಲೀಸ್​ ಆಗಿದ್ದು, ಕನ್ನಡದಲ್ಲಿ ಸಲ್ಮಾನ್​ ಡಬ್​ ಮಾಡಿರುವ ವಿಷಯ ಬಾರಿ ಸದ್ದು ಮಾಡಿತ್ತು.

ದಬಾಂಗ್​ ಹಾಗೂ ದಬಾಂಗ್​​​-2 ರಲ್ಲಿ ಚುಲ್​​​ಬುಲ್ ಪಾಂಡೆ ಆಗಿ ನಟಿಸಿದ್ದ ಸಲ್ಮಾನ್ ಇಲ್ಲೂ ಅದೇ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಟೀಸರ್​ ಕೂಡ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿತ್ತು. ಸದ್ಯದ ವಿಷಯ ಅಂದ್ರೆ ದಬಾಂಗ್​ 3 ಚಿತ್ರದ ಶೂಟಿಂಗ್​ ಕಂಪ್ಲೀಟ್​ ಆಗಿ ಚಿತ್ರತಂಡ ಪೋಸ್ಟ್​ ಪ್ರೊಡಕ್ಷನ್​​​ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ವಿಷಯ ತಿಳಿದ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ.

ವಿನೋದ್ ಖನ್ನಾ ಜನ್ಮದಿನದ ನೆನಪಲ್ಲಿ ಸಲ್ಮಾನ್ ಖಾನ್ ಟ್ವೀಟ್​ ಮಾಡುವ ಮೂಲಕ ಗೌರವ ಅರ್ಪಿಸಿದ್ದಾರೆ. ಶೂಟಿಂಗ್ ಕಡೆಯ ದಿನ ತಾವು ಮಾತನಾಡಿರುವ ವಿಡಿಯೋವೊಂದನ್ನು ಸಲ್ಮಾನ್ ಖಾನ್ ತಮ್ಮ ಟ್ವೀಟರ್​​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ.

ಸಲ್ಮಾನ್ ಖಾನ್​​​​​​ ತಮ್ಮ ಟ್ವಿಟರ್​ ಖಾತೆ ಹೆಸರನ್ನು ಚುಲ್​​ಬುಲ್ ಪಾಂಡೆ ಎಂದು ಬದಲಿಸಿಕೊಂಡಿದ್ದು ತಮ್ಮ ಟ್ವಿಟರ್​​ ಸುದೀಪ್ ಫಸ್ಟ್​​​ಲುಕ್ ಪೋಟೋವನ್ನು ಶೇರ್​​​​​​ ಮಾಡಿದ್ದಾರೆ. ಬಲ್ಲಿ ಪಾತ್ರ ಮಾಡಿರುವ ಕಿಚ್ಚ ಸುದೀಪ್ ಅವರನ್ನು ನಿಮಗೆ ಪರಿಚಯ ಮಾಡಿಸುತ್ತಿದ್ದೇನೆ ಎಂದು ಸಲ್ಮಾನ್ ಫೋಟೋ ಜೊತೆಗೆ ಕ್ಯಾಪ್ಷನ್ ನೀಡಿದ್ದಾರೆ. ಸಲ್ಲು ರಿಲೀಸ್ ಮಾಡಿರುವ ಕಿಚ್ಚನ ಫಸ್ಟ್​ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 

ಸಲ್ಮಾನ್ ಖಾನ್ ಫಿಲಮ್ಸ್ ಹಾಗೂ ಅರ್ಬಾಜ್ ಖಾನ್ ಪ್ರೊಡಕ್ಷನ್ ಬ್ಯಾನರ್ ಅಡಿ ಡ್ಯಾನ್ಸಿಂಗ್​ ಸ್ಟಾರ್ ಪ್ರಭುದೇವ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಡಿಸೆಂಬರ್ 20 ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು ಸಲ್ಮಾನ್ ಹಾಗೂ ಸುದೀಪ್ ಇಬ್ಬರನ್ನೂ ತೆರೆ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ವ್ಹೇಟ್ ಮಾಡ್ತಿದ್ದಾರೆ. 

 ಈ ಹಿಂದೆ ಸುದೀಪ್​, ಸಲ್ಮಾನ್ ಖಾನ್, ಪ್ರಭುದೇವ್​ ಡ್ಯಾನ್ಸ್ ಮಾಡಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್​​ ಆಗಿತ್ತು. ಇನ್ನು ಇದೀಗ  ಸಿನಿಮಾದಲ್ಲೇ ಈ ದಿಗ್ಗಜರು ಒಟ್ಟಾಗಿ ಕಾಣಿಸಿಕೊಂಡಿರೋದ್ರಿಂದ ಚಿತ್ರ ಎಷ್ಟರ ಮಟ್ಟಿಗೆ ಹಿಟ್ ಆಗುತ್ತೆ ಅನ್ನೋದು ಕುತೂಹಲ. 

 

 

 

 

 

 

 

LEAVE A REPLY

Please enter your comment!
Please enter your name here