ಡಿ.ಕೆ. ಶಿವಕುಮಾರ್ ಗೆ ಸಿದ್ಧಾರ್ಥ್ ಕರೆ ಮಾಡಿ ಏನು ಹೇಳಿದ್ರು ಗೊತ್ತಾ?

0
199

ಬೆಂಗಳೂರು : ಮಾಜಿ ಸಿಎಂ ಎಸ್. ಕೃಷ್ಣರವರ ಅಳಿಯ ಕೆಫೆ ಕಾಫೀ ಡೇ ಮಾಲೀಕ ಸಿದ್ಧಾರ್ಥ್ ಹೆಗಡೆ ನಿನ್ನೆ ರಾತ್ರಿ 8 ಗಂಟೆಯಿಂದ ಮಂಗಳೂರಿನ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದಾರೆ. ಇನ್ನೂ ಕೂಡ ಸಿದ್ಧಾರ್ಥ್ ಅವರ ಸುಳಿವು ಸಿಕ್ಕಿಲ್ಲ.ಹೀಗಾಗಿ ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ಸುಳಿದಾಡುತ್ತಿದೆ. ನೇತ್ರಾವತಿ ನದಿಯಲ್ಲಿಯೂ ತೀವ್ರ ಹುಡುಕಾಟ ನಡೆಯುತ್ತಿದೆ.

ಸಿದ್ದಾರ್ಥ್ ನಾಪತ್ತೆ ಪ್ರಕರಣದಿಂದ ಅವರ ಕುಟುಂಬ ವರ್ಗ ಮತ್ತು ಕಾಫಿ ಡೇ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ. ಮಾಜಿ ಸಿಎಂ ಎಸ್.ಎಂ. ಕೃಷ್ಣರವರ ಮನೆಗೆ ಅನೇಕ ಗಣ್ಯರು ಭೇಟಿ ನೀಡುತ್ತಿದ್ದಾರೆ. ಇನ್ನು, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಸಿದ್ಧಾರ್ಥ್ ನಾಪತ್ತೆ ಕುರಿತು ಟ್ವೀಟ್ ಮಾಡಿದ್ದಾರೆ. ಭಾನುವಾರ ಸಿದ್ಧಾರ್ಥ್ ನನಗೆ ಕರೆ ಮಾಡಿ ಅರ್ಜೆಂಟಾಗಿ ನಿಮ್ಮನ್ನ ಭೇಟಿಯಾಗಬೇಕಿದೆ. ನನ್ನನ್ನ ನೀವು ಭೇಟಿಯಾಗಬಹುದಾ? ಎಂದು ಕೇಳಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಇನ್ನು, ಸಿದ್ಧಾರ್ಥ್ ಹೆಸರಲ್ಲಿ ಹರಿದಾಡುತ್ತಿರುವ ಪತ್ರದ ಬಗ್ಗೆ ಉಲ್ಲೇಖಿಸಿರುವ ಡಿಕೆಶಿ, ಪತ್ರದ ಬಗ್ಗೆ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here