Monday, August 15, 2022
Powertv Logo
Homeರಾಜ್ಯಮುಂಬೈಗೆ ಡಿಕೆಶಿ ಆಗಮನ, ಹೋಟೆಲ್​ನ ಎದುರು ಹೈಡ್ರಾಮ

ಮುಂಬೈಗೆ ಡಿಕೆಶಿ ಆಗಮನ, ಹೋಟೆಲ್​ನ ಎದುರು ಹೈಡ್ರಾಮ

ಮುಂಬೈ :  ಮುಂಬೈನಲ್ಲಿರುವ ಅತೃಪ್ತ ಶಾಸಕರನ್ನು ಭೇಟಿಮಾಡಲು  ರಿನೈಸೆನ್ಸ್​ ಹೋಟೆಲ್​ಗೆ ಡಿಕೆಶಿ ಭೇಟಿ ನೀಡಿದಾಗ  ಹೋಟೆಲ್​ ಎದುರು ದೊಡ್ಡ ಹೈಡ್ರಾಮವೇ ನಡೆದಿದೆ.

ಅತೃಪ್ತ ಶಾಸಕರು ಡಿಕೆಶಿ ಭೇಟಿ ನೀಡಲು ನಿರಾಕರಿಸಿ, ನಮಗೆ ಡಿಕೆಶಿ ಮತ್ತು ಕುಮಾರಸ್ವಾಮಿಯಿಂದ ಜೀವಬೆದರಿಕೆ ಇದೆ ಎಂದು ಕಂಪ್ಲೆಟ್ ನೀಡಿದ್ರು. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಡಿಕೆಶಿಗೆ ಹೋಟೆಲ್ ಒಳಗೆ ಹೋಗಲು ಅವಕಾಶ  ನೀಡಿದೆ ತಡೆದಿದ್ದಾರೆ.  ಆದರೆ ಪಟ್ಟು ಬಿಡದ ಸಚಿವ  ಡಿ ಕೆ ಶಿವಕುಮಾರ್ ‘’ನಾವೇಕೆ ಹೋಟೆಲ್ ಒಳಗೆ ಹೋಗಬಾರದು, ಬಿಜೆಪಿ ನಾಯಕರನ್ನು ಮಾತ್ರ ಬಿಡ್ತೀರಾ? ನಾವು ಯಾವುದೇ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಬಂದಿಲ್ಲ, ನಮ್ಮ ಪಕ್ಷದವರ ಜೊತೆ ಹೃದಯಪೂರ್ವಕವಾಗಿ ಮಾತಾಡಲು ಬಂದಿದ್ದೇವೆ  ಇಡೀ ದಿನ ಇಲ್ಲೇ ಇದ್ದು ಕಾಯುತ್ತೇನೆ”, ಸ್ಥಳ ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದ್ದಿದ್ದಾರೆ, ಇನ್ನೊಂದೆಡೆ ಡಿಕೆಶಿ ಆಗಮನಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಗೋ ಬ್ಯಾಕ್ ಡಿಕೆಶಿ… ಗೋ ಬ್ಯಾಕ್​ ಡಿಕೆಶಿ ಎಂದು ಘೋಷಣೆ ಕೂಗುತ್ತಿದ್ದಾರೆ

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments