ಸುಮಲತಾ ಪಕ್ಷದ ವಿರುದ್ಧ ಹೋಗಲ್ಲ: ಡಿಕೆಶಿ ವಿಶ್ವಾಸ

0
214

ಹುಬ್ಬಳ್ಳಿ: ಸುಮಲತಾ ಅಂಬರೀಶ್ ಅವರು ಪಕ್ಷದ ವಿರುದ್ಧ ಹೋಗಲ್ಲ ಅನ್ನೋ ವಿಶ್ವಾಸವಿದೆ ಅಂತ ಜಲಸಂಪನ್ಮೂಲ ಸಚಿವ ಡಿ. ಕೆ ಶಿವಕುಮಾರ್ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸುಮಲತಾ ಅವರು ಸ್ಪರ್ಧಿಸೋ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, “ಸುಮಲತಾ ಮನವೊಲಿಸುವುದಕ್ಕಾಗಿ ಯಾರೂ ಏನೂ ಹೇಳಿಲ್ಲ. ಆದ್ರೇ ನಾನೇ ಮಾತನಾಡಿಸಿ ಪಕ್ಷದ ನಿಲುವು ಏನು ಅನ್ನೋದನ್ನು ತಿಳಿಸಿದ್ದೆ. ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋ ವಿಚಾರದಲ್ಲಿ ಪಕ್ಷ ತೀರ್ಮಾನ ಮಾಡಿದ್ದಾಗಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. ಸುಮಲತಾ  ಕಾಂಗ್ರೆಸ್ ಪಕ್ಷದ ವಿರುದ್ಧ ಹೋಗುವುದಿಲ್ಲ. ಈ ಬಗ್ಗೆ ನಮಗೆ ವಿಶ್ವಾಸವಿದೆ” ಅಂತ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here