Home ದೇಶ-ವಿದೇಶ ಗಂಟೆಗೆ 200 ಕಿ.ಮೀ ವೇಗದಲ್ಲಿದೆ ಫನಿ - ಒಡಿಶಾದ ಹಲವೆಡೆ ಹೈ ಅಲರ್ಟ್​..!

ಗಂಟೆಗೆ 200 ಕಿ.ಮೀ ವೇಗದಲ್ಲಿದೆ ಫನಿ – ಒಡಿಶಾದ ಹಲವೆಡೆ ಹೈ ಅಲರ್ಟ್​..!

ಭುವನೇಶ್ವರ: ಫನಿ ಚಂಡಮಾರುತ ಈಗಾಗಲೇ ರಾಜ್ಯದ ಹಲವೆಡೆ ಪರಿಣಾಮ ಬೀರಿದೆ ಅಂತ ಒಡಿಶಾ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಒಡಿಶಾದಲ್ಲಿ ಈ ಹಿಂದೆ 1999ರಲ್ಲಿ 10,000 ಜನರ ಸಾವಿಗೆ ಕಾರಣವಾದ ಸುಪರ್ ಸೈಕ್ಲೋನ್ ನಂತರ ಇದೇ ಮೊದಲ ಬಾರಿಗೆ ಭೀಕರ ಚಂಡ ಮಾರುತ ಅಪ್ಪಳಿಸಲಿದೆ.

ಇದುವರೆಗೂ ಒಡಿಶಾದಲ್ಲಿ ಒಟ್ಟು 11 ಲಕ್ಷ ಜನರ ಸ್ಥಳಾಂತರಿಸಲಾಗಿದ್ದು, ಶಾಲಾ-ಕಾಲೇಜುಗಳಲ್ಲಿ 11 ಲಕ್ಷ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಜನರು ಮನೆ ಬಿಟ್ಟು ಹೊರಗೆ ಬರದಂತೆ ಒಡಿಶಾ ಸಿಎಂ ನವೀನ್​ ಪಟ್ನಾಯಕ್​ ಸೂಚನೆ ನೀಡಿದ್ದಾರೆ. ಒಡಿಶಾದ ಪುರಿ ಜಿಲ್ಲೆಯ ಮೇಲೆ ಚಂಡಮಾರುತ ಹೆಚ್ಚು ಪ್ರಭಾವ ಬೀರಲಿದೆ. ಗಂಟೆಗೆ 180-200 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಈಗಾಗಲೇ ರಕ್ಷಣಾ ಪಡೆ ಒಡಿಶಾದಲ್ಲಿ ಬೀಡುಬಿಟ್ಟಿದೆ. ವಾಯುಸೇನೆ, ನೌಕಾಸೇನೆ, ರಕ್ಷಣಾ ಪಡೆಗಳು ಅಲರ್ಟ್​ನಲ್ಲಿವೆ. ಒಡಿಶಾದ 11ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ.

ಒಡಿಶಾ ಗೃಹಸಚಿವಾಲಯ ಹಲವೆಡೆ ಕಂಟ್ರೋಲ್​ ರೂಂಗಳನ್ನು ತಯಾರು ಮಾಡಿದ್ದು, ನೆರವಿನ ಅಗತ್ಯವಿದ್ದವರು 1938ಗೆ ಕರೆ ಮಾಡುವಂತೆ ಸೂಚಿಸಲಾಗಿದೆ. ಭುವನೇಶ್ವರದಿಂದ ಹೊರಡುವ ಎಲ್ಲ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದ್ದು, ಶುಕ್ರವಾರ 9.30ರಿಂದ ಶನಿವಾರ ಸಂಜೆ 6ಗಂಟೆಯವರೆಗೆ ಕೊಲ್ಕತ್ತಾ ಏರ್​ಪೋರ್ಟ್​ ಸೇವೆ ಸ್ಥಗಿತಗೊಳಿಸಲಿದೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments