ಗದಗ: 17ನೇ ರಾಷ್ಟ್ರಮಟ್ಟದ ಸಿನಿಯರ್ ಜ್ಯೂನಿಯರ್ ಮತ್ತು ಸಬ್ ಜ್ಯೂನಿಯರ್ ಮೌಂಟೆನ ಬೈಕ್ ಸೈಕ್ಲಿಂಗ್ ಚಾಂಪಿಯನ್ಶಿಪ್ ಪ್ರಯುಕ್ತ ಇಂದು ಕೆ.ಎಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೈಕಲ್ ಜಾಥಾಗೆ ಚಾಲನೆ ನೀಡಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರು ಸೈಕಲ್ ಜಾಥಾಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಜಿಲ್ಲಾ ಕ್ರೀಡಾಂಗಣದಿಂದ ಸಾಲುಮರದ ತಿಮ್ಮಕ್ಕ ಪಾರ್ಕ್ ವರಿಗೆ ಸೈಕಲ್ ಜಾಥಾ ನಡೆಸಲಾಯಿತು. ಸೈಕಲ್ ಜಾಥಾದಲ್ಲಿ ಜಿಲ್ಲಾಧಿಕಾರಿ ಎಮ್.ಸುಂದರೇಶ್ ಬಾಬು,ಸಿಇಓ ಭರತ ಎನ್. ಎಸ್ಪಿ ಯತೀಶ್ ಎನ್, ಡಿಎಫ್ಓ ಸೂರ್ಯಸೇನ್ ಹಾಗೂ ನೂರು ಸೈಕ್ಲಿಸ್ಟಗಳು ಭಾಗಿಯಾಗಿದ್ದರು.