ಹುಬ್ಬಳ್ಳಿ : ಸಣ್ಣ ಸಣ್ಣ ಸಂಗತಿಗಳಿಗೆ ಯಾಕೆ ಕೆರಳುತ್ತಾರೆ..? ಸ್ಟೇಟಸ್ ಹಾಕಿದವನ ವಿರುದ್ಧ ದೂರು ಕೊಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಖಂಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಗಲಾಟೆ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು ಸಣ್ಣ ಸಣ್ಣ ಸಂಗತಿಗಳಿಗೆ ಯಾಕೆ ಕೆರಳುತ್ತಾರೆ..? ಸ್ಟೇಟಸ್ ಹಾಕಿದವನ ವಿರುದ್ಧ ದೂರು ಕೊಡಲಿ ಯಾಕೆ ಕಾನೂನು ಕೈಗೆ ತಗೋತಾರೆ ಸೆಕ್ಯುಲರ್ಗಳು ಈಗ್ಯಾಕೆ ಬಾಯಿ ಮುಚ್ಕೊಂಡಿದ್ದಾರೆ..? ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಇವರಿಗೆ ಯಾರು ಕೊಟ್ರು..? ಬೀದಿಯಲ್ಲಿ ನಿಂತು ಯಾಕೆ ಗೂಂಡಾಗಿರಿ ಮಾಡ್ತಿದ್ದಾರೆ..? ಇವರು ಮಾತ್ರ ಉಪ್ಪು ಹುಳಿ ಖಾರ ತಿನ್ನೋದಾ.. ನಾವು ತಿನ್ನಲ್ವಾ..? ಎಂದು ಸಿ.ಟಿ.ರವಿ ಕಿಡಿ ಕಾಡಿದ್ದಾರೆ.