ಶಾಸಕ ಸಿ.ಟಿ ರವಿ ಕಾರು ಡಿಕ್ಕಿ – ರಸ್ತೆಬದಿಯಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

0
263

ತುಮಕೂರು : ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅವರ ಕಾರು ಡಿಕ್ಕಿ ಹೊಡೆದು ರಸ್ತೆಬದಿಯಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಕುಣಿಗಲ್ ತಾಲೂಕಿನ ಆಲಪ್ಪನಗುಡ್ಡ ಬಳಿ ನಡೆದಿದೆ.

ಸೂರೇನಹಳ್ಳಿ ಶಶಿಕುಮಾರ್ (28), ಸುನೀಲ್​ ಗೌಡ (27) ಮೃತ ದುರ್ದೈವಿಗಳು. 13 ಮಂದಿ ಸ್ನೇಹಿತರು 2 ಕಾರಿನಲ್ಲಿ ಪ್ರವಾಸ ಹೋಗಿದ್ದು, ಶೃಂಗೇರಿ ಪ್ರವಾಸವನ್ನು ಮುಗಿಸಿ ಊರಿಗೆ ವಾಪಸ್ಸಾಗುವಾಗ ಉರ್ಕೇಹಳ್ಳಿ ಗೇಟ್ ಬಳಿ (ರಾಷ್ಟ್ರೀಯ ಹೆದ್ದಾರಿ 75) ನಿಂತಿದ್ದರು. ಈ ವೇಳೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವೇಗವಾಗಿ ಬರುತ್ತಿದ್ದ ಸಿ.ಟಿ ರವಿ ಅವರ ಕಾರು ಡಿಕ್ಕಿ ಹೊಡೆದಿದೆ. ಘಟನೆಯನ್ನು ಇಬ್ಬರು ಸಾವನ್ನಪ್ಪಿದ್ದರೆ, ಒಬ್ಬರು ಕಾಲು ಮುರಿದೆ.

ಯುವಕರು ಸಾವನಪ್ಪಿದರೂ ಪ್ರತಿಕ್ರಿಯೆ ನೀಡದೇ, ಸಾಂತ್ವನ ಹೇಳದೆ, ಗಾಯಾಳುಗಳನ್ನು ಚಿಕಿತ್ಸೆಗೆ ದಾಖಲಿಸದೇ ಶಾಸಕರು ಮತ್ತು ಅವರ ಜೊತೆಯಲ್ಲಿದ್ದವರು ಗೂಂಡಾ ವರ್ತನೆ ತೋರಿಸಿದ್ದಾರೆ. ಮದ್ಯಪಾನ ಮಾಡಿ ಕಾರು ಚಲಾಯಿಸಿ ಅಮಾಯಕರ ಜೀವ ತೆಗೆದಿದ್ದಾರೆ ಎಂದು ಮೃತ ಸುನೀಲ್ ಅವರ ಸಂಬಂಧಿ ಪ್ರಸಾದ್ ಗೌಡ ಆರೋಪಿಸಿದ್ದಾರೆ.

ಘಟನೆ ವೇಳೆ ಸಿ.ಟಿ ರವಿ ಕೂಡ ಕಾರಿನಲ್ಲಿದ್ದರು. ಇವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

LEAVE A REPLY

Please enter your comment!
Please enter your name here