ಶಾಸಕ ಸಿ.ಟಿ ರವಿ ಅವರ ರಕ್ಷಣೆಗೆ ನಿಂತರಾ ಪೊಲೀಸರು?

0
250

ಬೆಂಗಳೂರು : ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅವರ ರಕ್ಷಣೆಗೆ ಪೊಲೀಸರೇ ನಿಂತಿದ್ದಾರಾ ಎಂಬ ಪ್ರಶ್ನೆಯೊಂದು ಮೂಡುತ್ತಿದೆ. ಏಕಂದರೆ ಎಫ್ಐಆರ್​ನಲ್ಲಿ ಶಾಸಕರ ಹೆಸರೇ ಇಲ್ಲ..! ಅಷ್ಟೇ ಏಕೆ ದೂರು ಪ್ರತಿಯಲ್ಲೂ ಸಿ.ಟಿ ರವಿ ಅವರ ಹೆಸರಿಲ್ಲ..!
ತುಮಕೂರು ಜಿಲ್ಲೆಯ ಕುಣಿಗಲ್ ಆಲಪ್ಪನಗುಡ್ಡ ಬಳಿ ಸಿ.ಟಿ ರವಿ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಸೂರೇನಹಳ್ಳಿ ಶಶಿಕುಮಾರ್ (28) ಮತ್ತು ಸುನೀಲ್​ ಗೌಡ (27) ಎಂಬಿಬ್ಬರು ಮೃಪಟ್ಟಿದ್ದು, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ್ಯಕ್ಸಿಡೆಂಟ್​ ನಡೆದಾಗ ಮೃತರ ಸ್ನೇಹಿತರು, ಶಾಸಕರೇ ಮದ್ಯಪಾನ ಮಾಡಿ ಕಾರು ಚಲಾಯಿಸಿ, ಘಟನೆಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೆ ಶಾಸಕರು ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನೂ ಮಾಡಿಲ್ಲ ಎಂದು ಹೇಳಿದ್ದರು. ಆದರೆ, ಕುಣಿಗಲ್ ಪೊಲೀಸ್​ ಸ್ಟೇಷನ್​ನಲ್ಲಿ ನೀಡಿರುವ ದೂರಿನಲ್ಲಿ ಶಾಸಕರ ಹೆಸರನ್ನು ನಮೂದಿಸಿಲ್ಲ. ದೂರು ಪ್ರತಿಯಲ್ಲಿ ಶಾಸಕರ ಹೆಸರು ಇಲ್ಲ. ಶಾಸಕರ ಪ್ರಭಾವಕ್ಕೆ ಒಳಗಾಗಿ ದೂರುದಾರರಿಂದ ಪೊಲೀಸರೇ ಹೇಳಿ ದೂರು ಬರೆಸಿಕೊಂಡರೇ ಎಂಬ ಅನುಮಾನ ಮೂಡುತ್ತಿದೆ. ಎಫ್​ಐಆರ್​ನಲ್ಲೂ ಶಾಸಕರ ಹೆಸರಿಲ್ಲ. ಇದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

LEAVE A REPLY

Please enter your comment!
Please enter your name here