Tuesday, January 18, 2022
Powertv Logo
Homeರಾಜ್ಯಮಳೆಗೆ ನೆಲ ಕಚ್ಚಿದ ಬೆಳೆ, ದುಬಾರಿಯಾಯ್ತು ತರಕಾರಿ ಬೆಲೆ

ಮಳೆಗೆ ನೆಲ ಕಚ್ಚಿದ ಬೆಳೆ, ದುಬಾರಿಯಾಯ್ತು ತರಕಾರಿ ಬೆಲೆ

ಬೆಂಗಳೂರು : ಸಿಲಿಕಾನ್ ಸಿಟಿ ಸುತ್ತಮುತ್ತ ಹಾಗೂ ನೆರೆಯ ರಾಜ್ಯಗಳಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ತರಕಾರಿ ಬೆಲೆ ಗಗನಕ್ಕೇರಿದೆ.

15 ದಿನಗಳ ಹಿಂದೆ 30 ರೂ.ಗೆ ಲಭ್ಯವಿದ್ದ 1 ಕೆಜಿ ಟೊಮೇಟೊ ಬೆಲೆ, ಈಗ 100 ರೂ.ಗೆ ಏರಿಕೆಯಾಗಿದೆ. ತರಕಾರಿಗಳು ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಪೂರೈಕೆಯಾಗುತ್ತಿವೆ.

ಆದರೆ ಈ ಜಿಲ್ಲೆಗಳ ಟೊಮೇಟೊ ಬೆಳೆಯುವ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಮಳೆ ನೀರಿನಿಂದಾಗಿ ಹೊಲಗಳಲ್ಲಿ ಬೆಳೆಗಳು ಕೊಳೆಯಲು ಪ್ರಾರಂಭಿಸುತ್ತಿದ್ದರೆ, ಮಳೆಯ ಸಮಯದಲ್ಲಿ ಕೆಲಸ ಮಾಡಲು ಕೂಲಿಗಳು ಲಭ್ಯವಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಿದ್ದಾರೆ ರೈತರು.

ಆಲೂಗಡ್ಡೆ 25 ರೂ, ಮೆಣಸಿನಕಾಯಿ 30 ರಿಂದ 40 ರೂಪಾಯಿ, ಬದನೆಕಾಯಿ 40 ರೂಪಾಯಿ, ಈರುಳ್ಳಿ 30 ರೂ, ಕೊತ್ತಂಬರಿ ಸೊಪ್ಪು ಸೇರಿ ಎಲ್ಲ ದರ ಏರಿಕೆಯಾಗಿದೆ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಕೆಆರ್ ಪುರಂ, ಯಶವಂತಪುರ ಮತ್ತು ಗಾಂಧಿ ಬಜಾರ್ ಗಳಲ್ಲಿ ದುಬಾರಿ ಬೆಲೆಯಿಂದಾಗಿ ಗ್ರಾಹಕರು ತರಕಾರಿ ಖರೀದಿಗೆ ಮುಂದಾಗುತ್ತಿಲ್ಲ.

3 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments