Monday, August 15, 2022
Powertv Logo
Homeರಾಜ್ಯಕೋಳಿಗಾಗಿ ಮುಗಿಬಿದ್ದ ಜನ!

ಕೋಳಿಗಾಗಿ ಮುಗಿಬಿದ್ದ ಜನ!

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಕೋಳಿಕೇರಿ ಗ್ರಾಮದ ಬಳಿ ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಕೋಳಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಕೋಳಿ ಸಾಗಿಸುತ್ತಿದ್ದ ಲಾರಿ ಆದ್ದರಿಂದ ಅಪಘಾತವಾದ ತಕ್ಷಣ ಅದರಲ್ಲಿದ್ದ ನೂರಾರು ಕೋಳಿಗಳು ಚಲ್ಲಾಪಿಲ್ಲಿಯಾಗಿ ಸತ್ತು ಬಿದ್ದಿವೆ.

ಕೊಳಿಕೇರಿ ಸಮೀಪವೇ ಅಪಘಾತ ಸಂಭವಿಸಿದ್ದು, ಗ್ರಾಮದ ಕೆಲವು ಜನ ಸೇರಿದಂತೆ, ಅಕ್ಕಪಕ್ಕದ ಇನ್ನಿತರ ಗ್ರಾಮದ ಜನ ಬಿದ್ದಿರುವ ಜೀವಂತ ಕೋಳಿಗಳನ್ನು ಸಾಗಿಸಿದ್ದಾರೆ.  ಅಪಘಾತದಲ್ಲಿ ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಗೆ ಯಾವುದೇ ರೀತಿಯ ಗಂಭೀರ ಸ್ವರೂಪದ ಗಾಯಗಳಾಗಿಲ್ಲ.

ಆದರೆ ಅವರುಗಳು ಅಪಘಾತವಾದ ಲಾರಿಯನ್ನುನೋಡುವುದೊ, ತಾವು ಅಪಘಾತದಲ್ಲಿ ಬದುಕಿದ್ದರ ಬಗ್ಗೆ ಸಂತೋಷಪಡುವುದೊ, ಇಂಥ ವಿಷಮ ಸಮಯದಲ್ಲಿ ಜನ ಅವರಿಗೆ ಸಹಾಯ ಹಸ್ತ ಚಾಚದೆ, ಅವರ ಕೋಳಿಗಳನ್ನು ದೋಚುವ ಬಗ್ಗೆ ತಲೆಕೆಡಿಸಿಕೊಳ್ಳುವುದೊ ತಿಳಿಯದೆ ತಲೆಯ ಮೇಲೆ ಕೈ ಹೊತ್ತು ಕೂತಿದ್ದಾರೆ. ಆದರೆ, ಲಕ್ಷಾಂತರ ಬೆಲೆ ಬಾಳುವ ಸಾವಿರಾರು ಕೋಳಿಗಳು ಮೃತಪಟ್ಟಿವೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

4 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments