Home ರಾಜ್ಯ ಕೃಷಿಕರಿಂದಲೇ ಬೆಳೆ ನಷ್ಟ ಸಮೀಕ್ಷೆ ..!

ಕೃಷಿಕರಿಂದಲೇ ಬೆಳೆ ನಷ್ಟ ಸಮೀಕ್ಷೆ ..!

ಕೋಲಾರ : ರಾಜ್ಯದಲ್ಲಿನ ರೈತರುಗಳೆ ಇನ್ನು ಮುಂದೆ ಖುದ್ದಾಗಿ ಬೆಳೆ ಸಮೀಕ್ಷೆ ನಡೆಸುವ ವ್ಯವಸ್ಥೆಯು ಜಾರಿಗೆ ಬಂದಿದೆ. ಬರಗಾಲ ಅಥವ ಪ್ರವಾಹದ ಪರಿಸ್ಥಿತಿಯಲ್ಲಿ ಬೆಳೆ ನಷ್ಟದ ಪ್ರಮಾಣವನ್ನು ಸರ್ಕಾರಕ್ಕೆ ಇನ್ನು ಮುಂದೆ ರೈತರೆ ರವಾನಿಸಬಹುದಾದ ವ್ಯವಸ್ಥೆಯು ಇದಾಗಿದೆ..!

ಬರಗಾಲವಿರಲಿ, ಅತಿವೃಷ್ಟಿಯಿರಲಿ ರೈತ ಸಮುದಾಯವು ಸದಾಕಾಲ ಪ್ರತಿಕೂಲ ಪರಿಣಾಮವನ್ನು ಎದುರಿಸಲೇಬೇಕಾಗಿದೆ. ಇಂಥಹ ಪರಿಸ್ಥಿತಿಯಲ್ಲಿ ಬೆಳೆಯ ನಷ್ಟ ಪರಿಹಾರಕ್ಕಾಗಿ ಅನ್ನದಾತರು ಆಡಳಿತಗಾರರ ಕಡೆಗೆ ನೋಡುವುದು ಸಹಜ. ನಷ್ಟದ ಸಮರ್ಪಕವಾದ ವಿವರವನ್ನು ಸರ್ಕಾರಕ್ಕೆ ಕೊಡದಿದ್ರೆ ಫಜೀತಿಯಾಗುವುದು ಖಚಿತ. ಈ ಕಾರಣಕ್ಕಾಗಿ ಮೊಬೈಲ್ ಆಪ್ ಮೂಲಕ ನಷ್ಟದ ನಿಖರ ಮಾಹಿತಿಯನ್ನು ಕೊಡುವ ಹೊಸ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದೆ.
ರಾಜ್ಯದಲ್ಲಿ ಎರಡು ವರ್ಷದಿಂದ ಕೃಷಿ ಇಲಾಖೆಯ ವತಿಯಿಂದಲೇ ನಡೆಸಿದ ಬೆಳೆ ಸಮೀಕ್ಷೆಯ ವಿಧಾನದ ಬಗ್ಗೆ ದೂರುಗಳು ಕೇಳಿಬಂದಿತ್ತು. ಇದ್ರಿಂದಾಗಿ ಈ ವರ್ಷದಿಂದ ತಮ್ಮ ಬೆಳೆಯ ವಿವರಗಳನ್ನು ರೈತರೇ ಮೊಬೈಲ್ ಆಪ್ ಮೂಲಕ ಸರ್ಕಾರಕ್ಕೆ ರವಾನಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಛಾಯಾಚಿತ್ರಗಳ ಸಮೇತ ಮೊದಲ ಹಂತದಲ್ಲಿ ಜಮೀನಿನ ಬೆಳೆಯನ್ನು ರೈತರೇ ಅಪ್ಲೋಡ್ ಮಾಡಬೇಕು. ನಂತ್ರದ ಎರಡು ಹಾಗೂ ಮೂರನೆ ಹಂತದಲ್ಲಿ ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಭೇಟಿಯಿತ್ತು ಮಾಹಿತಿಯನ್ನು ಪರಿಶೀಲಿಸಿ ಖಚಿತಪಡಿಸ್ತಾರೆ.
ನಿಸರ್ಗ ವಿಕೋಪದಿಂದ ಬೆಳೆ ನಷ್ಟವಾದಾಗ ವಿಮೆ ಪಡೆಯೋದಿಕ್ಕೆ ಈ ಪದ್ದತಿಯು ನೆರವಾಗಲಿದೆ. ಅಷ್ಟು ಮಾತ್ರವಲ್ಲ, ಅರ್ಹ ರೈತರಿಗೆ ಬೆಂಬಲ ಬೆಲೆ ಪಡೆಯೋದಿಕ್ಕೂ ಇದು ಸಹಕಾರಿಯಾಗಿದೆ. ರೈತರ ಬಳಿ ಆಂಡ್ರಾಯ್ಡ್ ಮೊಬೈಲ್ ಇಲ್ಲದಿರುವ ರೈತರು ನೆರೆಯ ರೈತರ ಮೊಬೈಲ್ ಮೂಲಕ ಮಾಹಿತಿಯನ್ನು ಅಪ್ಲೋಡ್ ಮಾಡಿಕೊಳ್ಳಬಹುದು.
ಒಟ್ನಲ್ಲಿ, ರೈತರ ಬೆಳೆಗಳು ನಷ್ಟವಾದಾಗ ತಿಂಗಳುಗಟ್ಟಲೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಕಿರುಕುಳಕ್ಕೆ ಈಗ ಜಾರಿಗೆ ಬಂದಿರುವ ಬೆಳೆ ಸಮೀಕ್ಷೆಯ ಆಧುನಿಕ ಪದ್ದತಿಯು ಬ್ರೇಕ್ ಹಾಕುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.
-ಆರ್.ಶ್ರೀನಿವಾಸಮೂರ್ತಿ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments