Thursday, September 29, 2022
Powertv Logo
Homeಕ್ರೀಡೆವಿರಾಟ್​ ಕೊಹ್ಲಿ ನ್ಯೂ ಹೇರ್ ಸ್ಟೈಲ್

ವಿರಾಟ್​ ಕೊಹ್ಲಿ ನ್ಯೂ ಹೇರ್ ಸ್ಟೈಲ್

ನವದೆಹಲಿ: ದುಬೈನಲ್ಲಿ ಇತ್ತೀಚಿಗೆ ಮುಗಿದ ಏಷ್ಯಾಕಪ್ ಟಿ-20 ಪಂದ್ಯಗಳ ಮೂಲಕ ಭರ್ಜರಿ ಫಾರ್ಮ್​ಗೆ ಮರಳಿರುವ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದೀಗ ಅವರ ಲುಕ್​ ಅನ್ನೇ ಬದಲಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ಅವರು ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಹೇರ್​ ಸ್ಟ್ರೈಲ್ ಮಾಡಿಕೊಂಡಿರುವ ಕೊಹ್ಲಿ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ 5 ಪಂದ್ಯಗಳಲ್ಲಿ ಎರಡು ಅರ್ಧ ಶತಕ ಮತ್ತು ಒಂದು ಶತಕದ ನೆರವಿನಿಂದ ಒಟ್ಟು 276 ರನ್ ಕಲೆಹಾಕಿದ್ದರು. ಏಷ್ಯಾಕಪ್​ನಲ್ಲಿ ಎರಡನೇ ಅತ್ಯಧಿಕ ರನ್​ ಗಳಿಸದ ಆಟತಾರ ಎಂಬ ಹೆಸರನ್ನ ವಿರಾಟ್​ ಪಡೆದುಕೊಂಡಿದ್ದರು.

ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಪಂದ್ಯದಲ್ಲಿ ಕೇವಲ 61 ಎಸೆತಗಳಲ್ಲಿ ಅಜೇಯ 122 ರನ್ ಬಾರಿಸಿ 3 ವರ್ಷಗಳ ಶತಕದ ಬರವನ್ನು ಕೊಹ್ಲಿ ನೀಗಿಸಿದ್ದರು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿರುವ ಕೊಹ್ಲಿ ತಮ್ಮ ಹಳೆಯ ಫಾರ್ಮ್​ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.

- Advertisment -

Most Popular

Recent Comments