ಬೆಂಗಳೂರು : ಕೊರೋನಾ ನಿಯಂತ್ರಣಕ್ಕೆ ಮತ್ತೆ ಲಾಕ್ಡೌನ್ ಮೊರೆ ಹೋಗಲಾಗಿದೆ. ಬೆಂಗಳೂರಲ್ಲಿ ಸದ್ಯದ ಮಟ್ಟಿಗೆ 7 ದಿನಗಳ ಲಾಕ್ಡೌನ್ ಘೋಷಣೆಯಾಗಿದೆ. ಕೊರೋನಾ ಮಹಾಮಾರಿ ಲಗ್ಗೆ ಇಟ್ಟಲ್ಲಿಂದ ವೈದ್ಯರು, ಪೊಲೀಸರು ಸೇರಿದಂತೆ ‘ವಾರಿಯರ್ಸ್’ಗೆ ನಿದ್ದೆ ಇಲ್ಲದಂತಾಗಿದೆ. ಅವರ ಶ್ರಮ ನಿಜಕ್ಕೂ ಸ್ಮರಣೀಯ, ಶ್ಲಾಘನೀಯ.
ಇದೀಗ ಪೊಲೀಸರಿಗೆ ಯುವಕರ ಸಾಥ್ ಸಿಕ್ಕಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರಿಗೆ ಕೈ ಜೋಡಿಸ್ತಿದ್ದಾರೆ. ಕೋವಿಡ್ ವಾಲೆಂಟಿಯರ್ಸ್ ಆಗಿ ಸೇವೆ ಮಾಡಲು ಈಗಾಗಲೇ ಬೆಂಗಳೂರಲ್ಲಿ ಬರೋಬ್ಬರಿ 8 ಸಾವಿರ ಮಂದಿ ಯುವಕರು ನೋಂದಣಿ ಮಾಡಿಕೊಂಡಿದ್ದಾರೆ. ಈ ಕೋವಿಡ್ ವಾಲೆಂಟಿಯರ್ಸ್ ಪೊಲೀಸರ ಕೆಲಸ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ. ಪೊಲೀಸರ ಜೊತೆ ರಸ್ತೆಗಳಲ್ಲಿ ಬಂದೋಬಸ್ತ್, ಬ್ಯಾರಿಕೇಡ್ ಬಳಿ ವಾಹನಗಳ ತಪಾಸಣೆ, ಪೊಲೀಸ್ ಸ್ಟೇಷನ್ಗಳಲ್ಲಿ ಕಂಪ್ಯೂಟರ್ ಆಪರೇಟಿಂಗ್ ಸೇರಿದಂತೆ ನಾನಾ ಕೆಲಸಗಳಿಗೆ ಯುವಕರು ನಿಯೋಜನೆಗೊಂಡಿದ್ದಾರೆ. ಈ ಮೂಲಕ ಸಾವಿರಾರು ಯುವಕರು ಪೊಲೀಸರಿ ಕೊರೋನಾ ವಿರುದ್ಧದ ಹೋರಾಟಕ್ಕೆ ಹೆಗಲುಕೊಟ್ಟಿದ್ದಾರೆ.