ಬೆಂಗಳೂರು : ರಾಜ್ಯ ಸರ್ಕಾರ ಕೊವಿಡ್ ಪರೀಕ್ಷೆಗೆ ದರವನ್ನು ನಿಗದಿ ಮಾಡಿದೆ. ಸರ್ಕಾರದಿಂದ ಖಾಸಗಿ ಲ್ಯಾಬ್ ಗಳಿಗೆ ಕಳುಹಿಸುವ ಸ್ಯಾಂಪಲ್ಗಳ RT-PCR ಕೊವಿಡ್ ಪರೀಕ್ಷೆಗೆ 2000 ರೂ ನಿಗದಿ ಮಾಡಲಾಗಿದೆ. ಅಲ್ಲದೆ ಸ್ವಯಂಪ್ರೇರಣೆಯಿಂದ ಖಾಸಗಿಯಾಗಿ RT-PCR ಪರೀಕ್ಷೆಗೊಳಪಡುವವರಿಗೆ ಗರಿಷ್ಠ 3000 ಮತ್ತು ರಾಪಿಡ್ ಆ್ಯಂಟಿಜನ್ ಪರೀಕ್ಷೆಗೆ 700 ರೂ ನಿಗದಿ ಪಡಿಸಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಸರ್ಕಾರದಿಂದ ಖಾಸಗಿ ಲ್ಯಾಬ್ ಗಳಿಗೆ ಕಳುಹಿಸುವ ಸ್ಯಾಂಪಲ್ ಗಳ RT-PCR ಕೋವಿಡ್ ಪರೀಕ್ಷೆಗೆ ₹2,000 ನಿಗದಿ ಮಾಡಲಾಗಿದೆ. ಸ್ವಯಂಪ್ರೇರಣೆಯಿಂದ ಖಾಸಗಿಯಾಗಿ RT-PCR ಪರೀಕ್ಷೆಗೊಳಪಡುವರಿಗೆ ಗರಿಷ್ಠ ₹3,000 ಮತ್ತು ರಾಪಿಡ್ ಆಂಟಿಜೆನ್ ಪರೀಕ್ಷೆಗೆ ₹700 ದರ ನಿಗದಿ ಮಾಡಲಾಗಿದೆ.@CMofKarnataka pic.twitter.com/mBAlPY6J3m
— Dr Sudhakar K (@mla_sudhakar) July 25, 2020