Home ರಾಜ್ಯ ಕಾಫಿನಾಡಲ್ಲಿ ಬಿಟ್ಟೂ ಬಿಡದೇ ಕಾಡುತ್ತಿದೆ ಕೊರೊನಾ ಆತಂಕ !

ಕಾಫಿನಾಡಲ್ಲಿ ಬಿಟ್ಟೂ ಬಿಡದೇ ಕಾಡುತ್ತಿದೆ ಕೊರೊನಾ ಆತಂಕ !

ಚಿಕ್ಕಮಗಳೂರು: ಕುವೈತ್ ನಿಂದ ಗರ್ಭಿಣಿ ಸೇರಿದಂತೆ ಕಾಫಿನಾಡಲ್ಲಿ ನಾಲ್ವರು ಪೊಲೀಸರಿಗೆ ಹೆಮ್ಮಾರಿ ಕೊರೋನ ದೃಢವಾಗಿದೆ. ಇಂದಿಗೆ ತಿಂಗಳಲ್ಲಿ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಪಾಸಿಟಿವ್ ಕೇಸ್ ಇರಲಿಲ್ಲ. ಆದರೆ ಇಂದು ಒಂದು ಸಾವು ಸೇರಿ ಠಾಣೆಯಲ್ಲಿರೋ ಪೊಲೀಸರು, ಜೈಲಿನಲ್ಲಿರೋ ಖೈದಿಗಳು ಸೇರಿದಂತೆ ಎಲ್ಲರಲ್ಲೂ ಕೊರೋನಾ ಪತ್ತೆಯಾಗ್ತಿರೋದು ಜಿಲ್ಲೆಯ ಜನರನ್ನ ಆತಂಕಕ್ಕೆ ದೂಡಿದೆ. ಈ ಮಧ್ಯೆ ಹೆಮ್ಮಾರಿ ಕೊರೋನ ಸಮುದಾಯಕ್ಕೆ ಕಾಲಿಟ್ಟಿದ್ಯಾ ಎಂಬ ಅನುಮಾನ ಕೂಡ ಮೂಡಿದೆ. ಇಂದು ಒಂದೇ ದಿನ ತಮಿಳುನಾಡು, ಮುಂಬೈನಿಂದ ಬಂದ ಮೂವರು, ಫಾರಿನ್ ರಿಟರ್ನ್ ಗರ್ಭೀಣಿ ಸೇರಿದಂತೆ ನಾಲ್ವರು ಪೊಲೀಸರಲ್ಲೂ ಕೊರೋನಾ ಪತ್ತೆಯಾಗಿದೆ. ನಾಲ್ವರು ಪೊಲೀಸರು ತರೀಕೆರೆಯ ಡಿ.ವೈ.ಎಸ್.ಪಿ. ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತರೀಕೆರೆಯ ಡಿ.ವೈ.ಎಸ್.ಪಿ. ಆಫೀಸನ್ನ ಸೀಲ್ ಡೌನ್ ಮಾಡಲಾಗಿದೆ. ಡಿ.ವೈ.ಎಸ್.ಪಿ. ಸೇರಿದಂತೆ ಹಲವು ಪೊಲೀಸರನ್ನ ಕ್ವಾರಂಟೈನ್ ಗೆ ಸೂಚಿಸಲಾಗಿದೆ. ಪಾಸಿಟಿವ್ ಬಂದ ಪೊಲೀಸರಿಗೆ ಕೊರೋನಾ ಎಲ್ಲಿಂದ ಬಂತು ಅಂತ ಜಿಲ್ಲಾಡಳಿತ ಅವರ ಟ್ರಾವೆಲ್ ಹಿಸ್ಟರಿ ಬಗ್ಗೆ ಹುಡುಕಾಟದಲ್ಲಿದೆ. ಈ ಮಧ್ಯೆ, ಕುವೈತ್ ನಿಂದ ಬಂದು ಉಡುಪಿಯಲ್ಲಿ ಕ್ವಾರಂಟೈನ್ ಮುಗಿಸಿ ಶೃಂಗೇರಿ ಮನೆಗೆ ಬಂದ ಗರ್ಭೀಣಿ ಮಹಿಳೆಗೆ ಮನೆಗೆ ಬಂದ ಮೇಲೆ ಸೋಂಕು ಪತ್ತೆಯಾಗಿದೆ. ತರೀಕೆರೆ ಡಿ.ವೈ.ಎಸ್.ಪಿ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಕಡೂರು ತಾಲೂಕಿನ ಬೀರೂರಿನಲ್ಲಿ ವಾಸವಿದ್ದು, ಪೇದೆ ವಾಸವಿದ್ದ ಹಾಲಪ್ಪ ಬಡಾವಣೆಯನ್ನ ಸೀಲ್ ಡೌನ್ ಮಾಡಲಾಗಿದೆ. ಇಂದು ಪಾಸಿಟಿವ್ ಬಂದ ಎಂಟು ಕೇಸಲ್ಲಿ ನಾಲ್ಕು ಕೇಸ್ ಮುಂಬೈ, ತಮಿಳುನಾಡು ಹಾಗೂ ಫಾರಿನ್ ರಿಟರ್ನ್ ಆದ್ರೆ, ಉಳಿದ ನಾಲ್ಕು ಕೇಸ್ ಗಳಿಗೆ ಮೂಲವೇ ಇಲ್ಲವಾಗಿದೆ. ನಾಲ್ವರು ಪೊಲೀಸರಿಗೆ ಕೊರೋನ ಎಲ್ಲಿಂದ ಬಂತು ಎಂದು ಜಿಲ್ಲಾಡಳಿತ ಕೂಡ ತಲೆಕೆಡಿಸಿಕೊಂಡಿದ್ದು ಸೋಂಕಿತರ ಸೋಂಕಿನ ಮೂಲದ ಹುಡುಕಾಟದಲ್ಲಿದೆ. ತಿಂಗಳ ಹಿಂದೆ ಒಂದೂ ಕೇಸಿರದ ಕಾಫಿನಾಡಲ್ಲಿ ಇಂದು ದಿನಂಪ್ರತಿ ಬರುತ್ತಿರೋ ಕೇಸ್ ಹಾಗೂ ಅವುಗಳ ಹಿನ್ನೆಲೆ ಜಿಲ್ಲೆಯ ಜನರಲ್ಲಿ ಆತಂಕ ತಂದೊಡ್ಡಿರೋದಂತು ಸತ್ಯ…

LEAVE A REPLY

Please enter your comment!
Please enter your name here

- Advertisment -

Most Popular

ಕೊರೋನಾಗೆ ಕ್ಯಾರೆ ಅನ್ನದೆ ನೃತ್ಯ ಮಾಡಿ ಧೈರ್ಯ ತುಂಬಿದ ಹೋಟೆಲ್ ಮಾಲಕ

ಉಡುಪಿ : ಕೋರೊನಾ ಬಂದ್ರೆ ನಮ್ಮ ಕಥೆ ಮುಗಿತು ಅನ್ನೋ ಈ ಸಂದರ್ಭದಲ್ಲಿ, ಕೋಟದ ಕೊರೋನಾ ಪಾಸಿಟಿವ್ ವ್ಯಕ್ತಿಯೋರ್ವರು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕೋಟದ ಹೋಟೆಲ್ ಮಾಲಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದ...

ಸಂಬಳ ಕೇಳಿದರೆ ಕೆಲಸದಿಂದ ತೆಗೆಯುತ್ತೇವೆ ! ವಿಮ್ಸ್​​ನಲ್ಲಿ ಇದೆಂಥಾ ಅಮಾನವೀಯತೆ ?

ಬಳ್ಳಾರಿ : ಕಳೆದ ಆರು ತಿಂಗಳಿನಿಂದ ಸಂಬಳವೇ ಸಿಕ್ಕಿಲ್ಲ ಅಂತ ಬಳ್ಳಾರಿಯ ವಿಮ್ಸ್ ನಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿ ಧರಣಿ ಕೂತಿದ್ದಾರೆ. ಕೊರೊನಾ ವಾರಿಯರ್ ಅಂತ ಸರ್ಕಾರ ನಮ್ಮನ್ನ ಕರೆಯುತ್ತೆ. ಆದ್ರೆ ನಮಗೆ...

ಕೊರೋನಾ ಗೆದ್ದ 96 ವೃದ್ಧೆ ಈಗ ಕೊರೋನಾ ರೋಗಿಗಳಿಗೆ ಸ್ಫೂರ್ತಿ

ಚಿತ್ರದುರ್ಗ : ಕೊರೋನಾ ಸೋಂಕಿನ ಭೀತಿ ಎಲ್ಲೆಡೆ ಹಬ್ಬಿದ್ದರೂ, ಆತ್ಮಿವಿಶ್ವಾಸವೊಂದಿದ್ದರೆ ಕೊರೋನಾ ಸೋಂಕಿನಿಂದ ಗುಣವಾಗಬಹುದು ಎನ್ನುವುದಕ್ಕೆ ಈ ವೃದ್ಧೆಯೇ ಸಾಕ್ಷಿ. ಚಿತ್ರದುರ್ಗ  ‌ಜಿಲ್ಲೆಯ ಹಿರಿಯೂರು ಮೂಲದ 96 ವರ್ಷದ ವೃದ್ದೆ ಕರೋನಾ ಸೋಂಕಿನಿಂದ...

ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ, ಪ್ರಕರಣ ದಾಖಲು

ಉಡುಪಿ : ಹೋಮ್ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೋರ್ವರು ನಿಯಮ ಉಲ್ಲಂಘಿಸಿ ಉಡುಪಿಯಿಂದ ಕಾರ್ಕಳ ಪ್ರಯಾಣಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ. ನಿಯಮ ಉಲ್ಲಂಘಿಸಿದ ಕೊಡಂಕೂರು ನಿವಾಸಿ ವಿನಯ್ ಕುಮಾರ್ ಮೇಲೆ ಉಡುಪಿಯ ನಗರ ಠಾಣೆಯಲ್ಲಿ...