ಉಡುಪಿ : ಕೋರೊನಾ ಬಂದ್ರೆ ನಮ್ಮ ಕಥೆ ಮುಗಿತು ಅನ್ನೋ ಈ ಸಂದರ್ಭದಲ್ಲಿ, ಕೋಟದ ಕೊರೋನಾ ಪಾಸಿಟಿವ್ ವ್ಯಕ್ತಿಯೋರ್ವರು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕೋಟದ ಹೋಟೆಲ್ ಮಾಲಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದ ಬಳಿಕ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಮನೆಯ ಯಜಮಾನ ರಿಗೆ ಕೊರೋನಾ ಬಂದಿರುವುದು ಕುಟುಂಬದ ಸದಸ್ಯರ ಆತಂಕಕ್ಕೆ ಕಾರಣವಾಗಿತ್ತು. ಇದನ್ನು ಅರಿತ ಹೋಟೆಲ್ ಮಾಲಕ ಕೊವೀಡ್ ಆಸ್ಪತ್ರೆ ಯಿಂದಲೇ ಪತ್ನಿಗೆ ವಿಡಿಯೋ ಕಾಲ್ ಮಾಡಿ” ನಾನಿರುವುದೆ ನಿಮಗಾಗಿ” ಎನ್ನುವ ಡಾ.ರಾಜಕುಮಾರ್ ಗೀತೆ ಗೆ ನೃತ್ಯ ಮಾಡಿ ಕುಟುಂಬದವರಿಗೆ ಧೈರ್ಯ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೋಟೆಲ್ ಮಾಲಕರ ಪಾಸಿಟಿವ್ ರಿಯಾಕ್ಷನ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.