Monday, May 23, 2022
Powertv Logo
Homeಈ ಕ್ಷಣರಾಜ್ಯದಲ್ಲಿ ಶಾಲೆಗೆ ತಟ್ಟಿದ ಕೊವಿಡ್ ಮೂರನೇ ಅಲೆ

ರಾಜ್ಯದಲ್ಲಿ ಶಾಲೆಗೆ ತಟ್ಟಿದ ಕೊವಿಡ್ ಮೂರನೇ ಅಲೆ

ಬೆಂಗಳೂರು : ರಾಜ್ಯದಲ್ಲಿ ಕೊವಿಡ್ ಮೂರನೇ ಅಲೆ ಆರ್ಭಟದಿಂದಾಗಿ ಶಾಲೆಗಳಿಗೂ ಬಿಸಿ ತಟ್ಟಿದ ಕೊರೋನಾ ಎಫೆಕ್ಟ್ ಹೀಗಾಗಿ ಶಾಲೆಗಳ ಬಂದ್ ಭವಿಷ್ಯ ಇಂದೇ ನಿರ್ಧಾರವಾಗುತ್ತಾ..ಈಗಾಗಲೇ ರಾಜ್ಯದ 6 ಜಿಲ್ಲೆಗಳಲ್ಲಿ 1ರಿಂದ 9 ನೇ ತರಗತಿವರೆಗೆ ಶಿಕ್ಷಣ ಇಲಾಖೆ ಶಾಲೆ ಬಂದ್ ಮಾಡಿದೆ.

ಕೊರೋನಾ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು,ಆದರೆ ಬಂದ್ ಆಗಿರುವ ಜಿಲ್ಲೆಗಳಲ್ಲಿ ಶಾಲೆ ಪ್ರಾರಂಭಕ್ಕೆ ಖಾಸಗಿ ಶಾಲೆಗಳ ಒಕ್ಕೂಟ 5ನೇ ಕ್ಲಾಸ್​ ಮೇಲ್ಪಟ್ಟ ತರಗತಿಗಳು ಪ್ರಾರಂಭವಾಗಬೇಕೆಂದು ಮನವಿ ಮಾಡಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಭೌತಿಕ ತರಗತಿ ನಡೆದಿಲ್ಲ, ಈಗ ಮತ್ತೆ 1 ರಿಂದ 9 ನೇ ತರಗತಿವರೆಗೆ ಶಾಲೆಗಳನ್ನ ಬಂದ್ ಮಾಡಲಾಗಿದೆ. ಕೊರೋನಾ ಬಂದಿರುವ ಪ್ರದೇಶದ ಶಾಲೆಗಳನ್ನ ಮಾತ್ರ ಬಂದ್ ಮಾಡಿ ಆದರೆ ಇಡೀ ಜಿಲ್ಲೆಯ ಶಾಲೆಗಳನ್ನ ಬಂದ್ ಮಾಡೋದು ಸರಿಯಲ್ಲ, ಕನಿಷ್ಠ 5 ರಿಂದ ಮೇಲ್ಪಟ್ಟ ತರಗತಿಯನ್ನು ಪ್ರಾರಂಭಿಸಿ ಎಂದು ಶಿಕ್ಷಣ ‌ಇಲಾಖೆಗೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರ ಬರೆದಿದ್ದಾರೆ.

- Advertisment -

Most Popular

Recent Comments