ಬೆಂಗಳೂರು: ದೆಹಲಿ, ಉತ್ತರ ಪ್ರದೇಶ, ಹರಿಯಾಣದಲ್ಲಿ ಒಂದು ವಾರದಿಂದ ಪ್ರಕರಣ ಏರಿಕೆ ಕಂಡುಬಂಡಿದ್ದು, ಹೀಗಾಗಿ ದೇಶದಲ್ಲಿ ಒಂದು ವಾರದಿಂದ ಪ್ರಕರಣಗಳ ಸಂಖ್ಯೆ ಶೇ35% ರಷ್ಟು ಏರಿಕೆ ಕಂಡಿದೆ.
ಏಪ್ರಿಲ್ 10 – 16 ರವರಗೆ ದೇಶದಲ್ಲಿ 4600 ರಷ್ಟಿದ್ದ ಪ್ರಕರಣ ಸಂಖ್ಯೆ 6610 ಕ್ಕೆ ದಾಖಲಾಗಿದೆ. ಇನ್ನು ದೆಲ್ಲಿಯಲ್ಲಿ ಏಪ್ರೀಲ್ 10 ರಿಂದ 17 ರವರೆಗೆ 943 ರಷ್ಟು ಇದ್ದಂತಹ ಕೇಸ್ಗಳು ಏಪ್ರೀಲ್ 11 ರಿಂದ 17 ರವೆಗೆ ನೋಡಿದ್ರೆ 2307 ಕೇಸ್ ಗಳು ದಾಖಾಲಾಗಿದ್ದು . ಪಾಸಿಟಿವಿಟಿ ರೇಟ್ 4.4 % ರಷ್ಟು ಕೇಸ್ ಗಳು ಹೆಚ್ಚಳವಾಗಿವೆ.
ಇನ್ನು ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿದ್ದಂತೆ ಜಿನೋಮೋ ಸೀಕ್ವೆನ್ಸಿಂಗ್ ಹೆಚ್ಚಳ ಮಾಡಿದ್ದು, ಇನ್ನು ಜಿನೋಮೋ ಸೀಕ್ವನ್ಸ್ ಟೆಸ್ಟಿಂಗ್ ರಿಪೋರ್ಟ್ ಇನ್ನು ಒಂದು ವಾರದಲ್ಲಿ ಬರಲಿದ್ದು ರೂಪಾಂತತಿ ವೈರಸ್ XE ಎನಾದ್ರು ಪತ್ತೆಯಾಗಿದ್ಯ ಎನ್ನುವ ಬಗ್ಗೆ ಅನುಮಾನ ಹುಟ್ಟಿಕೊಂಡಿದೆ. ಸದ್ಯ ರಾಜಾಧಾನಿಯಲ್ಲಿಯು ನಿಧಾನಗತಿಯಲ್ಲಿ ಕೇಸ್ಗಳು ಏರಿಕೆಯಾಗುತ್ತಿದ್ದು, ಪಾಸಿಟಿವಿಟಿ ರೇಟ್ ಎರಡು ಪಟ್ಟು ಜಾಸ್ತಿಯಾಗಿದೆ.