ಗದಗ : ದೇಶದೆಲ್ಲೆಡೆ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು ರಕ್ಷಣೆ ನೀಡೋ ಆರಕ್ಷಕರಿಗೆ ಇದೀಗ ಕೊರೊನಾ ಆತಂಕ ಕಾಡ್ತಿದೆ. ಹೌದು ಗದಗ ಜಿಲ್ಲೆಯ ಮುಂಡರಗಿ ಪೊಲಿಸ್ ಠಾಣೆಗೆ ಕೊರೊನಾ ಭಯ ಶುರುವಾಗಿದ್ದು ಸ್ವತಃ ಕಳ್ಳನೇ ಠಾಣೆಗೆ ಬಂದು ಶರಣಾಗತಿ ಆದ್ರೂ ಪೊಲಿಸ್ರು ಹಿಂದು ಮುಂದು ನೋಡಿ ಕಳ್ಳನನ್ನ ಠಾಣೆಗೆ ಕರೆದುಕೊಳ್ಳೋ ಫಜೀತಿ ತಂದೊಡ್ಡಿದೆ.ಇದೇ ತಿಂಗಳ 17 ರಂದು ಕೊಡಗು ಜಿಲ್ಲೆಯ ಶನಿವಾರಸಂತೆಯಿಂದ ಓರ್ವ ವ್ಯಕ್ತಿ ಖಾಸಗಿ ಕೆಲಸದ ನಿಮಿತ್ತ ಮುಂಡರಗಿ ಠಾಣೆಗೆ ಭೇಟಿ ನೀಡಿದ್ದ ಎನ್ನಲಾಗಿದೆ. ಜೊತೆಗೆ ಠಾಣೆಯಲ್ಲಿನ ಕೆಲವು ಸಿಬ್ಬಂದಿಗಳ ಜೊತೆಗೆ ಸ್ವಲ್ಪ ಹೊತ್ತುಗಳ ಕಾಲ ಕಳೆದಿದ್ದ ಎಂದು ತಿಳಿದು ಬಂದಿದೆ.
ನಂತರ ಆ ವ್ಯಕ್ತಿಗೆ ಸೋಂಕು ನಿನ್ನೆ ಧೃಡವಾಗಿದ್ದು ಆರೋಗ್ಯ ಇಲಾಖೆ ಪೊಲಿಸ್ ಠಾಣೆಯಲ್ಲಿನ ವ್ಯಕ್ತಿಯ ಜೊತೆಗೆ ಸಂಪರ್ಕ ಹೊಂದಿದವರನ್ನ ಸ್ವಾಬ್ ಟೆಸ್ಟ್ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಠಾಣೆ ಒಳಗೆ ಸಾರ್ವಜನಿಕರ ಪ್ರವೇಶ ನಿಷೇಧವಾಗಿದ್ದು ಯಾರೇ ಬಂದರೂ ಹೊರಗೆ ನಿಲ್ಲಿ ಅನ್ನೋ ಸಂದೇಶ ಪೊಲಿಸ್ ಸಿಬ್ಬಂದಿ ಮಾಡ್ತಿದ್ದಾರೆ.ಠಾಣೆಯ ಹೊರಗೇ ಸಾರ್ವಜನಿಕರ ಕೆಲಸ ಮಾಡಿಕೊಡಲು ವ್ಯವಸ್ಥೆ ಮಾಡಲಾಗಿದ್ದು ಆರಕ್ಷಕರೂ ಭಯ ಹುಟ್ಟಿಸೋ ಕೆಲಸವನ್ನ ಕೊರೊನಾ ಹೊಂಚು ಹಾಕಿ ಮಾಡ್ತಿದೆ.
3constitutes