Thursday, October 6, 2022
Powertv Logo
Homeರಾಜ್ಯಆಸ್ಪತ್ರೆಗಳಲ್ಲೂ ಕೊರೋನಾ ಭಯ !

ಆಸ್ಪತ್ರೆಗಳಲ್ಲೂ ಕೊರೋನಾ ಭಯ !

ಗದಗ : ಕೊರೊನಾ ಭಯದಿಂದ ಸರಕಾರಿ ಆಸ್ಪತ್ರೆಗಳಿಗೆ ಹೋಗೋಕೆ ಹಿಂದೇಟು ಹಾಕುತ್ತಿದ್ದ ಜನತೆ ಇದೀಗ ಖಾಸಗಿ ಆಸ್ಪತ್ರೆಗಳಿಗೂ ಹೋಗೋಕೆ ಒಂದು ಕ್ಷಣ ಯೋಚಿಸುವಂತಾಗಿದೆ.‌ಯಾಕಂದ್ರೆ ಖಾಸಗಿ ಆಸ್ಪತ್ರೆಗಳಲ್ಲಿ ಇತರೇ ಖಾಯಿಲೆಗಳಿಗೆ ಚಿಕಿತ್ಸೆ ಪಡೆದವರಿಗೂ ಕೊರೊನಾ ಶಂಕೆ ವ್ಯಕ್ತವಾಗುತ್ತಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಗರ್ಭಿಣಿಯೊಬ್ರು ಚಿಕಿತ್ಸೆ ಪಡೆದ ಖಾಸಗಿ ಆಸ್ಪತ್ರೆ ಸೀಲ್ ಡೌನ್ ಆಗಿದೆ‌.ಪಟ್ಟಣದ ಜ್ಯೋತಿ ಹೆರಿಗೆ ಆಸ್ಪತ್ರೆ ಸೀಲ್ ಡೌನ್ ಆಗಿದ್ದು ಶಿರಹಟ್ಟಿ ತಾಲೂಕಿನ ಮಜ್ಜೂರು ತಾಂಡಾ ನಿವಾಸಿ 29 ವರ್ಷದ ಪಿ- 8723 ಗರ್ಭಿಣಿಗೆ ಕೊರೊನಾ ಧೃಡವಾಗಿದೆ. ಮಜ್ಜೂರು ತಾಂಡಾದಿಂದ ಲಕ್ಷ್ಮೇಶ್ವರ ಪಟ್ಟಣದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಗರ್ಭಿಣಿ ಬಂದಿದ್ದಳೆಂದು ತಿಳಿದು ಬಂದಿದೆ.ಗರ್ಭಿಣಿಗೆ ಸೋಂಕು ದೃಢ ಆಗಿದ್ದು ಆರೋಗ್ಯ ಇಲಾಖೆ ಆಕೆಯ ಟ್ರಾವೆಲ್ ಹಿಸ್ಟರಿ ಕಲೆ ಹಾಕುತ್ತಿದೆ.‌ಖಾಸಗಿ ಆಸ್ಪತ್ರೆಯ ವೈದ್ಯರು ನರ್ಸ್ ಹಾಗೂ ಗರ್ಭಿಣಿ ಸಂಪರ್ಕದಲ್ಲಿ ಇರೋ 15 ಕ್ಕೂ ಹೆಚ್ಚು ಜನರನ್ನ ಪತ್ತೆ ಮಾಡಿ ಟೆಸ್ಟ್ ಗೆ ಕಳುಹಿಸಿದೆ. ಆದರೆ ಗರ್ಭಿಣಿಗೆ ಸೋಂಕು ಬಂದಿರೋದು ಹೇಗೆಂದು ಇನ್ನೂ ನಿಗೂಢವಾಗಿದ್ದು ಆರೋಗ್ಯ ಇಲಾಖೆಯಿಂದ ಸೋಂಕಿನ ಮೂಲ ಎಲ್ಲಿಯದು ಅನ್ನೋದು ತಲೆನೋವಾಗಿದ್ದು ಪತ್ತೆಕಾರ್ಯ ಮುಂದುವರೆದಿದೆ.

3 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments