ಸೆಪ್ಟೆಂಬರ್ ಅಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ ಕೊರೋನಾಗೆ ಔಷಧಿ : ಅದಾರ್ ಪೂನಾವಾಲಾ

0
2256

ಪುಣೆ: ಮಹಾಮಾರಿ ಕೊರೋನಾದ ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ. ಇದೀಗ ಸೋಂಕು ತಡೆಯುವ ಔಷಧಿಯನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ಮಾರುಕಟ್ಟೆಗೆ ತರಲಾಗುತ್ತಿದೆ ಎಂದು ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥರಾದ ಅದಾರ್ ಪೂನಾವಾಲಾ ಮಾಹಿತಿ ನೀಡಿದ್ದಾರೆ. ಈ ಮೂಲಕ ಮಹಾಮಾರಿ ಕೊರೋನಾದಿಂದ ಮುಕ್ತಿ ಪಡೆಯುವ ಒಂದು ಭರವಸೆ ಮೂಡಿಸಿದ್ದಾರೆ.

ಈ ಬಗ್ಗೆ ಸುದ್ದಿ ವಾಹಿನಿಯೊಮದಿಗೆ ಮಾತನಾಡಿದ ಅವರು, ‘ಸೆಪ್ಟೆಂಬರ್ ಹಾಗೂ ಅಕ್ಟೋಬರ್ ವೇಳೆಗೆ ಔಷಧಿಗೆ ಸಂಬಂಧಿಸಿದ ಪ್ರಾಯೋಗಿಕ ಪರೀಕ್ಷೆಗಳು ಮುಕ್ತಾಯವಾಗಿ ಅದರಲ್ಲಿ ಯಶಸ್ಸು ಕಂಡರೆ ನಾವು ಔಷಧಿಗಳನ್ನು ಭಾರತ ಸೇರಿದಂತೆ ಇಡೀ ವಿಶ್ವಕ್ಕೆ ನೀಡಲು ಸಾಧ್ಯವಾಗುತ್ತದೆ. ಇನ್ನು ಈ ಔಷಧಿಯ ದರವೂ ಒಂದು ಸಾವಿರ ರೂಪಾಯಿ ನಿಗದಿಯಾಗಬಹುದು‘ ಎಂದಿದ್ದಾರೆ.

ಪುಣೆ ಮೂಲದ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಔಷಧಿ ಕಂಪೆನಿ, ಬ್ರಿಟನ್ ಹಾಗೂ ಅಮೆರಿಕಾ ವಿಜ್ಞಾನಿಗಳ ಜೊತೆ ಒಪ್ಪಂದ ಮಾಡಿಕೊಂಡು ಕೊರೋನಾ ಸೋಂಕಿಗೆ ಔಷಧ ತಯಾರಿಸಲು ಪಯತ್ನ ಪಡುತ್ತಿದ್ದಾರೆ. ಈ ಮಹಾಮಾರಿ ಸೋಂಕಿಗೆ ಔಷಧಿ ಕಂಡುಹಿಡಿಯಲು ಒಂದು ವರ್ಷವಾದರೂ ಬೇಕು ಅಂದುಕೊಂಡಿದ್ದ ಕಂಪೆನಿಗೆ ಆಕ್ಸ್​ಫರ್ಡ್ ಯೂನಿವರ್ಸಿಟಿಯ ಜೊತೆಗೆ ಒಪ್ಪಂದವನ್ನು ಮಾಡಿಕೊಂಡ ಮೇಲೆ ಪ್ರಯೋಗದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದೆ. ಹಾಗಾಗಿ ಆದಷ್ಟು ಬೇಗನೆ ಔಷಧಿಯನ್ನು ಪರೀಕ್ಷಿಸಿ ಮಾರುಕಟ್ಟೆಗೆ ಬಿಡುವುದಾಗಿ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here