ನವದೆಹಲಿ: ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಮುರುಳಿಧರನ್ ಅವರಿಗೆ ಕೊರೋನಾ ಭೀತಿ ಕಾಡುತ್ತಿದ್ದು, ಸ್ವಯಂ ‘ಗೃಹಬಂಧನ’ವಿಧಿಸಿಕೊಂಡಿದ್ದಾರೆ.
ಮುರಳಿಧರನ್ ಮಾರ್ಚ್ 14 ರಂದು ಕೇರಳದ ತಿರುವನಂತಪುರದಲ್ಲಿ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಕೊರೋನಾ ಸೋಂಕಿತ ವೈದ್ಯರೊಬ್ಬರನ್ನು ಭೇಟಿ ಮಾಡಿದ್ದರು. ಆ ಬಳಿಕ ದೆಹಲಿಗೆ ಹಿಂತಿರುಗಿದ ಅವರು ಮನೆಯಿಂದ ಆಚೆ ಹೊರಡುತ್ತಿಲ್ಲ ಎಂದು ತಿಳಿದುಬಂದಿದೆ.
ಅವರಿಗೆ ಮನೆಯಲ್ಲಿಯೇ ವೈದ್ಯಕೀಯ ನೆರವು ನೀಡಲಾಗುತ್ತಿದ್ದು, ಸದ್ಯ ಕೊರೋನಾ ನೆಗೆಟಿವ್ ಎಂದು ವರದಿ ಬಂದಿದೆ.