Wednesday, November 30, 2022
Powertv Logo
Homeರಾಜ್ಯಬೆಂಗಳೂರಲ್ಲೇ 12 ಮಂದಿಗೆ ಕೊರೋನಾ ಪಾಸಿಟಿವ್ : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 789 ಕ್ಕೆ ಏರಿಕೆ

ಬೆಂಗಳೂರಲ್ಲೇ 12 ಮಂದಿಗೆ ಕೊರೋನಾ ಪಾಸಿಟಿವ್ : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 789 ಕ್ಕೆ ಏರಿಕೆ

ಬೆಂಗಳೂರು:  ಕೊರೋನಾ ಹರಡುವುದನ್ನು ತಪ್ಪಿಸಲು ರಾಜ್ಯಾದ್ಯಂತ ಘೋಷಣೆಯಾಗಿದ್ದ ಲಾಕ್​ಡೌನ್​ ಸಡಿಲಿಸಿದ್ದೇ ತಡ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಗ್ರೀನ್​ ಝೋನ್​ನಲ್ಲಿದ್ದ ಜಿಲ್ಲೆಗಳು ಒಂದೊಂದಾಗಿ ರೆಡ್ ಝೋನ್​ಗಳಾಗಿ ಮಾರ್ಪಾಡಾಗುತ್ತಿವೆ. ಕರ್ನಾಟಕದಲ್ಲಿ ಇಂದು ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ ಒಂದೇ ದಿನ 36 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 789 ಕ್ಕೆ ಏರಿಕೆಯಾಗಿದೆ. ಇನ್ನು ಮೃತಪಟ್ಟವರ ಸಂಖ್ಯೆ 30ಕ್ಕೇರಿದೆ. ಈವರೆಗೆ ರಾಜ್ಯದಲ್ಲಿ 379 ಜನ ಸೋಂಕಿನಿಮದ ಗುಣಮುಖರಾಗಿದ್ದಾರೆ. 

ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರು ಒಂದರಲ್ಲೇ 12 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನುಳಿದಂತೆ  ದಾವಣಗೆರೆಯಲ್ಲಿ 6, ದಕ್ಷಿಣ ಕನ್ನಡದಲ್ಲಿ  3, ತುಮಕೂರು ಜಿಲ್ಲೆಯಲ್ಲಿ 1, ವಿಜಯಪುರ 1, ಬೀದರ್ 3, ಉತ್ತರ ಕನ್ನಡದ ಭಟ್ಕಳದಲ್ಲಿ 7 ಹಾಗೂ ಚಿತ್ರದುರ್ಗದಲ್ಲಿ 3 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಇಂದು ಬೆಂಗಳೂರಲ್ಲಿ ಪತ್ತೆಯಾದ 12 ಕೊರೋನಾ ಪ್ರಕರಣಗಳಲ್ಲಿ  36 ವರ್ಷದ ಪುರುಷ, 60 ವರ್ಷದ ಪುರುಷ, 40 ವರ್ಷದ ಪುರುಷ, 24 ವರ್ಷದ ಪುರುಷ ಹಾಗೂ 37 ವರ್ಷದ ಮಹಿಳೆಗೆ ಸೋಂಕಿತ ಪೇಷೆಂಟ್ 419 ಒಬ್ಬನಿಂದಲೇ ಸೋಂಕು ಹರಡಿರುತ್ತದೆ. ಇನ್ನುಳಿದಂತೆ ಪೇಷೆಂಟ್ 454 ರ ಸಂಪರ್ಕದಿಂದ  20 ವರ್ಷದ ಯುವತಿ, 40 ವರ್ಷದ ಮಹಿಳೆ, 46 ವರ್ಷದ ಪುರುಷ,19 ವರ್ಷದ ಬಾಲಕಿಗೆ ಸೋಂಕು ಬಂದಿರುತ್ತದೆ. ಪೇಷೆಂಟ್ ನಂ. 449 ವ್ಯಕ್ತಿಯಿಂದ 55 ವರ್ಷದ ಮಹಿಳೆ ಹಾಗೂ 31 ವರ್ಷದ ಮಹಿಳೆಗೆ ಸೋಂಕು ಹರಡಿದೆ. 20 ವರ್ಷದ ಯುವತಿಗೆ ಬಿಬಿಎಂಪಿ ಕಂಟೈನ್ಮೆಂಟ್ ಝೋನ್​ನ ವಾರ್ಡ್​ ನಂ. 135 ಕ್ಕೆ ತೆರಳಿದ್ದರಿಂದ ಸೋಂಕು ಬಂದಿರುತ್ತದೆ.

ಉತ್ತರ ಕನ್ನಡ ಭಟ್ಕಳದಲ್ಲಿ ಒಟ್ಟು 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲಿ ಪೇಷೆಂಟ್ 659 ಒಬ್ಬರ ದ್ವಿತೀಯ ಸಂಪರ್ಕದಿಂದ 6 ಜನರಿಗೆ ಸೋಂಕು ತಗುಲಿರುತ್ತದೆ. 65 ವರ್ಷದ ಪುರುಷ, 50 ವರ್ಷದ ಮಹಿಳೆ,17 ವರ್ಷದ ಹೆಣ್ಣು, 23 ವರ್ಷದ ಮಹಿಳೆ ಜೊತೆಗೆ 2 ವರ್ಷ 6 ತಿಂಗಳಿನ ಹೆಣ್ಣು ಮಗು ಹಾಗೂ 1 ವರ್ಷದ 5 ತಿಂಗಳ ಗಂಡು ಮಗುವಿಗೂ ಸೋಂಕು ಹರಡಿದೆ. ಪೇಷೆಂಟ್ ನಂ. 740 ವ್ಯಕ್ತಿಯ ಸಂಪರ್ಕದಿಂದ 68 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ದಾವಣಗೆರೆಯಲ್ಲಿಯೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪೇಷೆಂಟ್ 651 ಒಬ್ಬನಿಂದಲೇ  5 ಜನರಿಗೆ ಸೊಂಕು ಹರಡಿದ್ದು, 20 ವರ್ಷದ ಯುವತಿ, 45 ವರ್ಷದ ಪುರುಷ, 24 ವರ್ಷದ ಪುರುಷ, 26 ವರ್ಷದ ಪುರುಷ ಹಾಗೂ 24 ವರ್ಷದ ಪುರುಷನಿಗೆ ಸೋಂಕು ಹರಡಿದೆ. ಇನ್ನು ಪೇಷೆಂಟ್ 553 ವ್ಯಕ್ತಿಯ ದ್ವಿತೀಯ ಸಂಪರ್ಕದಿಂದ 48 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.

ದಕ್ಷಿಣ ಕನ್ನಡದಲ್ಲಿ ಇಂದು ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಮಂಗಳೂರಿನಲ್ಲಿ ಬಂಟ್ವಾಳದಲ್ಲೇ ಮೂರು ಕೇಸ್​ಗಳು ಪತ್ತೆಯಾಗಿದೆ. ಪೇಷೆಂಟ್ ನಂ. 578 ಸೋಂಕಿತನ ಸಂಪರ್ಕದಿಂದ 30 ವರ್ಷದ ಪುರುಷ, 60 ವರ್ಷದ ಮಹಿಳೆ ಹಾಗೂ 70 ವರ್ಷದ ವೃದ್ದೆಯಲ್ಲಿ ಸೋಂಕು ದೃಢಪಟ್ಟಿದೆ.

ಚಿತ್ರದುರ್ಗದಲ್ಲಿ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, 34 ವರ್ಷದ ಪುರುಷ, 26 ವರ್ಷದ ಪುರುಷ ಹಾಗೂ 17 ವರ್ಷದ ಯುವಕನಲ್ಲಿ ಸೊಂಕು ದೃಢಪಟ್ಟಿದೆ. ಈ ಮೂವರು ಅಹಮದಾಬಾದ್​, ಗುಜರಾತ್​ಗೆ ಪ್ರಯಾಣ ಬೆಳೆಸಿರುವ ಹಿನ್ನಲೆ ಕೊರೋನಾ ಹರಡಿರುತ್ತದೆ.

ಬೀದರ್​ನಲ್ಲೂ ಮೂವರಲ್ಲಿ ಸೋಂಕು ಕಂಡುಬಂದಿದ್ದು  ಅದರಲ್ಲಿ 30 ವರ್ಷದ ಪುರುಷನಿಗೆ 647 ರ ಸಂಪರ್ಕ, 12 ವರ್ಷದ ಬಾಲಕಿಗೆ  ಪೇಷೆಂಟ್ 648 ಸಂಪರ್ಕದಿಂದ ಸೋಂಕು ಬಂದಿದೆ. ಆದರೆ 30 ವರ್ಷದ ಪುರುಷನಲ್ಲೂ ಸೊಂಕು ಪತ್ತೆಯಾಗಿದ್ದು ಅದರ ಮೂಲ ಇನ್ನೂ ಪತ್ತೆಯಾಗಿಲ್ಲ.

ಇನ್ನುಳಿದಂತೆ ವಿಜಯಪುರ ಹಾಗೂ ತುಮಕೂರಿನಲ್ಲಿ ಒಂದು ಪ್ರಕರಣಗಳು ಪತ್ತೆಯಾಗಿವೆ. ತುಮಕೂರಿನಲ್ಲಿ ಬಿಬಿಎಂಪಿ ಕಂಟೈನ್ಮೆಂಟ್ ಜೋನ್​ಗೆ ತೆರಳಿದ್ದರಿಂದ 45 ವರ್ಷದ ಪುರುಷನಿಗೆ ಸೋಂಕು ಹರಡಿರುತ್ತದೆ. ಇನ್ನು ವಿಜಯಪುರದಲ್ಲಿ ಪೇಷೆಂಟ್ ನಂ 510 ರ ಸಂಪರ್ಕದಿಂದ 11 ವರ್ಷದ ಬಾಲಕಿಗೆ ಸೋಂಕು ತಗುಲಿರುತ್ತದೆ. 

RELATED ARTICLES

16 COMMENTS

 1. пансионат для пожилых
  [url=https://dom-prestarelyh-vrn2.ru ]дом для престарелых[/url]
  частный дом престарелых
  [url=https://dom-prestarelyh-samara2.ru]дом для престарелых[/url]

 2. reduslim pantoja [url=https://comprarcialis5mg.org/reduslim/]reduslim[/url] opinion reduslim
  reduslim timo o verdad [url=https://comprarcialis5mg.org/reduslim-kaufen/]reduslim kaufen[/url] reduslim opiniones mГ©dicas
  cialis 5mg prezzo [url=https://comprarcialis5mg.org/it/cialis-5mg-prezzo/]prezzo cialis 5 mg originale in farmacia[/url] cialis
  reduslim es falso o verdadero [url=https://comprarcialis5mg.org/]comprar cialis[/url] carlos latre y reduslim
  bitcoin https://sites.google.com/view/bitcoin-up-app/ bitcoin up
  bitcoin up app [url=https://sites.google.com/view/bitcoin-up-app/]bitcoin[/url] bitcoin
  [url=https://dl.roadrunner5.net/index.php?file=Forum&page=post&forum_id=24&thread_id=16721&mess_id=47183&do=quote]reduslim funciona realmente[/url] d1a6657

LEAVE A REPLY

Please enter your comment!
Please enter your name here

- Advertisment -

Most Popular

Recent Comments

Micltok on
Micltok on