Home ದೇಶ-ವಿದೇಶ ದೇಶದ 6 ನಗರಗಳಲ್ಲಿ ಕೊವಿಡ್ ಲಸಿಕೆ ಪ್ರಯೋಗ |  ಬೆಳಗಾವಿಯಲ್ಲಿ ಸದ್ಯದಲ್ಲೇ ಶುರು

ದೇಶದ 6 ನಗರಗಳಲ್ಲಿ ಕೊವಿಡ್ ಲಸಿಕೆ ಪ್ರಯೋಗ |  ಬೆಳಗಾವಿಯಲ್ಲಿ ಸದ್ಯದಲ್ಲೇ ಶುರು

ನವದೆಹಲಿ : ವಿಶ್ವವನ್ನು ಇನ್ನಿಲ್ಲದಂತೆ ಕಾಡುತ್ತಿರೋ ಹೆಮ್ಮಾರಿ ವೈರಸ್​ ಕೊರೋನಾಗೆ ಲಸಿಕೆ ಕಂಡುಹಿಡಿಯಲು ಸತತ ಪ್ರಯತ್ನಗಳು ನಡೆಯುತ್ತಿವೆ. ಭಾರತದಲ್ಲೂ ಕೊರೋನಾ ಅಟ್ಟಹಾಸ ಹೆಚ್ಚಿದ್ದು, ಲಸಿಕೆಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಭಾರತ್​ ಬಯೋಟೆಕ್​​ ಮತ್ತು ಝೈಡಸ್ ಕ್ಯಾಡಿಲ್ ಎರಡು ಲಸಿಕೆಗಳನ್ನು ಕಂಡುಹಿಡಿದಿದ್ದು, ಅದರ ಮಾನವ ಪ್ರಯೋಗಕ್ಕೆ ಚಾಲನೆ ಸಿಕ್ಕಿದೆ. ದೇಶದ 6 ನಗರಗಳಲ್ಲಿ ಮಾನವ ಪ್ರಯೋಗ ನಡೆಯುತ್ತಿದೆ  

ಭಾರತ್ ಬಯೋಟೆಲ್​​ನ ಕೊವಾಕ್ಸಿನ್ ಲಸಿಕೆಯನ್ನು ಶುಕ್ರವಾರ ದೆಹಲಿಯ ಏಮ್ಸ್​​ನಲ್ಲಿ 30 ವರ್ಷದ ವ್ಯಕ್ತಿಯ ಮೇಲೆ ಪ್ರಯೋಗಿಸಲಾಗಿದೆ. ಈ ಕೊವಾಕ್ಸಿನ್ ಲಸಿಕೆಯನ್ನು ಇಂಟ್ರಾ ಮಸ್ಕೂಲರ್​ ಇಂಜೆಕ್ಷನ್​​ ರೂಪದಲ್ಲಿ  ನೀಡಲಾಗಿದೆ. ಲಸಿಕೆ ನೀಡಿ ಕೆಲವು ಗಂಟೆಗಳ ಕಾಲ ಅವರನ್ನು ನಿಗಾವಣೆಯಲ್ಲಿಡಲಾಗಿತ್ತು. ಯಾವ್ದೇ ರೀತಿಯ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ ಅಂತ ಏಮ್ಸ್​ ವೈದ್ಯ ಡಾ. ಸಂಜಯ್ ರೈ ತಿಳಿಸಿದ್ದಾರೆ.

ನವದೆಹಲಿ ಮಾತ್ರವದಲ್ಲದೆ ಹೈದರಾಬಾದ್, ಪಾಟ್ನ, ಕಾಂಚಿಪುರಂ , ರೋಹ್ಟಕ್​ ಮತ್ತು ಅಹಮದಾಬಾದ್​ಗಳಲ್ಲಿ ಈಗಾಗಲೇ ಕ್ಲಿನಿಕಲ್ ಟ್ರಯಲ್ ಶುರುವಾಗಿದ್ದು,  ಬೆಳಗಾವಿ, ನಾಗ್ಪುರ, ಭುವನೇಶ್ವರ, ಗೋರಕ್ಪುರ, ಕಾನ್ಪುರ, ಗೋವಾ ಮತ್ತು ವಿಶಾಖಪಟ್ಟಣದಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

ಅಪರಿಚಿತ ವ್ಯಕ್ತಿ ಮರದ ತುದಿಗೇರಿ ನೇಣಿಗೆ ಶರಣು!

ವಿಜಯಪುರ : ವ್ಯಕ್ತಿಯೋರ್ವ ಮರದ ತುದಿಗೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದಲ್ಲಿ ‌ನಡೆದಿದೆ. ನಗರದ ಐನಾಪುರ ಕ್ರಾಸ್ ಬಳಿ ಇರುವ ಅರಳಿ ಮರದ ತುದಿಗೇರಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಅಂದಾಜು 50...

Recent Comments