Thursday, October 6, 2022
Powertv Logo
Homeರಾಜ್ಯಕ್ವಾರಂಟೀನ್ ಮುಗಿಸಿ ಮನೆಗೆ ಬಂದವರಿಗೆ ಸೋಂಕು..!

ಕ್ವಾರಂಟೀನ್ ಮುಗಿಸಿ ಮನೆಗೆ ಬಂದವರಿಗೆ ಸೋಂಕು..!

ಹಾಸನ : ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೊರರಾಜ್ಯದಿಂದ ಬಂದವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಬೇರೆ ರಾಜ್ಯಗಳಿಂದ ಬಂದವರನ್ನು 14 ದಿನ ಕ್ವಾರಂಟೈನ್ ಮಾಡಲಾಗುತ್ತಿದ್ದು, ಯಾವುದೇ ಕೊರೋನಾ ಲಕ್ಷಣ ಇಲ್ಲದಿದ್ದಾಗ ಮನೆಗೆ ಕಳುಹಿಸುತ್ತಿದ್ದಾರೆ. ಇದೀಗ 14 ದಿನ ಕ್ವಾರಂಟೈನ್ ಮುಗಿಸಿ ಮನೆಗೆ ಬಂದವರಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಎಂ.ಕೆ ಹೊಸೂರು, ತೋಟಿ ಗ್ರಾಮದ ನಿವಾಸಿಗಳು ಮುಂಬೈನಿಂದ ಹಾಸನಕ್ಕೆ ಬಂದಿದ್ದರು. ಇವರನ್ನು 14 ದಿನಗಳ ಕಾಲ ಕ್ವಾರಂಟೀನ್ ಮಾಡಲಾಗಿತ್ತು. ಯಾವುದೇ ರೋಗ ಲಕ್ಷಣ ಕಾಣಿಸಿಕೊಳ್ಳದ ಹಿನ್ನಲೆ ಆರೋಗ್ಯ ಅಧಿಕಾರಿಗಳು ಅವರ ಮನೆಗೆ ಕಳುಹಿಸಿದ್ದರು. ಇದೀಗ ಮತ್ತೊಮ್ಮೆ ಚೆಕ್ ಮಾಡಿಸಿದಾಗ ಇವರುಗಳಲ್ಲಿ ಕೊರೋನಾ ಪಾಸಿಟಿವ್ ಇರುವುದು ಕಂಡುಬಂದಿದ್ದು, ನಿಗದಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಚನ್ನರಾಯಪಟ್ಟಣ ತಹಸಿಲ್ದಾರ್ ಮಾರುತಿ ಮತ್ತು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಎರಡು ಗ್ರಾಮಗಳನ್ನು ಸೀಲ್​ಡೌನ್ ಮಾಡಿದ್ಧಾರೆ. ಇನ್ನು ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೀನ್​ಗೆ ಸೂಚಿಸಿದ್ದಾರೆ.

 

6 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments