ಬೆಂಗಳೂರು: ಇತ್ತೀಚೆಗೆ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಪ್ರತಿದಿನ ನೂರಕ್ಕಿಂತ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇಂದು ಮತ್ತೆ 178 ಜನರಲ್ಲಿ ಸೊಂಕು ಪತ್ತೆಯಾಗಿದೆ, ಈ ಮೂಲಕ ಸೋಂಕಿತರ ಸಂಖ್ಯೆ 2,711 ಕ್ಕೆ ಏರಿಕೆಯಾಗಿದೆ.
ಇಂದು ಪತ್ತೆಯಾದ ಸೋಂಕಿತರಲ್ಲೂ ಮಹಾರಾಷ್ಟ್ರಕ್ಕೆ ತೆರಳಿದವರೇ ಹೆಚ್ಚಾಗಿದ್ದು, ರಾಯಚೂರಿನಲ್ಲಿ 62 ಹಾಗೂ ಯಾದಗಿರಿಯಲ್ಲಿ 60 ಜನರಿಗೆ ಮಹಾರಾಷ್ಟ್ರ ಪ್ರಯಾಣದಿಂದ ಸೋಂಕು ಬಂದಿದೆ. ಇನ್ನುಳಿದಂತೆ ಉಡುಪಿಯಲ್ಲಿ 15, ಮಂಡ್ಯ 2, ಜನರಿಗೆ ಸೋಂಕು ತಗುಲಿದೆ. ಇನ್ನು ಕಲಬುರಗಿಯಲ್ಲಿ 15, ಚಿಕ್ಕಬಳ್ಳಾಪುರ ಹಾಗೂ ಧಾರವಾಡ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಬೆಂಗಳೂರಲ್ಲಿ ಇಂದು 11 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಅದರಲ್ಲಿ ಒಬ್ಬರು ಆಂಧ್ರಪ್ರದೇಶ ಪ್ರಯಾಣ, ಮೂವರು ನವದೆಹಲಿ ಪ್ರಯಾಣ, ತಮಿಳುನಾಡು ಪ್ರಯಾಣದಿಂದ ಒಬ್ಬರಿಗೆ ಸೋಂಕು ಹರಡಿದೆ. ಇನ್ನು ಐದು ಜನರಿಗೆ ಸೋಂಕು ತಗುಲಿರುವ ಮೂಲ ಪತ್ತೆಯಾಗಿಲ್ಲ. ಬೆಂಗಳೂರು ಗ್ರಾ,ಮಾಂತರದಲ್ಲಿ ಒಬ್ಬರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಸೋಂಕು ಇರುವುದು ದೃಢಪಟ್ಟಿದೆ.
ದಾವಣಗೆರೆಯಲ್ಲಿ ಪೇಷೆಂಟ್ 2208 ರ ವ್ಯಕ್ತಿಯಿಂದ ಇಬ್ಬರಲ್ಲಿ ಕಾಣಿಸಿಕೊಂಡಿದೆ. ಇನ್ನೊಬ್ಬ ಸೋಂಕಿತನಿಗೆ ಪೇಷೆಂಟ್ 992 ರ ವ್ಯಕ್ತಿಯಿಂದ ಸೋಂಕು ಬಂದಿರುತ್ತದೆ. ಇನ್ನೊಬ್ಬ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದು, ಸೋಂಕು ದೃಢಪಟ್ಟಿದೆ. ಮೈಸೂರಿನಲ್ಲಿ ಪತ್ತೆಯಾಗಿದ್ದ ಎಲ್ಲಾ ಸೋಂಕಿತರು ಗುಣಮುಖರಾಗಿದ್ದರು. ಆದರೆ ಇಂದು ಮತ್ತೆ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಒಬ್ಬರು ರಾಜಸ್ಥಾನಕ್ಕೆ ಪ್ರಯಾಣ ಹಾಗೂ ಮತ್ತೊಬ್ಬರು ಐರ್ಲ್ಯಾಂಡ್ಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ದೃಢಪಟ್ಟಿದೆ. ನವದೆಹಲಿಗೆ ಪ್ರಯಾಣ ಬೆಳೆಸಿದವರಲ್ಲಿ ಶಿವಮೊಗ್ಗ ಒಬ್ಬರು ಹಾಗೂ ಚಿತ್ರದುರ್ಗದಲ್ಲಿ ಒಬ್ಬರು ಪತ್ತೆಯಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಪೇಷೆಂಟ್ 790 ರ ವ್ಯಕ್ತಿಯ ಸಂಪರ್ಕದಿಂದ ಒಬ್ಬರಿಗೆ ಸೋಂಕು, ಇನ್ನಿಬ್ಬರಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿದ್ದು ಸೋಂಕು ಹರಡಿರುವುದು ದೃಢಪಟ್ಟಿದೆ.