ಬೆಂಗಳೂರು : ರಾಜ್ಯದಲ್ಲಿಂದು ಮಹಾಮಾರಿ ಕೊರೋನಾ ಶತಕ ಬಾರಿಸಿದ್ದು, ಸೋಂಕಿತರ ಸಂಖ್ಯೆ 2,282ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಪತ್ತೆಯಾಗುತ್ತಿರುವ ಸೋಂಕಿತರಲ್ಲಿ ಹೆಚ್ಚಿನವರೆಲ್ಲರೂ ಹೊರರಾಜ್ಯ, ಹೊರದೇಶದಿಂದ ಬಂದವರೇ ಆಗಿದ್ದಾರೆ. ಅದರಲ್ಲೂ ಕರ್ನಾಟಕ್ಕೆ
ರಾಜ್ಯದಲ್ಲಿ ಇಂದು ಪತ್ತೆಯಾದ 100 ಮಂದಿ ಸೋಂಕಿತರಲ್ಲಿ 46 ಮಂದಿ ಸೋಂಕಿತರು ಮಹಾರಾಷ್ಟ್ರದಿಂದ ಬಂದಿರುತ್ತಾರೆ. ಅದರಲ್ಲಿ ಯಾದಗಿರಿಯಲ್ಲಿ 14, ವಿಜಯಪುರದಲ್ಲಿ 5 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಬೀದರ್ನಲ್ಲಿ 10 ಜನರಲ್ಲಿ ಸೋಂಕು ಪತ್ತೆ, ಹಾಸನದಲ್ಲಿ 13, ಉಡುಪಿ ಮೂವರು, ಚಿಕ್ಕಬಳ್ಳಾಪುರದಲ್ಲಿ ಒಬ್ಬರು,
ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದರಿಂದ ಚಿತ್ರದುರ್ಗದಲ್ಲಿ 20 ಜನರಿಗೆ ತಮಿಳುನಾಡಿಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ಹರಡಿದೆ. ಕೊಪ್ಪಳದಲ್ಲಿ ಒಬ್ಬರಿಗೆ ಸೋಂಕು ಹರಡಿದೆ. ಬೆಂಗಳೂರಲ್ಲಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಬೆಳಗಾವಿಯಲ್ಲಿ ಜಾರ್ಖಂಎಡ್ಗೆ ಪ್ರಯಾಣ ಬೆಳೆಸಿದ್ದರಿಂದ ಒಟ್ಟು 13 ಜನರಿಗೆ ಸೋಂಕು ದೃಢಪಟ್ಟಿದೆ.
ಕೋಲಾರದಲ್ಲಿ ಇಬ್ಬರಿಗೆ ಸೋಂಕಿತ ಪೇಷೆಂಟ್ ನಂಬರ್ 1946 ರಿಂದ ಸೋಂಕು ಹರಡಿದೆ. ದಕ್ಷಿಣ ಕನ್ನಡದಲ್ಲಿ ಖತಾರ್ಗೆ ಪ್ರಯಾಣ ಬೆಳೆಸಿದ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಬಾಗಲಕೋಟೆಯಲ್ಲಿ ಖತಾರ್ ಪ್ರಯಣ ಬೆಳೆಸಿದ ಒಬ್ಬರಿಗೆ ಸೋಂಕು ಬಂದಿದೆ. ದಾವಣಗೆರೆಯಲ್ಲಿ ಒಬ್ಬರಿಗೆ ತೀವ್ರತರ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಇನ್ನುಳಿದಂತೆ ಪೇಷೆಂಟ್ 933 ರ ವ್ಯಕ್ತಿಯಿಂದ ಇಬ್ಬರು, ಪೇಷೆಂಟ್ 993ರಿಂದ ಒಬ್ಬರು, ಪೇಷೆಂಟ್ 627 ರಿಂದ ಒಬ್ಬರು, ಗುಜರಾತ್ ಪ್ರಯಾಣದಿಂದ ಒಬ್ಬರು, ಪೇಷೆಂಟ್ 1398 ರ ಸೋಂಕಿತನಿಂದ ನಾಲ್ವರಿಗೆ ಸೋಂಕು ಬಂದಿರುತ್ತದೆ. ಬಳ್ಳಾರಿಯಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ. ಬೆಂಗಳೂರಿನಲ್ಲಿ ಒಬ್ಬರಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ.